ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಮುಗಿಬಿದ್ದ ಜನರು: ಲಾಕ್ ಡೌನ್ ಲೆಕ್ಕಕ್ಕಿಲ್ಲ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 25: ಯುಗಾದಿ ಹಬ್ಬದ ಸಾಮಾನು ಖರೀದಿ ಮಾಡುವ ಭರದಲ್ಲಿ ಬೆಳಗಾವಿಯ ಖಡೇಬಜಾರ, ಗಣಪತಿ ಗಲ್ಲಿಗಳಲ್ಲಿ ಜನಜಂಗುಳಿ ನಿರ್ಮಾಣವಾಗಿದೆ. ನಿನ್ನೆ ಪೊಲೀಸರಿಂದ ಲಾಠಿ ರುಚಿ ತಿಂದಿದ್ದರು ಕೂಡ ಇಂದು ಜನರು ಮಾರುಕಟ್ಟೆ ಬಂದಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಹೂ, ಹಣ್ಣು, ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಜನರು ಬರುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸೇರಿದ್ದ ಜನರನ್ನು ಪೊಲೀಸರು ಚದುರಿಸುತ್ತಿರುವ ದೃಶ್ಯ ಕಂಡುಬಂತು.

Live Updates : ಕಲಬುರಗಿಯಲ್ಲಿ ಮತ್ತೆ ಲಾಕ್‌ಡೌನ್ ನಿರ್ಲಕ್ಷ್ಯLive Updates : ಕಲಬುರಗಿಯಲ್ಲಿ ಮತ್ತೆ ಲಾಕ್‌ಡೌನ್ ನಿರ್ಲಕ್ಷ್ಯ

ಪೊಲೀಸ್ ವಾಹನಗಳ ಮೂಲಕ ಜನರು ಅನಗತ್ಯವಾಗಿ ರಸ್ತೆಗೆ ಬರದಂತೆ ಅನೌನ್ಸಮೆಂಟ್ ಮಾಡುತ್ತಿದ್ದಾರೆ. ಮನೆಯಿಂದ ಹೊರ ಬಂದರೆ ಕೇಸ್ ಬೀಳುತ್ತೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

India Lockdown: People Arriving In Belagavi Market

ಹುಕ್ಕೇರಿ‌ ಪೊಲೀಸ್ ಠಾಣೆಯಲ್ಲಿ ಐಪಿಸಿ ೧೮೮ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹುಕ್ಕೇರಿ ಪಟ್ಟಣದಲ್ಲಿ ಎಷ್ಟೇ ವಿನಂತಿಸಿದರೂ ಅಂಗಡಿ ತೆರಿದಿದ್ದಕ್ಕೆ ಪ್ರಕರಣ ಕೇಸ್ ಹಾಕಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸಲೀಂ ಇಸ್ಮಾಯಿಲ್ ಭಾಗವಾನ ಹಾಗೂ ನಾಮದೇವ ಬೊಂಗಾಳೆ ಎಂಬುವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಹುಕ್ಕೇರಿ ಪಿಎಸ್ಐ ಶಿವಾನಂದ ಗುಡಗನಟ್ಟಿ ಅವರು ಪ್ರಕರಣ ದಾಖಲಿಸಿದ್ದಾರೆ.

India Lockdown: People Arriving In Belagavi Market

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಎಸ್‌ಡಿ‌ಆರ್‌ಎಪ್ ತಂಡ ಸ್ವಚ್ಚತಾ ಕಾರ್ಯಕ್ಕೆ ಕೈ ಜೋಡಿಸಲಿದೆ. ಬೆಳಗಾವಿ ನಗರದ ಚೆನ್ನಮ್ಮ ವೃತ್ತಕ್ಕೆ ಮೂವತ್ತು ಜನರ ತಂಡ ಆಗಮಿಸಿದ್ದು, ಬೆಳಗಾವಿಯ ಮಹಾನಗರ ಪಾಲಿಕೆ ಸಿಬ್ಬಂದಿಗೆ ಎಸ್‌ಡಿ‌ಆರ್‌ಎಪ್ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸಾಥ್ ನೀಡಲಿದ್ದಾರೆ.

English summary
People are coming to the market for flower, fruit and vegetable purchases in Belagavi city Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X