ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ''ಹೌದು ಹುಲಿಯಾ'' ಎಂದವ ಇಂದು ಬಿಜೆಪಿಗೆ

|
Google Oneindia Kannada News

Recommended Video

ನಿನ್ನೆ ವರೆಗೂ ಸಿದ್ದರಾಮಯ್ಯ, ಇವತ್ತು ಯಡಿಯೂರಪ್ಪ..? | Oneindia Kannada

ಕಾಗವಾಡ, ಡಿಸೆಂಬರ್ 10: ಬೆಳಗಾವಿ ಜಿಲ್ಲೆಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಕೇಳಿ ಬಂದ ''ಹೌದು ಹುಲಿಯಾ'' ಸಾಮಾಜಿಕ ಜಾಲ ತಾಣಗಳಲ್ಲಿ ಸೇರಿ ಸಕತ್ ಟ್ರೆಂಡ್ ಆಗಿದ್ದು ಹಳೆ ಸುದ್ದಿ, ಹೌದು ಹುಲಿಯಾ ಎಂದ ವ್ಯಕ್ತಿ ಯಾರು ಎಂದು ಹುಡುಕಿದ್ದು ಆಯ್ತು. ಈ ಸುದ್ದಿ ಏನೆಂದರೆ, "ಹೌದು ಹುಲಿಯಾ" ಖ್ಯಾತಿಯ ಪೀರಪ್ಪ ಕಟ್ಟೀಮನಿ ಅವರು ಉಪ ಚುನಾವಣೆ ಫಲಿತಾಂಶ ಬಳಿಕ ಪಕ್ಷ ನಿಷ್ಠ ಬದಲಾಯಿಸಿದ್ದಾರೆ.

ಐನಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡು ಕಾಂಗ್ರೆಸ್ ಪರ ಘೋಷಣೆ ಕೂಗಿದ್ದ ಪೀರಪ್ಪ ಅವರು ನಿನ್ನೆ ಉಪ ಚುನಾವಣೆ ಫಲಿತಾಂಶದ ಬಳಿಕ ಕಮಲ ಪಕ್ಷದತ ಮುಖ ಮಾಡಿದ್ದಾರೆ.

ಸಕತ್ ವೈರಲ್ ಆಗ್ತಿದೆ 'ಹೌದ್ ಹುಲಿಯ'......!ಸಕತ್ ವೈರಲ್ ಆಗ್ತಿದೆ 'ಹೌದ್ ಹುಲಿಯ'......!

ಚುನಾವಣೆ ಫಲಿತಾಂಶ ಬಳಿಕ ಕಾಗವಾಡದ ವಿಜೇತ ಅಭ್ಯರ್ಥಿ ಶ್ರೀಮಂತ ಪಾಟೀಲ್ ಅವರ ವಿಜಯೋತ್ಸವದಲ್ಲಿ ಕಾಣಿಸಿಕೊಂಡು, ಕಮಲ ಬಾವುಟ ಹಿಡಿದು ಬಿಜೆಪಿಗೆ ಜೈಕಾರ ಹಾಕಿದ್ದಾರೆ.

 Houdu Huliya fame Peerappa Kattimani joins BJP

ಹೌದು ಹುಲಿಯಾ ಕೇಳಿ ಬಂದಿದ್ದೆಲ್ಲಿ?: ಸಿದ್ದರಾಮಯ್ಯ ಅವರು ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾಷಣ ಮಾಡುವಾಗ ವ್ಯಕ್ತಿಯೊಬ್ಬ ಕುಡಿದು ಆಡಿದ ಮಾತು ಇದೀಗ ವಾಟ್ಸಪ್, ಫೇಸ್ಬುಕ್ ಹಾಗೂ ಟಿಕ್‌ ಟಾಕ್ ನಲ್ಲಿ ಭಾರೀ ಸದ್ದು ಮಾಡಿತ್ತು. ಟಿಕ್ ಟಾಕ್ ವಿಡಿಯೋಗಳು ಬಂದಿದ್ದು, ಚುನಾವಣೆ ಫಲಿತಾಂಶ ಬಳಿಕ ಪ್ರಮುಖ ಮಾಧ್ಯಮಗಳ ಹೆಡ್ ಲೈನ್ ನಲ್ಲೂ ಸಿದ್ದರಾಮಯ್ಯರನ್ನು ಹೊಗಳಲು ತೆಗಳಲು "ಹೌದು ಹುಲಿಯಾ'' ಬಳಕೆಯಾಗಿದೆ.

