ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಭಾಗ್ಯ' ಘೋಷಣೆ ಸಾಲದು, ಅನುಷ್ಠಾನಕ್ಕೆ ತನ್ನಿ: ಕಾಗೋಡು

By Mahesh
|
Google Oneindia Kannada News

ಬೆಳಗಾವಿ, ಜೂ,28: ಕುಂದಾನಗರಿ ಮತ್ತೊಮ್ಮೆ ಮುಂಗಾರು ಅಧಿವೇಶನಕ್ಕೆ ಸಜ್ಜಾಗಿದೆ. ಸೋಮವಾರದಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಗುಡುಗು, ಮಿಂಚು, ಸಿಡಿಲಿನ ಆರ್ಭಟ ಕೇಳಿ ಬಂದರೂ ಅಚ್ಚರಿ ಏನಿಲ್ಲ.

ರೈತರ ಸಮಸ್ಯೆ, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಏನಾದರೂ ನಡೆದರೆ ಅದು ಪವಾಡವೇ ಸರಿ. ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಕಾಂಗ್ರೆಸ್ ವಿರುದ್ಧ ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡು ಸದನಕ್ಕೆ ನುಗ್ಗಲು ಸಜ್ಜಾಗಿವೆ. ಏನೇನಾಗುವುದೋ ತಪ್ಪದೇ ಒನ್ ಇಂಡಿಯಾ ಓದುತ್ತಿರಿ. [40 ದಿನದ ಅಧಿವೇಶನಕ್ಕೆ 49 ಕೋಟಿ ಖರ್ಚು]

ಇಲ್ಲಿನ ಸುವರ್ಣಸೌಧದಲ್ಲಿ ಪ್ರಾರಂಭವಾಗಲಿರುವ ಅಧಿವೇಶನ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಕಾಗೋಡು ತಿಮ್ಮಪ್ಪ ಅವರು, ಅಧಿವೇಶನದಲ್ಲಿ ಮಂಡನೆಯಾಗುವ ವಿಧೇಯಕಗಳು, ಅಧಿವೇಶನದ ವೇಳಾಪಟ್ಟಿ ವಿವರಗಳನ್ನು ನೀಡಿದರು. [5 ಯೋಜನೆಗೆ ಸರ್ಕಾರದ ಒಪ್ಪಿಗೆ, 3 ಸಾವಿರ ಉದ್ಯೋಗ ಸೃಷ್ಟಿ]

ಇದೇ ವೇಳೆ ಅಗತ್ಯ ಕಂಡು ಬಂದರೆ ಮನೆಯ ಯಜಮಾನನಾಗಿ ಸರ್ಕಾರದ ವಿರುದ್ದ ಚಾಟಿ ಬೀಸಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಂದಿನ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. [ಬೆಳಗಾವಿಯಿಂದ ಸ್ಪೈಸ್‌ ಜೆಟ್ ಹಾರಾಟ]

ಭಾಗ್ಯಗಳ ಬಗ್ಗೆ : ಸರ್ಕಾರದ ಜನಪ್ರಿಯ ಯೋಜನೆಗಳು ಜನರನ್ನು ತಲುಪಬೇಕು. ಯೋಜನೆಗಳ ಘೋಷಣೆಯಷ್ಟೇ ಸಾಲದು. ಅದರ ಅನುಷ್ಠಾನವೂ ಮುಖ್ಯ ಎಂದರು. ನಾನು ಮನೆಯ ಯಜಮಾನನಾಗಿ ಏನು ಹೇಳಬೇಕೋ ಅದನ್ನೇ ಹೇಳೆಯೇ ತಿರುತ್ತೇನೆ. ಚುನಾವಣೆಯಲ್ಲಿ ಟೋಪಿ ಹಾಕೊಕೊಂಡು ಗೆದ್ದು ಬಂದವನಲ್ಲ.[ಲಂಚ ನೀಡದೆ ಬೆಳಗಾವಿಯಲ್ಲೊಂದು ಮನೆ ಮಾಡಿ!]

ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ. ಮಾತಿಗೆ ತಪ್ಪಿದಾಗ ಏನು ಹೇಳಬೇಕೋ ಮುಲಾಜಿಲ್ಲದೆ ಹೇಳುವೆ ಎಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.ಕಬ್ಬು ಬೆಳೆಗಾರರ ಸಮಸ್ಯೆ, ಅಧಿವೇಶನದ ಅವಧಿ, ವಿಧೇಯಕಗಳು, ಭದ್ರತಾ ವ್ಯವಸ್ಥೆ ಬಗ್ಗೆ ಇನ್ನಷ್ಟು ವಿವರ ಮುಂದಿದೆ...[ಎಲ್ಲ ಜಿಲ್ಲಾ ಕೇಂದ್ರದಲ್ಲೂ ಉಚಿತ ವೈ ಫೈ]

