ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಮಾಲಾ ನನ್ನ ಹಿರಿಯ ಅಕ್ಕನಂತೆ: ಲಕ್ಷ್ಮೀ ಹೆಬ್ಬಾಳ್ಕರ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜೂನ್.17: ನಮ್ಮ ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಅಂದರೆ ಅದು ಉರುಳು ಸೇವೆ, ಹರಕೆ ಸೇವೆ ಮತ್ತು ಪಕ್ಷದ ಸೇವೆ ಎಂದು ಅರ್ಥ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷದ ಸೇವೆ ಮಾಡಿದ್ದಾರೆ ಎಂದು ಹೇಳಿದ್ದೆ.

ಆದರೆ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಶಾಸಕಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಜಯಮಾಲಾ ವಿರುದ್ಧ ಅಸಮಾಧಾನ, ಸಹಿ ಸಂಗ್ರಹಕ್ಕೆ ಮುಂದಾದ ನಾಯಕರುಜಯಮಾಲಾ ವಿರುದ್ಧ ಅಸಮಾಧಾನ, ಸಹಿ ಸಂಗ್ರಹಕ್ಕೆ ಮುಂದಾದ ನಾಯಕರು

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆ ರೀತಿಯ ಭಾವನೆಗಳು ನನ್ನ ಬಳಿಯಿಲ್ಲ. ಜಯಮಾಲಾ ಅವರ ಜೊತೆಯಲ್ಲಿ ನನ್ನ ವೈಯಕ್ತಿಕ ಸಂಬಂಧ ಅನೋನ್ಯವಾಗಿದೆ.
ನನ್ನ ಹಿರಿಯ ಅಕ್ಕನಂತೆ ಜಯಮಾಲಾ ಅವರು ಇದ್ದಾರೆ.

Jayamala is my eldest sister: Lakshmi hebbalkar

ಸದಾ ನನ್ನ ಬೆನ್ನು ತಟ್ಟುವ ಕೆಲಸ ಜಯಮಾಲಾ ಅವರು ಮಾಡಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ, ಅವರಿಂದ ಒಳ್ಳೆಯ ಕೆಲಸ ಆಗಲಿ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರಲಿ ಎಂದು ಆಶಿಸಿದರು.

ಪರಿಷತ್‌ನ ಹಿರಿಯ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ, ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ ಸೇರಿದಂತೆ ಇನ್ನೂ ಹಲವರು ಜಯಮಾಲಾರನ್ನು ಮೇಲ್ಮನೆಯ ಸಭಾ ನಾಯಕಿ ಮಾಡುವ ನಿರ್ಣಯಕ್ಕೆ ಬೇಸರ ವ್ಯಕ್ತಪಡಿಸಿದ್ದು, ಜಯಮಾಲಾ ವಿರುದ್ಧ ಸಹಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

ಜಯಮಾಲಾಗೆ ಸಚಿವ ಸ್ಥಾನ, ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಅಸಮಾಧಾನಜಯಮಾಲಾಗೆ ಸಚಿವ ಸ್ಥಾನ, ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಅಸಮಾಧಾನ

ಜಯಮಾಲಾ ಅವರಿಗೆ ಸಚಿವೆ ಸ್ಥಾನ ನೀಡಲಾಗಿದ್ದು, ಇದೂ ಸಹ ಹಲವು ಶಾಸಕರಲ್ಲಿ ಅಸಮಾಧಾನ ಮೂಡಿಸಿತ್ತು. ಮಹಿಳಾ ಶಾಸಕಿಯರು ಇರುವಾಗಲೂ ಕೂಡ ಚುನಾವಣೆಯನ್ನೇ ಎದುರಿಸದ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿರೋಧಿಸಿದ್ದರು.

English summary
MLA Lakshmi hebbalkar Said In North Karnataka Service means that is rolling service, worship service and party service. In that sense I said Jayamala had served the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X