ಅಂದು ಸಿದ್ದರಾಮಯ್ಯ ಮಾತನಾಡುವಾಗ 'ಇಂದಿರಾಗಾಂಧಿ ಏನು ಮಾಡಿದರು? ಇಡೀ ದೇಶಕ್ಕಾಗಿ ಪ್ರಾಣ ಕೊಟ್ಟರು' ಎಂದಿದ್ದರು. ಮಾತಿನ ನಡುವೆಯೇ ಬಹಿರಂಗ ಸಭೆಯ ಮುಂದೆ ಕುಳಿತು ಭಾರೀ ಉತ್ಸಾಹದಿಂದ ಸಿದ್ದರಾಮಯ್ಯ ಮಾತು ಕೇಳುತ್ತಿದ್ದ ವ್ಯಕ್ತಿಯೊಬ್ಬ ಸಿದ್ದರಾಮಯ್ಯಗೆ 'ಹೌದು ಹುಲಿಯಾ' ಎಂದು ಪಕ್ಕಾ ಜವಾರಿ ಭಾಷೆಯಲ್ಲಿ ಪ್ರತಿಕ್ರಿಯಿಸಿ ಹುರಿದುಂಬಿಸಿದ್ದರು.

ಆದರೆ ಸಿದ್ದರಾಮಮ್ಯ ಅವರು 'ಯೇ ಯಾರಯ್ಯ ಕಳಸ್ರೀ ಆಚೆ, ಬೆಳಿಗ್ಗೆ ಬೆಳಿಗ್ಗೆನೇ ಕುಡ್ಕೊಂಡು ಬಂದ ಬಿಟ್ಟಿದಾನೆ' ಎಂದು ತಮ್ಮದೇ ಶೈಲಿಯಲ್ಲಿ ಗದರಿದ್ದರು. ಪೊಲೀಸರು ಬಂದು ಪೀರಪ್ಪ ಅವರನ್ನು ಹೊರಕ್ಕೆ ಕಳಿಸಲು ಯತ್ನಿಸಿದ್ದರು. ನಂತರ ಇಲ್ಲಾ ಗಪ್ ಚುಪ್ ಆಗಿರ್ತೇನೆ ಎಂದು ಹೇಳಿದ್ದರಿಂದ ಸುಮ್ಮನಾಗಿದ್ದರು. ಈ ಘಟನೆ ಬಗ್ಗೆ ಮತ್ತೊಂದು ಪ್ರಚಾರ ಸಭೆಯಲ್ಲಿ ಪ್ರಸ್ತಾಪಿಸಿದ್ದ ಸಿದ್ದರಾಮಯ್ಯ, ಹೇಗೆ ಹೌದು ಹುಲಿಯಾ ವೈರಲ್ ಆಗಿಬಿಟ್ಟಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಸಿದ್ದರಾಮಯ್ಯ ಅವರನ್ನು ಹುಲಿಯಾ ಅಲ್ಲ ಇಲಿಯಾ ಎಂದು ಬಿಜೆಪಿಯವರು ಲೇವಡಿ ಮಾಡಿದ್ದನ್ನು ಸ್ಮರಿಸಬಹುದು.

English summary
"Houdu Huliya" fame Peerappa Kattimani has joined BJP after By elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X