ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷಪ್ರಸಾದದಲ್ಲಿ ಕೀಟನಾಶಕದ ರಾಸಾಯನಿಕ ಪತ್ತೆ: ಪರಮೇಶ್ವರ್‌

|
Google Oneindia Kannada News

ಬೆಳಗಾವಿ, ಡಿಸೆಂಬರ್ 17: ಚಾಮರಾಜನಗರದ ಸುಳ್ವಾಡ ಮಾರಮ್ಮ ದೇವಾಲಯದ ವಿಷಯುಕ್ತ ಪ್ರಸಾದದಲ್ಲಿ ಕೀಟನಾಶಕದಲ್ಲಿ ಕಂಡು ಬರುವ ಮಾನೋಪ್ರೋಟ್ ರಾಸಾಯನಿಕ ಅಂಶವಿದೆ ಎಂದು ತಿಳಿದು ಬಂದಿದೆ ಎಂದು ಗೃಹ ಸಚಿವ ಪರಮೇಶ್ವರ್ ಅಧಿವೇಶನದಲ್ಲಿ ಮಾಹಿತಿ ನೀಡಿದರು.

ಚಾಮರಾಜನಗರ ಜಿಲ್ಲೆಯ ದೇವಸ್ಥಾನದಲ್ಲಿ ನಡೆದ ದುರ್ಘಟನೆಯ ತನಿಖೆಗೆ ಆದೇಶಿಸಲಾಗಿದೆ. ಸಾವಿಗೆ ಕಾರಣವಾದ ಪ್ರಸಾದವನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇತರೆ ಅಂಶಗಳೂ ಬೆಳಕಿಗೆ ಬರಲಿವೆ ಎಂದು ಅವರು ಹೇಳಿದರು.

higher investigation is running on Temple tragedy: Parameshwar

ಪ್ರಕರಣ ಕುರಿತಂತೆ ಈಗಾಗಲೇ ತನಿಖೆ ಪ್ರಾರಂಭಿಸಿ ಏಳು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕೆಲವರು ಹಳ್ಳಿಯನ್ನು ತೊರೆದಿದ್ದು, ಅವರಿಗಾಗಿ ಶೋಧ ಕಾರ್ಯ ಕೂಡಾ ಪ್ರಾರಂಭವಾಗಿದೆ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸದನಕ್ಕೆ ತಿಳಿಸಿದರು.

ವಿಷಪ್ರಸಾದ ತಿಂದು ಮೃತರಾದವರಿಗೆ ಅಧಿವೇಶನದಲ್ಲಿ ಸಂತಾಪ ವಿಷಪ್ರಸಾದ ತಿಂದು ಮೃತರಾದವರಿಗೆ ಅಧಿವೇಶನದಲ್ಲಿ ಸಂತಾಪ

ಸುಳ್ವಾಡಿ ದುರ್ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಮಾನವೀಯತೆಯ ದೃಷ್ಠಿಯಿಂದ ಸಕ್ಕರೆ ಕಾರ್ಖಾನೆಯ ದುರಂತದಲ್ಲಿ ಮಡಿದವರ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಹೇಳಿದರು.

ವಿಷಪ್ರಸಾದ: ಪೋಷಕರ ಕಳೆದುಕೊಂಡ ಮಕ್ಕಳ ದತ್ತು ಪಡೆಯಲಿದೆ ಆಳ್ವಾಸ್
ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಅವರು ಸುಳ್ವಾಡಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಐದು ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಇದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳಡಿ ದೊರೆಯುವ ಸವಲತ್ತುಗಳನ್ನೂ ವಿಸ್ತರಿಸುವಲ್ಲಿ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ವಿಷಪ್ರಸಾದ ಸೇವನೆ : ದಾರಿತಪ್ಪಿದ ಚಾಲಕನಿಂದ 35 ಜೀವ ಉಳಿಯಿತು ವಿಷಪ್ರಸಾದ ಸೇವನೆ : ದಾರಿತಪ್ಪಿದ ಚಾಲಕನಿಂದ 35 ಜೀವ ಉಳಿಯಿತು

English summary
Higher investigation team is form to investigate on temple tragedy of Chamarajanagar said home minster G Parameshwar. He give information to session today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X