ನಾನು ಪ್ರತಿಪಕ್ಷದ ನಾಯಕರ ಕೆಲಸ ಮಾಡುವುದಿಲ್ಲ

ನಾನು ಪ್ರತಿಪಕ್ಷದ ನಾಯಕರ ಕೆಲಸ ಮಾಡುವುದಿಲ್ಲ

ಜನರಿಗೆ ಸ್ಪಂದಿಸುವುದು ಪ್ರತಿಯೊಂದು ಸರ್ಕಾರದ ಜವಾಬ್ದಾರಿ. ನಾನು ಪ್ರತಿಪಕ್ಷದ ನಾಯಕರ ಕೆಲಸ ಮಾಡುವುದಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಮಾಡಬೇಕಾದ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು. ಅರಣ್ಯ ಭೂಮಿ ಹಕ್ಕು ಕಾಯ್ದೆ ಅನುಷ್ಟಾನವಾಗಬೇಕೆಂಬುದು ತಮ್ಮ ಆಶಯ. ಸಮಾಜ ಕಲ್ಯಾಣ ಸಚಿವರಿಗೆ ಇದರ ಬಗ್ಗೆ ಪತ್ರ ಬರೆದು ಈಗಾಗಲೇ ತಿಳಿಸಿದ್ದೇನೆ. ಅಧಿಕಾರಿಗಳು ಅದಷ್ಟು ಬೇಗ ಈ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಬೇಕೆಂದು

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

ಕಬ್ಬು ಬೆಳೆಗಾರರ ಸಮಸ್ಯೆ ಇಲ್ಲವೇ ರೈತರ ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಮಾಡಿಕೊಳ್ಳುವುದೇ ಪರಿಹಾರವಾಗುವುದಿಲ್ಲ. ಬೆಳಗಾವಿ ಅಧಿವೇಶನದ ವೇಳೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಯಾವುದೇ ಸಂಬಂಧವಿಲ್ಲ. ಇದೊಂದು ಕಾಕತಾಳೀಯ ಅಷ್ಟೇ. ಸಾಯುತ್ತೇರೆಂದು ಹುಟ್ಟಿಸುವುದನ್ನು ನಿಲ್ಲಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು

10 ದಿನಗಳ ಕಾಲ ಅಧಿವೇಶನ

10 ದಿನಗಳ ಕಾಲ ಅಧಿವೇಶನ

ಸುವರ್ಣಸೌಧದಲ್ಲಿ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದ ಹತ್ತು ದಿನಗಳ ಕಲಾಪ ಬೆಂಗಳೂರಿನಲ್ಲಿ 24 ರಿಂದ ಪ್ರಾರಂಭವಾಗಲಿದೆ. ಬಿಬಿಎಂಪಿ ಚುನಾವಣೆಗೂ ಅಧಿವೇಶನಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆಯನ್ನು ಸಂಬಂಧ ಪಟ್ಟವರು ನೋಡಿಕೊಳ್ಳುವರು. ಜನರ ಸಮಸ್ಯೆಗಳು ಮುಖ್ಯವಾಗಬೇಕೇ ಹೊರತು ಚುನಾವಣೆಯಲ್ಲ ಎಂದು ಅಭಿಪ್ರಾಯಪಟ್ಟರು.

ಹಲವು ವಿಧೇಯಕ ಮಂಡನೆ

ಹಲವು ವಿಧೇಯಕ ಮಂಡನೆ

* 2015 ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ( ತಿದ್ದುಪಡಿ) ವಿಧೇಯಕ
* 2015 ನೇ ಸಾಲಿನ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ( ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ವಿಧೇಯಕ
* ಕರ್ನಾಟಕ ಕಾಕಂಬಿ ನಿಯಂತ್ರಣ ವಿಧೇಯಕ 2014
* ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ 2015
* ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ 2015

ಕುತೂಹಲಕಾರಿ ಖಾಸಗಿ ವಿಧೇಯಕಗಳು

ಕುತೂಹಲಕಾರಿ ಖಾಸಗಿ ವಿಧೇಯಕಗಳು

ಬೆಂಗಳೂರು ವಿಶ್ವವಿದ್ಯಾನಿಲಯವನ್ನು ವಿಭಜಿಸುವ ವೇಳೆ ವರನಟ ಡಾ, ರಾಜ್‌ಕುಮಾರ್ ಹೆಸರು ಇಡುವ ಬಗ್ಗೆ ಹಾಗೂ ವಿಧಾನಪರಿಷತ್ತನ್ನು ವಿಸರ್ಜಿನೆ ಮಾಡಬೇಕೆಂದು ಸದಸ್ಯ ಎಂ.ಟಿ ಕೃಷ್ಣಪ್ಪ, ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅದ್ದೂರಿ ವಿವಾಹಗಳಿಗೆ ನಿರ್ಬಂಧಿಸುವಸುವ ಖಾಸಗಿ ವಿಧೇಯಕವನ್ನು ಸ್ವೀಕರಿಸಲಾಗಿದೆ. 2015- 16 ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ 28 ಇಲಾಖಾ ಬೇಡಿಕೆಗಳ ಮೇಲೆ ಚರ್ಚೆ ನಡೆಯಲಿದೆ.

