• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ; ಅಪಾರ ಪ್ರಮಾಣದ ಸ್ಪೋಟಕ ವಶ, ಮೂವರ ಬಂಧನ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಮಾರ್ಚ್ 07; ನಿಯಮ ಉಲ್ಲಂಘಿಸಿ ಜನರ ಪ್ರಾಣಕ್ಕೆ ಅಪಾಯವಾಗುವಂತೆ ಭಾರೀ ಪ್ರಮಾಣದಲ್ಲಿ ‌ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯಲ್ಲಿ ವಾಹನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆದಿದೆ.

ಕಾಕತಿ ಪೊಲೀಸರು ಬೆಳಗಾವಿ ‌ತಾಲೂಕಿನ ಹೊನಗಾ ಗ್ರಾಮದ‌ ಸ್ಪೂರ್ತಿ ಡಾಬಾ ಬಳಿ ಅಂದಾಜು 4 ಲಕ್ಷ ರೂ. ಮೌಲ್ಯದ 6,675 ಟನ್ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟಾಟಾ ಟ್ಯಾಂಕರ್ ಹಾಗೂ ಪಿಕ್ ಅಪ್ ವಾಹನ ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ ಸ್ಪೋಟ ಪ್ರಕರಣ: ಫೆ.7ರಂದೇ ದಾಖಲಾಗಿತ್ತು ಎಫ್ಐಆರ್!ಚಿಕ್ಕಬಳ್ಳಾಪುರ ಸ್ಪೋಟ ಪ್ರಕರಣ: ಫೆ.7ರಂದೇ ದಾಖಲಾಗಿತ್ತು ಎಫ್ಐಆರ್!

ಸ್ಪೋಟಕ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಚಿಕ್ಕೋಡಿ ‌ತಾಲೂಕಿನ ಬೊಬಲವಾಡ ಗ್ರಾಮದ ರಮೇಶ ಲಕ್ಕೊಟಿ, ರಾಜು ಈಶ್ವರ ಶಿರಗಾಂವಿ ಹಾಗೂ ಮುಗಳಿ ಗ್ರಾಮದ ಅರುಣ ಶ್ರೀಶೈಲ ಮಠದ ಎಂದು ಗುರುತಿಸಲಾಗಿದೆ.

ಜಡ್ಜ್ ಗೆ ಬಾಂಬ್ ಸ್ಪೋಟ ಬೆದರಿಕೆ ಪ್ರಕರಣ: ನಿರ್ಲಕ್ಷ್ಯತೆ ವಹಿಸಿದ ಇನ್‌ಸ್ಪೆಕ್ಟರ್ ಸಸ್ಪೆಂಡ್ ! ಜಡ್ಜ್ ಗೆ ಬಾಂಬ್ ಸ್ಪೋಟ ಬೆದರಿಕೆ ಪ್ರಕರಣ: ನಿರ್ಲಕ್ಷ್ಯತೆ ವಹಿಸಿದ ಇನ್‌ಸ್ಪೆಕ್ಟರ್ ಸಸ್ಪೆಂಡ್ !

ವಶಕ್ಕೆ ಪಡೆದ ಸ್ಪೋಟಕ ವಸ್ತುಗಳನ್ನು ಕಾಕತಿ ವ್ಯಾಪ್ತಿಯ ನಿಂಗ್ಯಾನಟ್ಟಿಯ ಬಳಿ ಸುರಕ್ಷಿತವಾಗಿ ಸಂಗ್ರಹ ಮಾಡಲಾಗಿದೆ. ಕಾಕತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

ಚಿಕ್ಕಬಳ್ಳಾಪುರ ಸ್ಫೋಟ; ಅರಣ್ಯ ಇಲಾಖೆ ಸ್ಪಷ್ಟನೆ ಚಿಕ್ಕಬಳ್ಳಾಪುರ ಸ್ಫೋಟ; ಅರಣ್ಯ ಇಲಾಖೆ ಸ್ಪಷ್ಟನೆ

ಮಗನಿಂದಲೇ ತಂದೆ ಕೊಲೆ; ಆಸ್ತಿ ವಿಚಾರಕ್ಕಾಗಿ ತಂದೆಯನ್ನು ಮಗ ಚಾಕುವಿನಿಂದ‌ ಇರಿದು ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ‌. ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಟೀಲ ಮಾಳಾ ನಿವಾಸಿ ಲಕ್ಷ್ಮಣ ಲಕ್ಕಪ್ಪ ಶಿರೂರ (50) ಕೊಲೆಯಾದ ದುರ್ದೈವಿ. ಕೋತ್ವಾಲ್ ಗಲ್ಲಿಯಲ್ಲಿ ವಾಸವಾಗಿರುವ ಲಕ್ಷ್ಮಣ ‌ಅವರ ಪುತ್ರ ಸೋಮನಾಥ ಶಿರೂರ ಕೊಲೆ ಮಾಡಿದ ಆರೋಪಿ.

ಭಾನುವಾರ ತಂದೆಯ ಮನೆಗೆ ಬಂದಿದ್ದ ಸೋಮನಾಥ ನನಗೆ ಹಣ ಹಾಗೂ ಆಸ್ತಿಯಲ್ಲಿ ಪಾಲು ನೀಡುವಂತೆ ‌ಪೀಡಿಸಿದ್ದಾನೆ. ಅಲ್ಲದೇ ತಂದೆಯ ಜೊತೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಸ್ಥಳೀಯರು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

ಕೆಲಹೊತ್ತಿನ ಬಳಿಕ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ಹೋಗಿದೆ. ಆಕ್ರೋಶಗೊಂಡ ಸೋಮನಾಥ ತಂದೆ ಲಕ್ಷ್ಮಣನ ಎದೆಯ ಕೆಳ ಭಾಗಕ್ಕೆ ಚಾಕು ಇರಿದು ಪರಾರಿಯಾಗಿದ್ದಾನೆ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಲಕ್ಷ್ಮಣ ‌ಮೃತಪಟ್ಟಿದ್ದಾರೆ.

ಖಡೇಬಜಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ. ಬಿ. ಶಿಂಧೆ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿ ಸೋಮನಾಥ ಲಕ್ಷ್ಮಣ ಶಿರೂರ ಬಂಧಿಸಿದೆ.

English summary
Belagavi Kakati police seized illegal transport explosives and arrested Three people. Around 6,675 ton explosives seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X