• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ-ಚೆನ್ನೈ ನಡುವೆ ಫೆಬ್ರವರಿ 2ರಿಂದ ನೇರ ವಿಮಾನ

|

ಬೆಳಗಾವಿ, ಜನವರಿ 07: ಇಂಡಿಗೋ ವಿಮಾನಯಾನ ಸಂಸ್ಥೆ ಬೆಳಗಾವಿ ಮತ್ತು ಚೆನ್ನೈ ನಡುವೆ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ಫೆಬ್ರವರಿ 2ರಿಂದ ವಿಮಾನ ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಮಿಳುನಾಡಿನ ಚೆನ್ನೈ ಮತ್ತು ಬೆಳಗಾವಿ ನಡುವೆ ನೇರ ವಿಮಾನಯಾನ ಸೇವೆ ಆರಂಭವಾಗಲಿದೆ. ಬೆಳಗಾವಿಯಿಂದ ವಿಮಾನ ಸಂಪರ್ಕ ಪಡೆಯುತ್ತಿರುವ 12ನೇ ನಗರ ಚೆನ್ನೈ ಆಗಿದೆ.

ಹುಬ್ಬಳ್ಳಿಯಿಂದ ಅಹಮದಾಬಾದ್‌ಗೆ ಮತ್ತೆ ವಿಮಾನ ಸೇವೆ ಆರಂಭ

ಇಂಡಿಗೋ ಸಂಸ್ಥೆಯ ಎಟಿಆರ್ 72-600 ವಿಮಾನ ಬೆಳಗಾವಿ ಮತ್ತು ಚೆನ್ನೈ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಫೆಬ್ರವರಿ 2ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

1 ವರ್ಷದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ

ವೇಳಾಪಟ್ಟಿ: 6ಇ 7132 ವಿಮಾನ ಬೆಳಗಾವಿಯಿಂದ 10.55ಕ್ಕೆ ಹೊರಡಲಿದ್ದು, ಚೆನ್ನೈ ಅನ್ನು 13.15ಕ್ಕೆ ತಲುಪಲಿದೆ. 6ಇ 7131 ವಿಮಾನ ಚೆನ್ನೈನಿಂದ 8.10ಕ್ಕೆ ಹೊರಡಲಿದ್ದು, ಬೆಳಗಾವಿಗೆ 10.25ಕ್ಕೆ ತಲುಪಲಿದೆ.

ಬೆಳಗಾವಿ ವಿಮಾನ ನಿಲ್ದಾಣ ಕರ್ನಾಟಕ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯಗಳಿಗೂ ಹತ್ತಿರವಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜನರು ಸಹ ವಿಮಾನ ನಿಲ್ದಾಣವನ್ನು ಅವಲಂಬಿಸಿದ್ದಾರೆ. ಬೆಳಗಾವಿಯಿಂದ ಪುಣೆ, ಹೈದರಾಬಾದ್, ಬೆಂಗಳೂರು, ತಿರುಪತಿ, ಕಡಪಾ, ಇಂದೋರ್ ಮುಂತಾದ ನಗರಗಳಿಗೆ ವಿಮಾನ ಸಂಪರ್ಕವಿದೆ.

English summary
Starting February 2 IndiGo will operate new direct flights between Belagavi-Chennai. Chennai 12th city which connected to Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X