ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಷಾಂತ್ಯಕ್ಕೆ ಹೊಸ ಕೈಗಾರಿಕಾ ನೀತಿ ಗಿಫ್ಟ್ ಕೊಡಲಿದ್ದಾರೆ ಶೆಟ್ಟರ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ವರ್ಷಾಂತ್ಯಕ್ಕೆ ಹೊಸ ಕೈಗಾರಿಕಾ ನೀತಿ ಗಿಫ್ಟ್ ಕೊಡಲಿದ್ದಾರೆ ಶೆಟ್ಟರ್ | Oneindia Kannada

ಬೆಳಗಾವಿ, ಸೆಪ್ಟೆಂಬರ್ 11: ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕೈಗಾರಿಕಾ ಹೊಸ ನೀತಿ ಜಾರಿಗೆ ತರಲಿರುವುದಾಗಿ ತಿಳಿಸಿದರು ಬೃಹತ್ ಮತ್ತು ಸಣ್ಣ ಕೈಗಾರಿಕಾ ಇಲಾಖೆಯ ಸಚಿವ ಜಗದೀಶ್ ಶೆಟ್ಟರ್.

ಬೆಳಗಾವಿಯ ಹೊರವಲಯದಲ್ಲಿರುವ ಹೋಟೆಲೊಂದರಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಮ್ಮಿಕೊಂಡಿದ್ದ ಸಂವಾದಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.

ಸದಾ ಬಿಜೆಪಿ ಟೀಕಿಸುವ ಸಿದ್ದರಾಮಯ್ಯಗೆ ಶೆಟ್ಟರ್ ಎಸೆದ ಗುರುತರ ಚಾಲೆಂಜ್ಸದಾ ಬಿಜೆಪಿ ಟೀಕಿಸುವ ಸಿದ್ದರಾಮಯ್ಯಗೆ ಶೆಟ್ಟರ್ ಎಸೆದ ಗುರುತರ ಚಾಲೆಂಜ್

"ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ರಾಜಗಳಲ್ಲಿ ನಮ್ಮ ರಾಜವೂ ಇದೆ‌. ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಲು ಮಹಾರಾಷ್ಟ್ರದಿಂದ ಉದ್ಯಮಿಗಳು ಮುಂದೆ ಬಂದಿದ್ದಾರೆ‌. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಮಾತ್ರ ಆದ್ಯತೆ ಕೊಡಲಾಗಿತ್ತು. ಇನ್ನು ಮುಂದೆ ಉತ್ತರ ಕರ್ನಾಟಕಕ್ಕೂ ದೇಶದ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತರಲಾಗುತ್ತದೆ. ಹೀಗಾಗಿ ಕೈಗಾರಿಕಾ ಅಭಿವೃದ್ಧಿಗಾಗಿ ಹೊಸ ಕೈಗಾರಿಕಾ ನೀತಿ ತರಲಾಗುತ್ತದೆ" ಎಂದು ತಿಳಿಸಿದರು.

Jagadish Shetter Plan To Introduce New Industrial Policy By The End Of The Year

"ಬೆಂಗಳೂರು ಬಿಟ್ಟರೆ ಹುಬ್ಬಳ್ಳಿ, ತುಮಕೂರು, ನಂತರ ಬೆಳಗಾವಿಗೆ ಕೈಗಾರಿಕಾ ಕೇಂದ್ರಗಳು ಬರುತ್ತಿವೆ. ಇನ್ನೂ ಹೆಚ್ಚಿಗೆ ಕೈಗಾರಿಕೆಗಳು ಬರುವಂತಹ ಕೆಲಸ ಆಗಬೇಕಿದೆ. ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ ಆಗಿದೆ. ಇದು ಕೈಗಾರಿಕೆಯ ವಿಸ್ತರಣೆಗೆ ಅನುವಾಗಲಿದೆ. ನಾನು ಯಾವಾಗಲೂ ಆಶಾವಾದಿ, ನಿರಾಶಾವಾದಿ ಅಲ್ಲ. ಎಲ್ಲವೂ ಸರಿ ಹೋಗುತ್ತದೆ" ಎಂದಿದ್ದಾರೆ.

ದೇಶದ ರಫ್ತಿನ ಶೇ.17.8 ರಷ್ಟು ಪಾಲನ್ನು ರಾಜ್ಯ ಹೊಂದಿದೆ: ಬಿಎಸ್ವೈದೇಶದ ರಫ್ತಿನ ಶೇ.17.8 ರಷ್ಟು ಪಾಲನ್ನು ರಾಜ್ಯ ಹೊಂದಿದೆ: ಬಿಎಸ್ವೈ

ಇದೇ ವೇಳೆ, ಮಾಜಿ ಸಚಿವ ಡಿಕೆಶಿ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಇಡಿ ಮತ್ತು ಐಟಿ ಇಲಾಖೆಗಳು ಸ್ವತಂತ್ರ ಸಂಸ್ಥೆಗಳು. ಬಿಜೆಪಿ ಸರ್ಕಾರ ಇದ್ದಾಗ ಇವು ರಚನೆ ಆಗಿಲ್ಲ. ಒಂದು ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು. ಡಿಕೆಶಿ ಅವರಿಗೆ ಅನ್ಯಾಯ ಆಗುತ್ತಿದ್ದರೆ ಅದನ್ನು ನೋಡಲು ಕೋರ್ಟ್ ಇದೆ. ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲಿ" ಎಂದು ಹೇಳಿದ್ದಾರೆ.

English summary
Minister of State for Large and Small Industries Jagadish Shettar said the new industrial policy will be implemented in November and December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X