ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮ್ಮನ್ನು ತಾವೇ ಬೈದುಕೊಂಡ ರಮೇಶ್ ಜಾರಕಿಹೊಳಿ

|
Google Oneindia Kannada News

Recommended Video

ತಮ್ಮನ್ನು ತಾವೇ ಬೈದುಕೊಂಡ ರಮೇಶ್ ಜಾರಕಿಹೊಳಿ | Oneindia Kannada

ಬೆಳಗಾವಿ, ಜನವರಿ 02: 'ನಾನು ರಾಜಕೀಯದಲ್ಲಿರಲು ನಾಲಾಯಕ್' ಎಂದು ಬಿಜೆಪಿ ಶಾಸಕ, ಮಾಜಿ ಅನರ್ಹ ರಮೇಶ್ ಜಾರಕಿಹೊಳಿ ತಮ್ಮನ್ನು ತಾವೇ ಬೈದುಕೊಂಡಿದ್ದಾರೆ.

ಬೆಳಗಾವಿ ಗ್ರಾಮೀಣ ಮತ ಕ್ಷೇತ್ರ ಮಹಾರಾಷ್ಟ್ರಕ್ಕೆ ಸೇರಬೇಕು, ಅದು ಮರಾಠಿಗರ ಹಕ್ಕು ಎಂದು ಕೆಲವು ದಿನಗಳ ಹಿಂದಷ್ಟೆ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದು ವಿವಾದ ಎಬ್ಬಿಸಿತ್ತು.

ಬಿಜೆಪಿಯಲ್ಲಿ ಏನಿದು ಆರೋಗ್ಯ ಸಚಿವ ಶ್ರೀರಾಮುಲು ಮುನಿಸು?ಬಿಜೆಪಿಯಲ್ಲಿ ಏನಿದು ಆರೋಗ್ಯ ಸಚಿವ ಶ್ರೀರಾಮುಲು ಮುನಿಸು?

ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, 'ನಾನು ಕನ್ನಡ ವಿರೋಧಿ ಹೇಳಿಕೆ ನೀಡಿಲ್ಲ. ಆ ರೀತಿ ಹೇಳಿಕೆ ನೀಡಿದ್ದರೆ ನಾನು ರಾಜಕೀಯದಲ್ಲಿ ಇರಲು ನಾಲಾಯಕ್' ಎಂದು ಹೇಳಿದ್ದಾರೆ.

I Am Unfit To Be In Politics If I Talk Against Karnataka: Ramesh Jarkiholi

ಗೋಕಾಕ್‌ ನಲ್ಲಿ ನಡೆದ ಕನ್ನಡ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ ತಮ್ಮ ಹೇಳಿಕೆ ಸ್ಪಷ್ಟನೆ ನೀಡಿರುವ ರಮೇಶ್ ಜಾರಕಿಹೊಳಿ, 'ಮಹಾರಾಷ್ಟ್ರದ ಗಡಿ ಕ್ಯಾತೆ ವಿರುದ್ಧ ನೂರಕ್ಕೆ-ನೂರರಷ್ಟು ನಾನು ಕನ್ನಡಿಗರ ಪರ ಇದ್ದೇನೆ. ಮಹಾರಾಷ್ಟ್ರದಲ್ಲಿ ನಾನು ಮಾಡಿದ ಭಾಷಣ ತಿರುಚಲಾಗಿದೆ' ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ-ಸಿದ್ದರಾಮಯ್ಯ ಸ್ವಾರಸ್ಯಕರ ಸಂಭಾಷಣೆರಮೇಶ್ ಜಾರಕಿಹೊಳಿ-ಸಿದ್ದರಾಮಯ್ಯ ಸ್ವಾರಸ್ಯಕರ ಸಂಭಾಷಣೆ

'ಕನ್ನಡಪರ ಹೋರಾಟಕ್ಕೆ ನನ್ನ ಬೆಂಬಲ ಸದಾ ಇದೆ. ಕನ್ನಡ ನಾಡು, ನುಡಿ, ಕನ್ನಡಿಗರಿಗೆ ಅಪಮಾನವಾದರೆ ನಾನು ಯಾವುದೇ ತ್ಯಾಗಕ್ಕಾದರೂ ಸಿದ್ದನಿದ್ದೇನೆ, ರಾಜ್ಯಕ್ಕೆ ಕೆಟ್ಟದ್ದು ಮಾಡಿ ರಾಜಕಾರಣ ಮಾಡುವಂತಹ ಅಗತ್ಯ ನನಗಿಲ್ಲ. ಬಿಜೆಪಿ ಪಕ್ಷದ ಮರಾಠ ಮುಖಂಡರಿಗೆ ನೀವೆಲ್ಲಾ ಒಂದಾಗಬೇಕು. ಇಲ್ಲಿ ನಮಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದೇನೆ' ಎಂದು ಹೇಳಿದರು.

ಸಿಎಂ ಬಿಎಸ್ವೈಗೆ ಸರಿಯಾಗಿ ಉಗಿದಿದ್ದೇನೆ: ಪ್ರಸನ್ನಾನಂದ ಸ್ವಾಮೀಜಿಸಿಎಂ ಬಿಎಸ್ವೈಗೆ ಸರಿಯಾಗಿ ಉಗಿದಿದ್ದೇನೆ: ಪ್ರಸನ್ನಾನಂದ ಸ್ವಾಮೀಜಿ

ಅದೇ ವೇದಿಕೆಯಲ್ಲಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸಿ ಮಾತನಾಡಿ, 'ಕನ್ನಡ ವಿರೋಧಿ ಹೇಳಿಕೆ ನೀಡಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಮೇಶ್ ಹೇಳಿದ್ದಾರೆ, ರಮೇಶ್ ಜಾರಕಿಹೊಳಿ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆಂಬುದು ಮಾಧ್ಯಮಗಳ ಸೃಷ್ಟಿ' ಎಂದಿದ್ದಾರೆ.

English summary
BJP MLA Ramesh Jarkiholi said 'if i talked against Karnataka i am unfit to be in politics'. He said i am not against Karnataka or pro Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X