ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ : 'ಸತ್ತರೆ ಮಾತ್ರ ಪರಿಹಾರ ಕೊಡೋದಾ?'

By Manjunatha
|
Google Oneindia Kannada News

ಬೆಳಗಾವಿ, ನವೆಂಬರ್ 17 : ಇಂದು (ನವೆಂಬರ್ 17) ಕಲಾಪ ಆರಂಭವಾಗುತ್ತಿದ್ದಂತೆಯೇ ವೈದ್ಯರ ಮುಷ್ಕರದ ಬಗ್ಗೆ ಚರ್ಚೆ ನಡೆಯಿತು ಆದರೆ ನಂತರದ ಸದನ ವಿವಿಧ ವಿಷಯಗಳ ಚರ್ಚೆಗೆ ಸಾಕ್ಷಿಯಾಯಿತು.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ವಿದ್ಯುತ್ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಉತ್ತರ ಕರ್ನಾಟಕಕ್ಕೆ ವಿಶೇಷ ಪ್ರಾಶಸ್ತ್ಯ ಹೀಗೆ ವಿವಿಧ ಸಮಸ್ಯೆಗಳ ಚರ್ಚೆ ನಡೆಯಿತು.

ರಮೇಶ್ ಕುಮಾರ್ ಭಾವನಾತ್ಮಕ ಭಾಷಣ, 10 ಬೆಳವಣಿಗೆರಮೇಶ್ ಕುಮಾರ್ ಭಾವನಾತ್ಮಕ ಭಾಷಣ, 10 ಬೆಳವಣಿಗೆ

ಮೂರು ದಿನಗಳಿಂದಲೂ ಡಾಕ್ಟರ್ ಗಳ ಮುಷ್ಕರ, ಜಾರ್ಜ್ ಪ್ರಕರಣ, ಸಿಸಿಟಿವಿ, ಮೌಡ್ಯನಿಷೇಧ ಕಾಯ್ದೆಯದ್ದೇ ಚರ್ಚೆ ನಡೆದಿದ್ದ ಸದನದಲ್ಲಿ ಇಂದು (ನವೆಂಬರ್ 17) ರಂದು ಬೇರೆ ಕೆಲವು ವಿಷಯಗಳು ಚರ್ಚೆ ನಡೆದಿದ್ದು ಉತ್ತಮ ಬೆಳವಣಿಗೆ.

ಭೋಜನ ವಿರಾಮಕ್ಕೆ ಮುಂಚಿನ ಕಲಾಪ ಶಾಂತರೀತಿಯಿಮದ ನಡೆದಿದೆಯಾದರೂ ನಂತರದ್ದು ಮತ್ತೆ ಡಾಕ್ಟರ್ ಮುಷ್ಕರದ ಚರ್ಚೆ ಮುನ್ನೆಲೆಗೆ ಬರುತ್ತದೆ.

ಪಟ್ಟು ಬಿಡದ ರಮೇಶ್ ಕುಮಾರ್ ಮತ್ತು ಬೆಳಗಾವಿ ಅಧಿವೇಶನದ 9 ಅಂಶಗಳುಪಟ್ಟು ಬಿಡದ ರಮೇಶ್ ಕುಮಾರ್ ಮತ್ತು ಬೆಳಗಾವಿ ಅಧಿವೇಶನದ 9 ಅಂಶಗಳು

ಕಲಾಪ ಆರಂಭವಾದಾಗ ಎದ್ದಿದ್ದ ವಯದ್ಯರ ಮುಷ್ಕರ ಕುರಿತ ಪ್ರಶ್ನೆಗೆ ಟಿ.ಬಿ.ಜಯಚಂದ್ರ ಉತ್ತರಿಸಿ ಮಧ್ಯಾಹ್ನ ವೈದ್ಯರೊಂದಿಗೆ ಮುಖ್ಯಮಂತ್ರಿಗಳ ಸಭೆ ಇದೆ ಸಭೆ ಮುಗಿದ ಮೇಲೆ ಸಮಸ್ಯೆ ಬಗೆಹರಿಯಲಿದೆ ಎಂದಿದ್ದರು ಹಾಗಾಗಿ ಭೋಜನ ವಿರಾಮದ ಬಳಿಕ ಶುರುವಾಗುವ ವಿಧಾನಪರಿಷತ್ ಕಲಾಪದಲ್ಲಿ ಮುಷ್ಕರದ ಚರ್ಚೆ ಮತ್ತೆ ಪ್ರತಿಧ್ವನಿಸುವ ಸಾಧ್ಯತೆ ಹೆಚ್ಚಿಗಿದೆ.