ಸದನದ ಹೊರಗಿನ ಹವಾಮಾನ ಹೇಗಿದೆ

ಸದನದ ಹೊರಗಿನ ಹವಾಮಾನ ಹೇಗಿದೆ

* ಅಧಿವೇಶನದ ವೇಳೆ 110ಕ್ಕೂ ಅಧಿಕ ವಿವಿಧ ಸಂಘಟನೆಗಳು ಪ್ರತಿಭೆಟನೆಗೆ ಮುಂದಾಗಿದೆ.
* 15 ಸಂಘಟನೆಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಅನುಮತಿ ನೀಡಲಾಗಿದೆ ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಎಸ್‌. ರವಿ ತಿಳಿಸಿದ್ದಾರೆ.
* ರಾಷ್ಟ್ರೀಯ ಹೆದ್ದಾರಿ ತಡೆಗೆ ಅವಕಾಶ ನೀಡುವುದಿಲ್ಲ, ಆತ್ಮಹತ್ಯೆ ಯತ್ನ ನಿಯಂತ್ರಣಕ್ಕೆ ಆತ್ಮಹತ್ಯಾ ನಿಗ್ರಹ ದಳ ಬಳಕೆ, ಕಲ್ಲು ತೂರಾಟ ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗಿದೆ.
* ಭದ್ರತಾ ಕಾರ್ಯಕ್ಕೆ ಒಟ್ಟು 5 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.

ಅತ್ಯಾಧುನಿಕ ಡ್ರೋನ್‌ ಕ್ಯಾಮೆರಾ ಬಳಕೆ

ಅತ್ಯಾಧುನಿಕ ಡ್ರೋನ್‌ ಕ್ಯಾಮೆರಾ ಬಳಕೆ

ವಿಧಾನ ಸೌಧದ ಸುತ್ತಾ 80ಕ್ಕೂ ಅಧಿಕ ಸಿಸಿಟಿವಿ ಕೆಮೆರಾ ಅಲ್ಲದೆ, ವಿಡಿಯೋ ಚಿತ್ರೀಕರಣ, ಇನ್ನೊಂದನ್ನು ಸ್ಥಿರ ಛಾಯಾಚಿತ್ರ ತೆಗೆಯಲು ತೀವ್ರ ನಿಗಾ ವಹಿಸಲು ಅತ್ಯಾಧುನಿಕ ಡ್ರೋನ್‌ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ.

ಅಧಿವೇಶನದ ಸಂದರ್ಭದಲ್ಲೇ ಬೆಳಗಾವಿಯ ಅಶೋಕ್ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಹಾಗೂ ರಾಣಿ ಚೆನ್ನಮ್ಮ ಸರ್ಕಲ್ ಗಳಲ್ಲಿ ಫ್ಲೇ ಓವರ್ ನಿರ್ಮಿಸುವ ಬಗ್ಗೆ ಯೋಜನೆ ರೂಪುಗೊಳ್ಳುತ್ತಿದೆ.
ಕುಂದಾನಗರಿಯಲ್ಲಿ ಕಲಾಪ

ಕುಂದಾನಗರಿಯಲ್ಲಿ ಕಲಾಪ

ಕರ್ನಾಟಕ ಅಸೆಂಬ್ಲಿಯಲ್ಲಿ 224 ಸದಸ್ಯರಿದ್ದು, 121 ಕಾಂಗ್ರೆಸ್, 40 ಬಿಜೆಪಿ, 40 ಜೆಡಿಎಸ್ ಹಾಗೂ 21 ಮಂದಿ ಇತರೆ ಸದಸ್ಯರಿದ್ದಾರೆ. ಸುಮಾರು 380 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾದ ಸುವರ್ಣ ವಿಧಾನ ಸೌಧದಲ್ಲಿ ಮುಂಗಾರು ಅಧಿವೇಶನ ನಡೆಸಲಾಗುತ್ತಿದೆ. ಮಿಕ್ಕಂತೆ ಸೌಧದತ್ತ ಯಾರೂ ಸುಳಿಯುವುದಿಲ್ಲ. ಗಡಿಭಾಗದಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ತೋರಿಸಲು ಕುಂದಾನಗರಿಯಲ್ಲಿ ಕಲಾಪಗಳನ್ನು ನಡೆಸಲಾಗುತ್ತಿದೆ.

English summary
Opposition BJP and JDS are set to confront the Congress government on a host of issues, including farmers' suicide, as the monsoon session of Karnataka legislature begins here tomorrow (Jun.29).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X