ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಪರಿಷತ್‌ ಉಪಸಭಾಪತಿಯಾಗಿ ಜೆಡಿಎಸ್‌ನ ಧರ್ಮೇಗೌಡ ಆಯ್ಕೆ ಖಚಿತ

|
Google Oneindia Kannada News

ಬೆಳಗಾವಿ, ಡಿಸೆಂಬರ್ 18: ವಿಧಾನಪರಿಷತ್‌ನ ಉಪಸಭಾಪತಿ ಆಗಿ ಜೆಡಿಎಸ್‌ನ ಧರ್ಮೇಗೌಡ ಅವರು ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

ಮತ್ತೆ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ ಎನ್‌.ಮಹೇಶ್‌ ಮತ್ತೆ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ ಎನ್‌.ಮಹೇಶ್‌

ಜೆಡಿಎಸ್‌ನ ಧರ್ಮೇಗೌಡ ಅವರು ವಿಧಾನಪರಿಷತ್‌ ಉಪಸಭಾಪತಿ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನವಾಗಿತ್ತು. ಧರ್ಮೇಗೌಡ ಹೊರತು ಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸಿಲ್ಲ.

ಸರ್ಕಾರ ಬಿದ್ರೆ ಅದಕ್ಕೆ ಕಾಂಗ್ರೆಸ್ ಹೊಣೆ, ಜೆಡಿಎಸ್ ಅಲ್ಲ: ಬಸವರಾಜ ಹೊರಟ್ಟಿ ಸರ್ಕಾರ ಬಿದ್ರೆ ಅದಕ್ಕೆ ಕಾಂಗ್ರೆಸ್ ಹೊಣೆ, ಜೆಡಿಎಸ್ ಅಲ್ಲ: ಬಸವರಾಜ ಹೊರಟ್ಟಿ

ಧರ್ಮೇಗೌಡ ಅವರಿಗೆ ಜೆಡಿಎಸ್‌ನ ಭೋಜೇಗೌಡ, ಶ್ರೀಕಂಠೇಗೌಡ, ಅಪ್ಪಾಜಿಗೌಡ, ಬಸವರಾಜ್ ಹೊರಟ್ಟಿ ಅವರು ಸೂಚಕರಾಗಿದ್ದರು. ಧರ್ಮೇಗೌಡ ಹೊರತು ಪಡಿಸಿ ಇನ್ಯಾರು ನಾಮಪತ್ರ ಹಾಕಿಲ್ಲವಾದ್ದರಿಂದ ಅವರು ಅವಿರೋಧವಾಗಿ ಉಪಸಭಾಪತಿಯಾಗಿ ಆಯ್ಕೆ ಆಗಲಿದ್ದಾರೆ.

JDSs Dharmegowda will become legislative house vice speaker

ಈ ಹಿಂದೆ ಉಪಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ಮರಿತಿಬ್ಬೇಗೌಡ ಅವರ ಹೆಸರುಗಳು ಕೇಳಿಬಂದಿದ್ದವು. ಈ ಮೂವರಲ್ಲಿ ಯಾರನ್ನೇ ಉಪಸಭಾಪತಿ ಮಾಡಿದರೆ ಅಸಮಾಧಾನ ಉಂಟಾಗಬಹುದು ಎಂಬ ಹಿನ್ನೆಲೆಯಲ್ಲಿ ಧರ್ಮೇಗೌಡರನ್ನು ಕಣಕ್ಕಿಳಿಸಲು ಜೆಡಿಎಸ್‌ ತೀರ್ಮಾನಿಸಿದೆ.

ಕುಮಾರಸ್ವಾಮಿ ಇರುವುದು ಹೆಬ್ಬೆಟ್ಟು ಒತ್ತುವುದಕ್ಕಲ್ಲ: ಹೊರಟ್ಟಿ ಅಸಮಾಧಾನ ಕುಮಾರಸ್ವಾಮಿ ಇರುವುದು ಹೆಬ್ಬೆಟ್ಟು ಒತ್ತುವುದಕ್ಕಲ್ಲ: ಹೊರಟ್ಟಿ ಅಸಮಾಧಾನ

ಧರ್ಮೇಗೌಡ ಅವರು ನಾಮಪತ್ರ ಸಲ್ಲಿಸಿದ ಬಳಿಕ ಬಸವರಾಜ ಹೊರಟ್ಟಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣದಲ್ಲಿ ಹೀಗೆ ಕೊನೆ ಕ್ಷಣದ ಬದಲಾವಣೆ ಆಗುತ್ತಲೇ ಇರುತ್ತವೆ. ಸಭಾಪತಿ ಸ್ಥಾನಕ್ಕೆ ನನ್ನ ಹೆಸರು ಇತ್ತು ಆದರೆ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸ್ಥಾನ ಒಲಿಯಿತು. ಈಗ ಅಪ್ಪಾಜಿಗೌಡ ಹಾಗೂ ಮರಿತಿಬ್ಬೇಗೌಡ ಅವರ ಹೆಸರುಗಳು ಕೇಳಿಬಂದಿತ್ತು ಆದರೆ ಧರ್ಮೇಗೌಡ ಅವರಿಗೆ ಸ್ಥಾನ ಒಲಿದಿದೆ ಎಂದರು.

English summary
JDS party's Dharmegowda will become legislative house's vice speaker for sure. He file nominations for the post and he is the only candidate who files nomination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X