ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನಾನು ರಾಜೀನಾಮೆ ನೀಡಿಲ್ಲ: ರಮೇಶ್ ಜಾರಕಿಹೊಳಿ

|
Google Oneindia Kannada News

ಬೆಳಗಾವಿ, ನವೆಂಬರ್ 2: ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ನಾನು ರಾಜೀನಾಮೆ ನೀಡಿಲ್ಲ, ಮೈತ್ರಿ ಸರ್ಕಾರದ ನಿಲುವು ಸರಿ ಇಲ್ಲ ಎಂದು ರಾಜೀನಾಮೆ ನೀಡಿದ್ದೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜೀನಾಮೆ ನೀಡಿದ್ದರ ಹಿಂದೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶವಿರಲಿಲ್ಲ. ಮೈತ್ರಿ ಸರ್ಕಾರದ ನಡವಳಿಕೆಯಿಂದ ಬೇಸರವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

"ಎಲ್ಲ ದಾಖಲೆಗಳನ್ನೂ ಬಿಡುಗಡೆ ಮಾಡ್ತೀನಿ"; ಸತೀಶ್ ಜಾರಕಿಹೊಳಿಯಿಂದ ಮತ್ತೊಂದು ಬಾಂಬ್

ಲಕ್ಷ್ಮಣ ಸವದಿ ದೊಡ್ಡ ಮನುಷ್ಯ , ನಾವು ಸಣ್ಣ ಜನ ಲಕ್ಷ್ಮಣ ಸವದಿಗೆ ನಮಗೆ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಿದೆಯೇ ಎಂದು ಮತ್ತೊಮ್ಮೆ ಅಸಮಾಧಾನ ತೋಡಿಕೊಂಡರು.

I Have Not Resigned To Bring The BJP Government To Power

ಬಿಎಸ್ ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ ಎಂದು ಕೇಳಿದ್ದೇನೆ, ಸತೀಶ್ ಜಾರಕಿಹೊಳಿ ಆರೋಪಗಳಿಗೆ ಬಹಿರಂಗವಾಗಿ ಉತ್ತರ ನೀಡುವೆ, ಒಮ್ಮೆ ತನ್ನ ಸಾಲಗಾರ ಅಂತಾರೆ, ಇನ್ನೊಮ್ಮೆ ಆಸ್ತಿ ಮಾಡಿದ್ದಾನೆ ಅಂತಾರ, ಯಾವುದಾದರೂ ಒಂದನ್ನು ಹೇಳಲಿ ಎಂದರು.

ನಾವು ಸತೀಶ್ ಜಾರಕಿಹೊಳಿ ಆಪ್ತನನ್ನು ಕರೆದು ಕೇಳಿದ್ದೇನೆ, ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು, ಸತೀಶ್ ಗೆ ಈಗ ಸ್ವಲ್ಪ ಮೈಂಡ್ ಔಟ್ ಆಗಿದೆ. ಧಾರವಾಡದ ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಎಂದರು. ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ರಮೇಶ್‌ ಜಾರಕಿಹೊಳಿಗೆ ಸಾಥ್ ನೀಡಿದರು.

English summary
Disqualified MLA Ramesh Jarkiholi said that I have not resigned to bring BJP to power, I have resigned I have resigned alliance government is not right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X