ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರ ಪಾಲಾಗಲಿದೆ?
ಬೆಂಗಳೂರು, ಮೇ 30: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬೆಳಗಾವಿಗೆ ಎಷ್ಟರಮಟ್ಟಿಗೆ ಪ್ರಾಶಸ್ತ್ಯ ಸಿಗಲಿದೆ, ಯಾರಿಗೆ ಜಿಲ್ಲಾ ಉಸ್ತುವಾರಿ ಸಿಗಲಿದೆ? ಎಂಬ ಕುತೂಹಲ ಮುಂದುವರೆದಿದೆ.
ಕರ್ನಾಟಕ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಒಂದು ಕಡೆ ಲಾಬಿ ಜೋರಾಗಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನ ತಪ್ಪಿಸಲು ಜಾರಕಿಹೊಳೆ ಬಣ ಯತ್ನಿಸುತ್ತಿರುವ ಸುದ್ದಿ ಇದೆ.
ಯಶ ಕಂಡರೂ ಅಧಿಕಾರವಿಲ್ಲ: ಈ ಬಾರಿ ಚುನಾವಣೆಯಲ್ಲಿ 18 ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 8 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಜಯ ಗಳಿಸಿದೆ. 2013ರ ಫಲಿತಾಂಶದಂತೆ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಕಾಂಗ್ರೆಸ್ 6 ಹಾಗೂ ಬಿಜೆಪಿ 8, ಪಕ್ಷೇತರರು 2, ಇತರೆ 2 ಗಳಿಸಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಲು ಜಾರಕಿಹೊಳಿ ಅಡ್ಡಗಾಲು?
ಜಿಲ್ಲಾ ಉಸ್ತುವಾರಿ : ಈ ಜವಾಬ್ದಾರಿಯನ್ನು ಸತೀಶ್ ಜಾರಕಿಹೊಳಿ ಅವರಿಗೆ ವಹಿಸಲಿ, ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗೆ ಜಾರಕಿಹೊಳಿ ಸೋದರರು ಶ್ರಮಿಸಿದ್ದಾರೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದಲ್ಲದೆ, ಜಿಲ್ಲೆಯ ಬೈಲಹೊಂಗಲದ ಮಹಾಂತೇಶ್ ಕೌಜಲಗಿ, ಚಿಕ್ಕೋಡಿಯ ಗಣೇಶ್ ಹುಕ್ಕೇರಿ, ಅಥಣಿಯ ಮಹೇಶ್ ಕುಮಠಳ್ಳಿ ಕೂಡಾ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.
ಬೆಳಗಾವಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:
ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
ನಿಪ್ಪಾಣಿ |
ಶಶಿಕಲಾ
ಜೊಲ್ಲೆ | 87006 | ಬಿಜೆಪಿ |
ಕಾಕಾಸಾಹೇಬ
ಪಾಟೀಲ |
ಕಾಂಗ್ರೆಸ್ | 78500 |
ಚಿಕ್ಕೋಡಿ-ಸದಲಗ |
ಗಣೇಶ
ಹುಕ್ಕೇರಿ | 91467 |
ಕಾಂಗ್ರೆಸ್ | ಅಣ್ಣಾಸಾಹೇಬ ಜೊಲ್ಲೆ | ಬಿಜೆಪಿ | 80898 |
ಅಥಣಿ |
ಮಹೇಶ
ಕುಮಠಳ್ಳಿ | 82094 | ಕಾಂಗ್ರೆಸ್ |
ಲಕ್ಷ್ಮಣ
ಸವದಿ | ಬಿಜೆಪಿ | 79763 |
ಕಾಗವಾಡ |
ಶ್ರೀಮಂತ
ಪಾಟೀಲ | 83060 | ಕಾಂಗ್ರೆಸ್ |
ಬರಮಗೌಡ
ಕಾಗೆ | ಬಿಜೆಪಿ | 50,118 |
ಕುಡಚಿ
(ಎಸ್
ಸಿ) | ಪಿ.ರಾಜೀವ್ | 67781 | ಬಿಜೆಪಿ |
ಅಮಿತ
ಘಾಟಗೆ | ಕಾಂಗ್ರೆಸ್ | 52,773 |
ರಾಯಬಾಗ (ಎಸ್ ಸಿ) | ದುರ್ಯೋಧನ ಐಹೊಳೆ | 67502 | ಬಿಜೆಪಿ |
ಪ್ರದೀಪ
ಮಾಳಗಿ | ಕಾಂಗ್ರೆಸ್ | 50954 |
ಹುಕ್ಕೇರಿ |
ಉಮೇಶ್
ಕತ್ತಿ | 83588 | ಬಿಜೆಪಿ |
ಎ.
