ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಡಿಕೆಶಿ ಬಂಧಿಸಿ ನಮ್ಮಲ್ಲಿ ಯಾರನ್ನು ಹೀರೋ ಮಾಡಬೇಕು?"

|
Google Oneindia Kannada News

Recommended Video

ಅಚ್ಚರಿಯ ಹೇಳಿಕೆ ನೀಡಿದ ಬಿಜೆಪಿ ಸಚಿವ ಮಾಧುಸ್ವಾಮಿ..! | Oneindia Kannada

ಬೆಳಗಾವಿ, ಸೆಪ್ಟೆಂಬರ್ 04 : "ಡಿ. ಕೆ. ಶಿವಕುಮಾರ್ ಬಂಧಿಸಿ ನಮ್ಮಲ್ಲಿ‌ ಯಾರನ್ನು ಹೀರೋ ಮಾಡುವ ಅಗತ್ಯ ಬಿಜೆಪಿಗೆ ಇಲ್ಲಾ" ಎಂದು ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, "ಇಡಿ ಇಲಾಖೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು‌ ಬಂಧನ ಮಾಡಿರುವುದು ಸ್ವಾಭಾವಿಕ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ" ಎಂದರು.

ಡಿ.ಕೆ. ಶಿವಕುಮಾರ್ ಬಂಧನ : ಸಿದ್ದರಾಮಯ್ಯ ಹೇಳಿದ್ದೇನು?ಡಿ.ಕೆ. ಶಿವಕುಮಾರ್ ಬಂಧನ : ಸಿದ್ದರಾಮಯ್ಯ ಹೇಳಿದ್ದೇನು?

"ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಡಿ. ಕೆ. ಶಿವಕುಮಾರ್ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ಇಲ್ಲ. ಅವರನ್ನು ಬಂಧನ ಮಾಡಿಸಿ ಹೀರೋ ಮಾಡಿಸುವ ಅಗತ್ಯವೇ ಇಲ್ಲ" ಎಂದು ಪ್ರತಿಕ್ರಿಯಿಸಿದರು.‌

ಕನಕಪುರದಲ್ಲಿ ಅಘೋಷಿತ ಬಂದ್, ಬಿಗಿ ಪೊಲೀಸ್ ಬಂದೋಬಸ್ತ್ಕನಕಪುರದಲ್ಲಿ ಅಘೋಷಿತ ಬಂದ್, ಬಿಗಿ ಪೊಲೀಸ್ ಬಂದೋಬಸ್ತ್

JC Madhuswamy On DK Shivakumar Arrest

"ನಾವೇ ಮಾಡಿದ ಕಾನೂನು ಅವರನ್ನು ಬಂಧಿಸುವಂತೆ ಮಾಡಿದೆ. ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಬಂಧನಕ್ಕೆ ಬಿಜೆಪಿ ಹೊಣೆ ಎನ್ನುವುದು ತಪ್ಪು ಕಲ್ಪನೆ" ಎಂದು ಜೆ. ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಬಂಧನದ ಸಮಯದಲ್ಲಿ ಕೊನೆಯದಾಗಿ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು?ಬಂಧನದ ಸಮಯದಲ್ಲಿ ಕೊನೆಯದಾಗಿ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು?

ಹೇಳಿಕೆ ನೀಡದಂತೆ ಸೂಚನೆ : ಡಿ. ಕೆ. ಶಿವಕುಮಾರ್ ಬಂಧನದ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ನಾಯಕರಿಗೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಈಗಾಗಲೇ ಬಂಧನಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪ ಮಾಡುತ್ತಿದೆ.

ಡಿ. ಕೆ. ಶಿವಕುಮಾರ್‌ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಅವರು ಇದ್ದಾರೆ. ಅವರ ಆರೋಗ್ಯ ಸುಧಾರಣೆಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

English summary
BJP no need to project one person as hero by arrest D.K.Shivakumar said Small irrigation minister of Karnataka J.C.Madhuswamy. D.K.Shivakumar arrested by ED in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X