ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಐಐಟಿ?, ಸುರೇಶ್ ಅಂಗಡಿಗೆ ಪತ್ರ

|
Google Oneindia Kannada News

ಬೆಳಗಾವಿ, ಮೇ 5 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಲಿದೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಐಐಟಿ ಸ್ಥಾಪನೆ ಮಾಡಲು ಸುಮಾರು 600 ಎಕರೆ ಭೂಮಿಯ ಅಗತ್ಯವಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿದ್ದಾರೆ.

ಮಾರ್ಚ್‌ನಲ್ಲಿ ಸಂಸದ ಸುರೇಶ್ ಅಂಗಡಿ ಅವರು ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಬೆಳಗಾವಿಯಲ್ಲಿ ಐಐಟಿ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದರು. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆ ಕುರಿತು ಸುರೇಶ್ ಅಂಗಡಿ ಅವರು ಸಲ್ಲಿಸಿದ್ದ ಮನವಿಗೆ ಸಚಿವರು ಸ್ಪಂದಿಸಿದ್ದು, ಪತ್ರದ ಮೂಲಕ ಉತ್ತರ ನೀಡಿದ್ದಾರೆ. [ಐಐಟಿ ಸ್ಥಾಪನೆಗೆ ಬೆಳಗಾವಿ ಉತ್ತಮ ಸ್ಥಳ]

ಸುರೇಶ್ ಅಂಗಡಿ ಅವರಿಗೆ ಬರೆದಿರುವ ಪತ್ರದಲ್ಲಿ ಐಐಟಿ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿ ಉಚಿತವಾಗಿ ಬೇಕು, ಯಾವುದೇ ಕಾನೂನು ತೊಡಕಿಲ್ಲದ ಭೂಮಿಯ ಅಗತ್ಯವಿದೆ. ಎಲ್ಲಾ ಮೂಲಭೂತ ಸೌಕರ್ಯಗಳು, ರಸ್ತೆ, ರೈಲ್ವೆ ಹಾಗೂ ವಿಮಾನಯಾನದ ಸೌಲಭ್ಯವಿರುವ ಸ್ಥಳ ಗುರುತಿಸುವಂತೆ ಸಚಿವರು ತಿಳಿಸಿದ್ದಾರೆ. [ಕರ್ನಾಟಕದಲ್ಲಿ ಐಐಟಿ, ಮೂರು ಜಿಲ್ಲೆಗಳ ಆಯ್ಕೆ]

ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಐಐಟಿ ಸ್ಥಾಪನೆಗೆ ಮೂರು ಜಿಲ್ಲೆಗಳನ್ನು ಗುರುತಿಸಿತ್ತು. ರಾಯಚೂರು, ಧಾರವಾಡ, ಮೈಸೂರು ಜಿಲ್ಲೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈಗ ಕೇಂದ್ರ ಸಚಿವರು ಬೆಳಗಾವಿ ಸಂಸದರಿಗೆ ಪತ್ರ ಬರೆದಿರುವುದು ಕುತೂಹಲ ಮೂಡಿಸಿದೆ.

ಬೆಳಗಾವಿಯಲ್ಲಿ ಸ್ಥಾಪನೆಯಾಗಲಿದೆಯೇ ಐಐಟಿ?

ಬೆಳಗಾವಿಯಲ್ಲಿ ಸ್ಥಾಪನೆಯಾಗಲಿದೆಯೇ ಐಐಟಿ?

ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡುತ್ತಿದ್ದಂತೆ ಯಾವ ಜಿಲ್ಲೆಗೆ ಐಐಟಿ ಬರಬೇಕು? ಎಂಬ ಚರ್ಚೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಐಐಟಿ ಸ್ಥಾಪನೆಯಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.

