ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3.99 ಕೋಟಿ ತೆರಿಗೆ ಕಟ್ಟಲು ಮಾಜಿ ಶಾಸಕ ಅಭಯ ಪಾಟೀಲ್ ಗೆ ನೋಟಿಸ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 22: ಮಾಜಿ ಶಾಸಕ ಅಭಯ ಪಾಟೀಲ್ ಮೇಲೆ ಕಪ್ಪು ಹಣ ಹೊಂದಿದ್ದ ಆರೋಪ ಬಂದಿದೆ. ಚಿಕ್ಕೋಡಿ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿರುವ ಅರಿಹಂತ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 8.85 ಕೋಟಿ ರುಪಾಯಿ ಕಪ್ಪು ಹಣ ಹೊಂದಿದ್ದು, ಅದಕ್ಕೆ ಸಂಬಂಧಿಸಿದಂತೆ 3.99 ಕೋಟಿ ರುಪಾಯಿ ತೆರಿಗೆ ತುಂಬುವಂತೆ ಆದೇಶ ಮಾಡಲಾಗಿದೆ.

2012ರಲ್ಲಿ ಅರಿಹಂತ ಸೊಸೈಟಿ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದಾಗ ಸಿಕ್ಕ ಡೈರಿಯಲ್ಲಿ ಅಭಯ್ ಪಾಟೀಲ್ ಎಂಬ ಹೆಸರು ಪತ್ತೆಯಾಗಿತ್ತು. ಆ ಮಾಹಿತಿ ಆಧರಿಸಿ ಆದಾಯ ತೆರಿಗೆ ಅಧಿಕಾರಿಗಳು ಶಾಸಕ ಅಭಯ್ ಪಾಟೀಲ್ ಗೆ ನೋಟಿಸ್ ನೀಡಿದ್ದರು. ಆ ನೋಟಿಸ್ ವಿರುದ್ಧ ಶಾಸಕ ಅಭಯ್ ಪಾಟೀಲ್ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಇಲಾಖೆ ತಿರಸ್ಕರಿಸಿತ್ತು.

650 ಕೋಟಿ ರು. ಮರೆ ಮಾಚಿದರೇ 'ಕಾಫಿ ಡೇ' ಸಿದ್ದಾರ್ಥ್?650 ಕೋಟಿ ರು. ಮರೆ ಮಾಚಿದರೇ 'ಕಾಫಿ ಡೇ' ಸಿದ್ದಾರ್ಥ್?

ಕಪ್ಪು ಹಣ ಹೊಂದಿದ ಆರೋಪ ತಳ್ಳಿ ಹಾಕಿರುವ ಮಾಜಿ ಶಾಸಕ ಅಭಯ್ ಪಾಟೀಲ್, ಅರಿಹಂತ ಬ್ಯಾಂಕ್ ನಲ್ಲಿ ನನ್ನ ಖಾತೆ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿ, ಡೈರಿಯಲ್ಲಿ ಹೆಸರು ಬರುವಂತೆ ಮಾಡಿದ್ದಾರೆ. ಆದಾಯ ಇಲಾಖೆಯವರು 8.85 ಕೋಟಿ ಹಣಕ್ಕೆ 3.99 ಕೋಟಿ ತೆರಿಗೆ ಕಟ್ಟುವಂತೆ ತಿಳಿಸಿದರು. ಅದು ನನ್ನದೇ ಹಣ ಆಗಿದ್ದರೆ ತೆರಿಗೆ ಕಟ್ಟಿ ಉಳಿದ 5 ಕೋಟಿ ರುಪಾಯಿಯಷ್ಟು ಹಣ ಮರಳಿ ಪಡೆಯುತ್ತಿದ್ದೆ. ಆದರೆ ಅದಕ್ಕೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ.

IT notice to former MLA Abhay Patil to pay 3.99 crore

ಆದಾಯ ತೆರಿಗೆ ಇಲಾಖೆಯ ನೋಟಿಸ್ ಪ್ರಶ್ನಿಸಿ, ಗೋವಾದ ಐಟಿ ಟ್ರಿಬ್ಯೂನಲ್ ಗೆ ಮೇಲ್ಮನವಿ ಸಲ್ಲಿಸಿದ್ದೇನೆ ಎಂದು ಅಭಯ್ ಪಾಟೀಲ್ ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ್ ಅವರು ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.

English summary
IT department notice sent notice to IT notice to former MLA Abhay Patil to pay 3.99 crore. Which was related to Patil name found in a diary, related to amount of 8.85 crore in Arihant Co-Operative bank. But Abhay Patil denied the allegation and said, amount not belongs to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X