ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೆಬೆಲ್‌ ಶಾಸಕರ ಬಗ್ಗೆ ಮಾಹಿತಿ ಕಲೆಹಾಕಲು ಕಾಂಗ್ರೆಸ್ ನಾಯಕ ನನ್ನನ್ನು ಮುಂಬೈಗೆ ಕಳುಹಿಸಿದ್ರು : ನವ್ಯಶ್ರೀ

|
Google Oneindia Kannada News

ಬೆಳಗಾವಿ, ಜುಲೈ 23: ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದ ವೇಳೆ ಕೆಲವು ಅತೃಪ್ತ ಕಾಂಗ್ರೆಸ್‌ ಶಾಸಕರು ಮುಂಬೈಗೆ ತೆರಳಿದ್ದ ವೇಳೆ ನಾನು ಕೂಡ ಹಿರಿಯ ನಾಕಯರೊಬ್ಬರ ಆಜ್ಞೆ ಮೇರೆಗೆ ಮುಂಬೈಗೆ ತೆರಳಿದ್ದೆ. ಅಲ್ಲಿಂದ ಶಾಸಕರ ಬಗೆಗಿನ ಮಾಹಿತಿಗಳನ್ನು ಸೀಕ್ರೇಟ್‌ ಆಗಿ ಕಳುಹಿಸಿಕೊಡುತ್ತಿದ್ದೆ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್‌ ಶನಿವಾರ ಹೇಳಿದ್ದಾರೆ.

ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯ ಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ದೂರು ನೀಡಲು ಬೆಳಗಾವಿಗೆ ಆಗಮಿಸಿರುವ ನವ್ಯಶ್ರೀ ಮಾಧ್ಯಮದವರೊಂದಿಗೆ ಮಾತನಾಡಿದರು. " ಕಾಂಗ್ರೆಸ್‌ನ ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದಾಗ ನಾನೂ ಹೋಗಿದ್ದೆ, ಇತರೆ ಮೂರು ಮಹಿಳೆಯರು ಸೇರಿ ನಾಲ್ಕು ಜನರನ್ನು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಈ ಸೀಕ್ರೇಟ್‌ ಟಾಸ್ಕ್‌ ನೀಡಿದ್ದರು. ಅಲ್ಲಿ ಕೆಲವು ಅತೃಪ್ತ ಶಾಸಕರ ಚಲನವಲನಗಳನ್ನು ಗಮನಿಸಿ ರಾಜ್ಯದ ನಾಯಕರಿಗೆ ಗುಪ್ತವಾಗಿ ಕಳುಹಿಸಿಕೊಡುತ್ತಿದ್ದೆವು. ಆ ಟಾಸ್ಕ್‌ನಲ್ಲಿ ನಾನು ಯಶಸ್ವಿಯಾಗಿದ್ದೆ. ಆದರೆ ನಾವು ಅಲ್ಲಿಗೆ ಹನಿಟ್ರ್ಯಾಪ್ ಮಾಡಲು ಹೋಗಿದ್ದೆವು ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ನವ್ಯಶ್ರೀ ತಿಳಿಸಿದ್ದಾರೆ.

Breaking; ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಶೀಘ್ರ ಆರಂಭBreaking; ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಶೀಘ್ರ ಆರಂಭ

ಮುಂದಿನ ವಿಧಾನಸಭೆ ಚುನಾವಣೆ ವೇಳೆ ಬೆಳಗಾವಿಯಿಂದ ಸ್ಪರ್ಧಿಸುವ ಉದ್ದೇಶವನ್ನು ಹೊಂದಿದ್ದೆ. ಅದಕ್ಕೆ ಕಾಂಗ್ರೆಸ್‌ ನಾಯಕರೂ ಕೂಡ ಸಮ್ಮತಿ ಸೂಚಿಸಿದ್ದರು. ಆದರೆ ನಾನು ದುಬೈನಲ್ಲಿದ್ದ ವೇಳೆ ನನ್ನ ತೇಜೋವಧೆ ಮಾಡುವ ಸಲುವಾಗಿ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹರಿ ಬಿಡಲಾಗಿದೆ. ಇದೆಲ್ಲಾ ಯಾರು ಮಾಡಿದ್ದಾರೆ ಎನ್ನುವುದನ್ನು ಸೈಬರ್ ಕ್ರೈಮ್‌ನವರು ಕಂಡುಹಿಡಿಯಬೇಕೆಂದು ನವ್ಯಶ್ರೀ ಹೇಳಿದ್ದಾರೆ.