ಬೆಳಗಾವಿ ಸಂಸದರಿಂದ ಮನವಿ

ಬೆಳಗಾವಿ ಸಂಸದರಿಂದ ಮನವಿ

ಮಾರ್ಚ್‌ನಲ್ಲಿ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಬೆಳಗಾವಿಯಲ್ಲಿ ಐಐಟಿ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದರು. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆ ಕುರಿತು ಸುರೇಶ್ ಅಂಗಡಿ ಅವರು ಸಲ್ಲಿಸಿದ್ದ ಮನವಿಗೆ ಸಚಿವರು ಸ್ಪಂದಿಸಿದ್ದು, ಪತ್ರದ ಮೂಲಕ ಉತ್ತರ ನೀಡಿದ್ದಾರೆ.

ಸುಮಾರು 600 ಎಕರೆ ಭೂಮಿ ಬೇಕು

ಸುಮಾರು 600 ಎಕರೆ ಭೂಮಿ ಬೇಕು

ಐಐಟಿ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿ ಉಚಿತವಾಗಿ ಬೇಕು, ಯಾವುದೇ ಕಾನೂನು ತೊಡಕಿಲ್ಲದ ಭೂಮಿಯ ಅಗತ್ಯವಿದೆ. ಎಲ್ಲಾ ಮೂಲಭೂತ ಸೌಕರ್ಯಗಳು, ರಸ್ತೆ, ರೈಲ್ವೆ ಹಾಗೂ ವಿಮಾನಯಾನದ ಸೌಲಭ್ಯವಿರುವ ಸ್ಥಳ ಗುರುತಿಸಿ, ರಾಜ್ಯ ಮತ್ತು ಕೇಂದ್ರ ತಂಡ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಐಐಟಿ ಸ್ಥಾಪನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.

ಸರ್ಕಾರದ ಪ್ರಸ್ತಾವನೆಯಲ್ಲಿ ಬೆಳಗಾವಿ ಹೆಸರಿಲ್ಲ

ಸರ್ಕಾರದ ಪ್ರಸ್ತಾವನೆಯಲ್ಲಿ ಬೆಳಗಾವಿ ಹೆಸರಿಲ್ಲ

ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಐಐಟಿ ಸ್ಥಾಪನೆಗೆ ಮೂರು ಜಿಲ್ಲೆಗಳನ್ನು ಗುರುತಿಸಿತ್ತು. ರಾಯಚೂರು, ಧಾರವಾಡ, ಮೈಸೂರು ಜಿಲ್ಲೆಗಳನ್ನು ಗುರುತಿಸಿ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈಗ ಕೇಂದ್ರ ಸಚಿವರು ಬೆಳಗಾವಿ ಸಂಸದರಿಗೆ ಪತ್ರ ಬರೆದಿರುವುದು ಕುತೂಹಲ ಮೂಡಿಸಿದೆ.

ಐಐಟಿ ಸ್ಥಾಪನೆಗೆ ಭಾರೀ ಪೈಪೋಟಿ

ಐಐಟಿ ಸ್ಥಾಪನೆಗೆ ಭಾರೀ ಪೈಪೋಟಿ

ಕರ್ನಾಟಕದ ವಿವಿಧ ಜಿಲ್ಲೆಗಳ ನಡುವೆ ಐಐಟಿ ಸ್ಥಾಪನೆಗೆ ಭಾರೀ ಪೈಪೋಟಿ ನಡೆದಿದೆ. ರಾಯಚೂರು, ಧಾರವಾಡ, ಮೈಸೂರು, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಹಾಸನ ಹೀಗೆ ವಿವಿಧ ಜಿಲ್ಲೆಗಳ ನಡುವೆ ಪೈಪೋಟಿ ನಡೆಯುತ್ತಿದ್ದು, ಎಲ್ಲಿ ಸ್ಥಾಪನೆಯಾಗಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. [ಐಐಟಿ ಎಲ್ಲಿ ಸ್ಥಾಪನೆ ಆಗಬೇಕು?]

English summary
In a letter to Belagavi MP Suresh Angadi (BJP) Human Resource Development minister Smriti Irani said, we need more than 600 acre of land to set up Indian Institute of Technology (IIT) in the Belagavi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X