ಬಿ
ಪಾಟೀಲ | ಕಾಂಗ್ರೆಸ್ | 68203 |
ಅರಬಾವಿ | ಬಾಲಚಂದ್ರ ಜಾರಕಿಹೊಳಿ | 96144 | ಬಿಜೆಪಿ |
ಭೀಮಪ್ಪ
ಗಡಾಡ | ಜೆಡಿಎಸ್ | 48,816 |
ಗೋಕಾಕ |
ರಮೇಶ
ಜಾರಕಿಹೊಳಿ | 90249 | ಕಾಂಗ್ರೆಸ್ |
ಅಶೋಕ
ಪೂಜಾರಿ | ಬಿಜೆಪಿ | 75969 |
ಯಮಕನಮರಡಿ (ಎಸ್ ಟಿ) |
ಸತೀಶ
ಜಾರಕಿಹೊಳಿ | 73512 | ಕಾಂಗ್ರೆಸ್ |
ಮಾರುತಿ
ಅಷ್ಟಗಿ |
ಬಿಜೆಪಿ | 70662 |
ಬೆಳಗಾವಿ
ಉತ್ತರ |
ಅನಿಲ
ಬೆನಕೆ | 79060 | ಬಿಜೆಪಿ |
ಫಿರೋಜ್
ಸೇಠ್ |
ಕಾಂಗ್ರೆಸ್ | 61793 |
ಬೆಳಗಾವಿ
ದಕ್ಷಿಣ | ಅಭಯ ಪಾಟೀಲ | 84498 | ಬಿಜೆಪಿ |
ಎಂ.
ಡಿ
ಲಕ್ಷ್ಮೀನಾರಾಯಣ |
ಕಾಂಗ್ರೆಸ್ | 25806 |
ಬೆಳಗಾವಿ
ಗ್ರಾಮಾಂತರ |
ಲಕ್ಷ್ಮೀ
ಹೆಬ್ಬಾಳ್ಕರ್ | 1,02,040 | ಕಾಂಗ್ರೆಸ್ |
ಸಂಜಯ
ಪಾಟೀಲ |
ಬಿಜೆಪಿ | 50316 |
ಖಾನಾಪುರ |
ಡಾ.
ಅಂಜಲಿ
ನಿಂಬಾಳ್ಕರ್ | 36649 | ಕಾಂಗ್ರೆಸ್ |
ವಿಠಲ
ಹಲಗಕೇರ್ |
ಬಿಜೆಪಿ | 31516 |
ಕಿತ್ತೂರು |
ಮಹಾಂತೇಶ
ದೊಡಗೌಡ್ರ | 73155 | ಬಿಜೆಪಿ |
ಡಿ.
ಬಿ
ಇನಾಂದರ |
ಕಾಂಗ್ರೆಸ್ | 40293 |
ಬೈಲಹೊಂಗಲ |
ಮಹಾಂತೇಶ
ಕೌಜಲಗಿ | 47040 | ಕಾಂಗ್ರೆಸ್ |
ಜಗದೀಶ
ಮೆಟಗುಡ್ಡ |
ಪಕ್ಷೇತರ | 41,918 |
ಸವದತ್ತಿ
ಯಲ್ಲಮ್ಮ |
ಆನಂದ
ಮಾಮನಿ | 62480 | ಬಿಜೆಪಿ |
ಆನಂದ್
ಚೋಪ್ರಾ |
ಪಕ್ಷೇತರ | 56189 |
ರಾಮದುರ್ಗ | ಮಹಾದೇವಪ್ಪ ಯಾದವಾಡ | 68349 | ಬಿಜೆಪಿ | ಅಶೋಕ ಪಟ್ಟಣ | ಕಾಂಗ್ರೆಸ್ | 65474 |