I went to Mumbai for Collect Information about Rebel MLAs, not for the Honey Trap: Navyashree

ಸುಳ್ಳು ‌ದೂರನ್ನು ತಿರಸ್ಕರಿಸಲು ಮನವಿ

ನನ್ನ ಮೇಲೆ ರಾಜಕುಮಾರ ಟಾಕಳೆ ನೀಡಿರುವ ಸುಳ್ಳು ಹನಿಟ್ರ್ಯಾಪ್ ‌ದೂರನ್ನು ತಿರಸ್ಕೃತ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ. ವಿಡಿಯೋ ನಡೆದಿದುರೋ ಕುಮಾರ ಕೃಪ ಸರಕಾರಿ ಅತಿಥಿ ಗೃಹದಲ್ಲಿ, ಇದನ್ನು ದುರುಪಯೋಗ ಪಡಿಸಿಕೊಂಡಿರುವುದರ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇನೆ. ಶುಕ್ರವಾರ ಸಂಜೆ ಬೆಳಗಾವಿಯಲ್ಲಿ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿದ್ದೇನೆ. ಡಿಸಿಪಿ ಸ್ನೇಹಾ ಮೇಡಮ್‌ ಬಳಿ ನನಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದೇನೆ. ಮನೆಯಲ್ಲಿ ಕೂಡಿಹಾಕಿ ಹಲ್ಲೆ ಮಾಡಿರುವ ಬಗ್ಗೆಯೂ ತಿಳಿಸಿದ್ದೇನೆ ಎಂದರು.

I went to Mumbai for Collect Information about Rebel MLAs, not for the Honey Trap: Navyashree

50 ಲಕ್ಷ ಬೇಡಿಕೆ ಸುಳ್ಳು ಆರೋಪ

ನಾಲ್ಕು ವರ್ಷಗಳಿಂದ ನವ್ಯಶ್ರೀ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. 50 ಲಕ್ಷ ರೂ ಬೇಡಿಕೆಯಿಟ್ಟಿದ್ದರು, ಈಗಾಗಲೆ 5 ಲಕ್ಷ ಪಡೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜಕುಮಾರ ನನ್ನ ಗಂಡ, ಆತ ನನಗೆ ಬೇರೆ ಮನೆ ಮಾಡುವುದಾಗಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಹೇಳಿದ್ದರು. ಆದರೆ ಬೆಳಗಾವಿಯ ಶಿವಬಸವ ನಗರದ ಮಹಿಳಾ ಪಿಜಿಯಲ್ಲಿ ನನ್ನನ್ನು ಸೇರಿಸಿ ಹೋದವರು ಎರಡು ತಿಂಗಳು ಅತ್ತ ತಿರುಗಿ ನೋಡಿಲ್ಲ. ಆಡಿಯೋ ಕ್ಲಿಪ್‌ನಲ್ಲಿ‌ ಮಾತನಾಡಿದ ಮೇಲೆಯೇ ನಾನು ಆತನ ಮನೆಗೆ ಬಂದಿದ್ದೇನೆ. ರಾಜಕುಮಾರ ಟಾಕಳೆ ಒಬ್ಬ ಬಿ ಗ್ರೂಪ್ ನೌಕರನಾಗಿದ್ದಾನೆ. ಹಾಗಿದ್ದ ಮೇಲೆ 50 ಲಕ್ಷ ರೂ ಕೊಡುವುದಕ್ಕೆ ಆತನಿಂದ ಸಾಧ್ಯವಾ? 50 ಲಕ್ಷ ಹಣದ ಬೇಡಿಕೆ ಇಟ್ಟಿದ್ದೇನೆ ಎಂಬುದು ಸುಳ್ಳು ಆರೋಪ ಎಂದು ಹೇಳಿದ್ದಾರೆ.

English summary
I went to Mumbai for Collect Information about Rebel MLAs, not for the Honey Trap: Navyashree
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X