ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಗಲ್ ಟಿಟಿಎಸ್ ನಲ್ಲಿ ಕನ್ನಡ ಧ್ವನಿ; ಬೆಳಗಾವಿ ಅಂಧನ ಸಾಧನೆ

By Manjunath Sk
|
Google Oneindia Kannada News

ಬೆಳಗಾವಿ, ಆಗಸ್ಟ್ 31: ಅಂಧರು ಯಾವುದೇ ತೊಡಕಿಲ್ಲದೇ, ಸ್ವತಂತ್ರವಾಗಿ ಆಂಡ್ರಾಯ್ಡ್ ಫೋನ್ ಬಳಸಲು ನೆರವಾಗಲೆಂದು ಇರುವ ಗೂಗಲ್ ಟಿಟಿಎಸ್ ತಂತ್ರಾಂಶದಲ್ಲಿ ಕನ್ನಡ ಧ್ವನಿ ಸೇರಿಸಲು ಬೆಳಗಾವಿಯ ಅಂಧ ವ್ಯಕ್ತಿಯೊಬ್ಬರು ಕೈಗೊಂಡ ಅಭಿಯಾನ ಫಲ ನೀಡಿದೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ಗೂಗಲ್ ಟೆಕ್ಸ್ಟ್‌ ಟು ಸ್ಪೀಚ್ ತಂತ್ರಾಂಶದಲ್ಲಿ ಕನ್ನಡ ಭಾಷೆ, ಧ್ವನಿ ಸೇರಿಸಲು ಬೆಳಗಾವಿ ಬೈಲಹೊಂಗಲದ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕ ಸಿದ್ದಲಿಂಗೇಶ್ವರ ಇಂಗಳಗಿ ಅವರು ಆನ್ ಲೈನ್ ನಲ್ಲಿ ಅಭಿಯಾನ ಆರಂಭಿಸಿದ್ದರು. ಚೇಂಜ್ ಡಾಟಾ ಆರ್ಗ್ ವೆಬ್ ತಾಣದಲ್ಲಿ ಪಿಟಿಶನ್ ಹಾಕಿದ್ದರು. ಅವರ ಈ ಅಭಿಯಾನಕ್ಕೆ ಇದೀಗ ಫಲ ಸಿಕ್ಕಿದೆ. ಕನ್ನಡ ಭಾಷೆಯನ್ನು ಕಿರುತಂತ್ರಾಂಶಕ್ಕೆ ಸೇರಿಸಲಾಗಿದೆ.

ಟಿಕ್ ಟಾಕ್ ಹೋಯ್ತು ಸ್ನ್ಯಾಪ್ ಶಾಟ್ ಬಂತು: ಕನ್ನಡಿಗರ ದೇಸಿ ವೇದಿಕೆಟಿಕ್ ಟಾಕ್ ಹೋಯ್ತು ಸ್ನ್ಯಾಪ್ ಶಾಟ್ ಬಂತು: ಕನ್ನಡಿಗರ ದೇಸಿ ವೇದಿಕೆ

ಏನಿದು ಗೂಗಲ್ ಟಿಟಿಎಸ್: ಅಂಧರಿಗೆ ಆಂಡ್ರಾಯ್ಡ್ ಫೋನ್ ಪರದೆಯಲ್ಲಿ ಕಾಣುವ ಪಠ್ಯವನ್ನು ಇದು ಧ್ವನಿ ಮೂಲಕ ಓದಿ ಹೇಳುತ್ತದೆ. ಇದರಿಂದ ಅಂಧರು ಇತರರ ಸಹಾಯವಿಲ್ಲದೆ ಸ್ವತಂತ್ರವಾಗಿ ಆಂಡ್ರಾಯ್ಡ್ ಫೋನ್ ಬಳಸಬಹುದಾಗಿದೆ.

 Belagavi: Kannada Voice Added To Google TTS By An Effort Of Blind Man

"2017ರಲ್ಲಿ ಈ ಕುರಿತು ಅಭಿಯಾನ ಆರಂಭಿಸಿದ್ದೆ. ಇಂಗ್ಲಿಷ್, ಹಿಂದಿ ಹಾಗೂ ವಿದೇಶಿ ಭಾಷೆ ಧ್ವನಿಗಳು ಮಾತ್ರ ಟಿಟಿಎಸ್ ನಲ್ಲಿದ್ದವು, ಅಲ್ಲಿ ಕನ್ನಡ ಭಾಷೆ ಬೇಕು ಎಂದು ನಡೆಸಿದ ಅಭಿಯಾನದಲ್ಲಿ ರಾಜ್ಯ, ಹೊರ ರಾಜ್ಯ, ಮತ್ತು ವಿದೇಶಗಳಿಂದ ಹಲವು ಮಂದಿ ಅಂಧರು ಪಾಲ್ಗೊಂಡು ಬೆಂಬಲಿಸಿದ್ದರು. ಅರ್ಜಿಗೆ 3317 ಜನ ಸಹಿ ಹಾಕಿದ್ದರು. ಇದೀಗ ಫಲ ಸಿಕ್ಕಿದೆ. ದೋಷಗಳನ್ನು ಗುರುತಿಸಿ ಇ-ಮೇಲ್ ಮೂಲಕ ಫೀಡ್ ಬ್ಯಾಕ್ ಸಲ್ಲಿಸುತ್ತಿದ್ದೇನೆ. ಗೂಗಲ್ ನಿಂದ ಸ್ಪಂದನೆ ಸಿಗುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು ಸಿದ್ದಲಿಂಗೇಶ್ವರ ಇಂಗಳಗಿ. ಈ ಅಭಿಯಾನದ ಪರಿಣಾಮದಿಂದ ಕನ್ನಡದ ಜೊತೆ ಇತರ ಭಾರತೀಯ ಪ್ರಾದೇಶಿಕ ಭಾಷೆಗಳು ಕೂಡ ಸೇರಿಕೊಳ್ಳುತ್ತಿವೆ.

English summary
Online campaign by a belagavi blind man to add Kannada voice to Google TTS software succeeded. Kannada voice added to this software
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X