ಒಂದು ಗಂಟೆ ವಿದ್ಯುತ್ ಸರಬರಾಜು ಹೆಚ್ಚಿಸಿದ್ದೇವೆ

ಒಂದು ಗಂಟೆ ವಿದ್ಯುತ್ ಸರಬರಾಜು ಹೆಚ್ಚಿಸಿದ್ದೇವೆ

ಮೊದಲಿಗೆ ಶಾಸಕ ದುರ್ಯೋಧನ ಅವರು 'ಗ್ರಾಮೀಣ ಭಾಗದಲ್ಲಿ ವಿದ್ಯುತ್ ನೀಡಿಕೆ' ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿದ್ಯುತ್ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ, ಅದರಲ್ಲಿ ವ್ಯತ್ಯಯ ಇರುವುದಿಲ್ಲ, ಬರಗಾಲ ಇದ್ದರೂ 7 ಗಂಟೆ ವಿದ್ಯುತ್ ಪೂರೈಕೆ ಮಾಡಿದ್ದೇವೆ, ಆದರೆ ಗ್ರಾಮೀಣ ಪ್ರದೇಶಕ್ಕೆ 12 ಗಂಟೆ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ, ಹಿಂದೆ 6 ಗಂಟೆ ಮಾತ್ರ ವಿದ್ಯತ್ ಸರಬರಾಜು ಮಾಡಲಾಗುತ್ತಿತ್ತು, ನಾವು ಬಂದ ಮೇಲೆ ಒಂದು ಗಂಟೆ ಹೆಚ್ಚಿಸಿದ್ದೇವೆ ಎಂದು ಉತ್ತರಿಸಿದರು.

ಕೆಎಸ್ಆರ್ಟಿಸಿ ಯಲ್ಲಿ ಪರದೆ ತೆಗೆಸಿ

ಕೆಎಸ್ಆರ್ಟಿಸಿ ಯಲ್ಲಿ ಪರದೆ ತೆಗೆಸಿ

ರಾಜ್ಯದ ಕೆಎಸ್ ಆರ್ ಟಿಸಿ ಸ್ಲೀಪರ್ ಕೋಚ್ ಗಳಲ್ಲಿ ಪರದೆ ಅಳವಡಿಸಿರುವ ಕಾರಣದಿಂದ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ನ ಜಯಮಾಲ ಆರೋಪಿಸಿದರು.ಉತ್ತರ ಕರ್ನಾಟಕದಿಂದ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಮೀರಜ್,ಸಾಂಗ್ಲಿ ಮತ್ತು ಮುಂಬೈಗೆ ಹೆಣ್ಣು ಮಕ್ಕಳನ್ನು ಸಾಗಿಸುತ್ತಿದ್ದಾರೆ. ಸಾಧಾರಣವಾಗಿ ಬಸ್ ನ ಕೊನೆಯ ಸೀಟ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತದೆ.ಇದರಲ್ಲಿ ಬಸ್ ಗಳ ಚಾಲಕರು ನಿರ್ವಾಹಕರು ಶಾಮೀಲಾಗಿದ್ದಾರೆ.ಹಾಗಾಗಿ ಈ ಬಸ್ ಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಲ್ಲರೂ ದಂಧೆಕೋರರಲ್ಲ

ಎಲ್ಲರೂ ದಂಧೆಕೋರರಲ್ಲ

ಇದಕ್ಕೆ ಉತ್ತರಿಸಿದ ಎಚ್.ಎಂ.ರೇವಣ್ಣ ಅವರು, ಕೆಎಸ್ಆರ್‌ಟಿಸಿ ಸ್ಲೀಪರ್ ಕೋಚ್ ಗಳಲ್ಲಿ ಓಡಾಡುವವರೆಲ್ಲಾ ದಂಧೆ ಮಾಡುತ್ತಿದ್ದಾರೆ ಎಂಬರ್ಥದಲ್ಲಿ ಆರೋಪ ಮಾಡುವುದು ಸರಿಯಲ್ಲ.ಗಂಡ ಹೆಂಡತಿ ಪ್ರಯಾಣ ಮಾಡುತ್ತಿದ್ದಾಗಲೂ ಅವರ ಮೇಲೆ ಅನುಮಾನ ಪಡಲು ಸಾಧ್ಯವಿಲ್ಲ. ಕಾಯ್ದೆ ಪ್ರಕಾರ ಸ್ಲೀಪರ್ ಕೋಚ್ ಗಳಲ್ಲಿ ಪರಧೆ ಅಳವಡಿಸಲೇಬೇಕು. ಪ್ರಯಾಣಿಕರ ಖಾಸಗಿತನ ಕಾಪಾಡುವುದು ಕಡ್ಡಾಯ ಎಂದರು.

ಪರಿಹಾರ ಬೇಕಿದ್ದರೆ ಸಾಯಲೇ ಬೇಕಾ?

ಪರಿಹಾರ ಬೇಕಿದ್ದರೆ ಸಾಯಲೇ ಬೇಕಾ?

ಹಾವು ಕಚ್ಷಿ ಸಾವನ್ನಪ್ಪಿದ ರೈತರಿಗೆ 1 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡುತ್ತಿದೆ ಆದ್ರೆ ಹಾವು ಕಚ್ಚಿಸಿಕೊಂಡು ಬದುಕುಳಿದರೆ ಆತನಿಗೆ ಪರಿಹಾರ ಇಲ್ಲ, ಪರಿಹಾರ ಬೇಕಂದ್ರೆ ರೈತ ಸಾಯಲೇಬೇಕು ಈ ನಿಯಮ ಸರಿಯಲ್ಲ ಹಾವು ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಬದುಕುಳಿದವರಿಗೂ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಬಿ.ಜೆ.ಪಿ ಶಾಸಕ ಪಿ.ರಾಜೀವ್ ಅವರು ಮನವಿ ಮಾಡಿದರು.

English summary
On November 17th some interesting debate held in assembly. questions raised on power issue, KSRTC, Farmers issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X