ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕಾಕ್ ಕ್ಷೇತ್ರದ ಉಪಚುನಾವಣೆ: ಕಣದಲ್ಲಿ ಅಚ್ಚರಿಯ ಹೆಸರು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ: ಈಗಾಗಲೇ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಕುಂದಾ ನಗರಿ ಬೆಳಗಾವಿ ಜಿಲ್ಲೆಯ ರಾಜಕಾರಣ ರಾಜ್ಯದ ಜನರ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಮುಖ್ಯ ಕಾರಣ ಎನ್ನುವ ಆರೋಪ ಜೆಡಿಎಸ್, ಕಾಂಗ್ರೆಸ್ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇತ್ತೀಚಿನ ರಾಜಕಾರಣ ಬೆಳವಣಿಗೆಗಳು ಇಲ್ಲಿನ ಜಾರಕಿಹೊಳಿ ಕುಟುಂಬದ ನಡುವಿನ ಒಡಕನ್ನು ಚರ್ಚೆಯ ವಿಚಾರವನ್ನಾಗಿಸಿದೆ. ಮುಖ್ಯವಾಗಿ ಇದು ರಮೇಶ್ ಮತ್ತು ಸುರೇಶ್ ಜಾರಕಿಹೊಳಿ ಸಹೋದರರ ನಡುವಣ ಸವಾಲ್ ಎಂದೇ ಪರಿಗಣಿಸಬಹುದು.

ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಅನರ್ಹತೆಗೆ ಒಳಗಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ಈ ಬಾರಿ ಸೋಲಿನ ರುಚಿ ತೋರಿಸಲು ಶಾಸಕ ಸತೀಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ. ಇನ್ನು ಸುಪ್ರೀಂಕೋರ್ಟ್‌ನಿಂದ ನಿರೀಕ್ಷಿತ ತೀರ್ಪು ಸಿಗದೆ ರಮೇಶ್ ಕೊಂಚ ನಿರಾಶರಾಗಿದ್ದಾರೆ. ಇದರಿಂದ ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗಿದ್ದು ಅವರಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಭರವಸೆಗೆ ವ್ಯತಿರಿಕ್ತ ತೀರ್ಪು ಪ್ರಕಟವಾದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಬಗ್ಗೆಯೂ ಕೂಡ ರಮೇಶ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Karnataka By Elections 2019 Gokag Constituency Ramesh Jarkiholi Wife Can Contest

ರಮೇಶ್ ಅಳಿಯ ಅಂಬಿರಾವ್ ಸ್ಪರ್ಧೆ ಡೌಟು..!
ಗೋಕಾಕ್ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಉತ್ತರಾಧಿಕಾರಿಯಂತಿದ್ದಾರೆ. ರಮೇಶ ಅವರ ಚುನಾವಣೆಯಲ್ಲಿ ತೆರೆಮರೆಯಲ್ಲಿನ ಅವರ ಪಾತ್ರ ಅತ್ಯಂತ ಮಹತ್ವದ್ದು. ಈ ಕಾರಣದಿಂದ ತಮ್ಮ ಪತ್ನಿಯ ಸಹೋದರ ಅಂಬಿರಾವ್ ಅವರಿಗೆ ಕಣಕ್ಕಿಳಿಸುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಆದರೆ ಸುಪ್ರೀಂ ತೀರ್ಪು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆಯೂ ಇದೆ. ಆದರೆ ಒಂದು‌ ಮೂಲದ ರಮೇಶ್ ಸ್ಪರ್ಧೆ ಸಾಧ್ಯವಾಗದಿದ್ದರೆ, ಅವರ ಬದಲು ಅಂಬಿರಾವ್ ಕಣಕ್ಕಿಳಿಸಲು ರಮೇಶ್ ಅವರಿಗೂ ಆಸಕ್ತಿ ಇದೆ ಎಂದು ಹೇಳಲಾಗುತ್ತಿದೆ.

ರಮೇಶ್ ಪತ್ನಿ ಜಯಶ್ರೀ ಕಣಕ್ಕೆ..?

ಅಂಬಿರಾವ್ ಅವರು ಗೋಕಾಕ್ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಜೊತೆಗೆ ತೆರೆಯ ಮರೆಯಲ್ಲಿ ಚುನಾವಣಾ ತಂತ್ರಗಾರಿಕೆ ಹೆಣೆಯುವಲ್ಲಿ ಅಂಬಿರಾವ್ ಪ್ರವೀಣರು. ಎಲ್ಲಕ್ಕಿಂತ ಮುಖ್ಯವಾಗಿ ರಮೇಶ್ ಅವರಿಗಿಂತ ಅಂಬಿರಾವ್ ಅವರನ್ನೆ ಸತೀಶ್ ಮತ್ತು ಲಖನ್ ಜಾರಕಿಹೊಳಿ ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಅಂಬಿರಾವ್ ಸ್ಪರ್ಧೆಗೆ ಕೊಂಚ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಆದರೆ ತಮ್ಮ ಸಹೋದರಿ ಜಯಶ್ರೀ ಅವರನ್ನು ಕಣಕ್ಕಿಳಿಸುವ ಕುರಿತು ಅಂಬಿರಾವ್ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಸಹೋದರಿಯ ಗೆಲುವಿನಲ್ಲಿ ತಾವು ತೆರೆಮರೆಯಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ. ಮತ್ತು ಅಂಬಿರಾವ್ ಲೆಕ್ಕಾಚಾರದ ಪ್ರಕಾರ ರಮೇಶ್ ಸ್ಪರ್ಧೆ ಸಾಧ್ಯವಾಗದಿದ್ದರೆ ಜಯಶ್ರೀ ಅವರು ಅಖಾಡಕ್ಕೆ ಇಳಿಯುವುದು ಹೆಚ್ಚು ಪರಿಣಾಮಕಾರಿ. ಗೋಕಾಕ್ ಕ್ಷೇತ್ರ ಸಹೋದರರ ನೇರ ಹಣಾಹಣಿಗೆ ಸಾಕ್ಷಿಯಾಗಬಹುದು ಇಲ್ಲವೇ, ಅತ್ತಿಗೆ-ಮೈದುನರ ಮಧ್ಯೆ ಪೈಪೋಟಿಯೂ ನಡೆಯಬಹುದು. ಯಾರೇ ಸ್ಪರ್ಧಾ ಕಣಕ್ಕಿಳಿದರೂ ಕೂಡ ರಮೇಶ್-ಸತೀಶ್ ಸಹೋದರರ ಪ್ರತಿಷ್ಠೆ ಕಣವಾಗುವುದಂತೂ ಸತ್ಯ.

English summary
Disqualified MLA Ramesh Jarkiholi's wife Jayashri could contest from Gokak constituency in the by elections if Ramesh not able to contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X