ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿಯ ಕಿತ್ತೂರು ಉತ್ಸವದ ಪ್ರಮುಖ ಆಕರ್ಷಣೆ ಹೆಲಿ ಟೂರಿಸಂ

|
Google Oneindia Kannada News

ಬೆಳಗಾವಿ, ಅಕ್ಟೋಬರ್ 21 : ಈ ಬಾರಿಯ ಕಿತ್ತೂರು ಉತ್ಸವದಲ್ಲಿ ಹೆಲಿ ಟೂರಿಸಂ ಪ್ರಮುಖ ಆಕರ್ಷಣೆಯಾಗಲಿದೆ. ಅಕ್ಟೋಬರ್ 23 ರಿಂದ 25ರ ತನಕ 2018ನೇ ಸಾಲಿನ ಕಿತ್ತೂರು ಉತ್ಸವ ನಡೆಯಲಿದೆ. ಬಾಹುಬಲಿ ಟೂರಿಸಂ ಸಂಸ್ಥೆ ಹೆಲಿಕಾಪ್ಟರ್ ಸೇವೆ ನೀಡಲಿದೆ.

ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ತನಕ ಕಿತ್ತೂರು ಕೋಟೆ ಮತ್ತು ಕಿತ್ತೂರು ನಗರವನ್ನು ಹೆಲಿಕಾಪ್ಟರ್ ಮೂಲಕ ನೋಡಬಹುದಾಗಿದೆ. ಸುಮಾರು 8 ರಿಂದ 10 ನಿಮಿಷಗಳ ಕಾಲ ಹೆಲಿಕಾಪ್ಟರ್ ಮೂಲಕ ಕಿತ್ತೂರಿನ ಅಂದವನ್ನು ಸವಿಯಬಹುದಾಗಿದೆ.

ಮತ್ತೆ ವಿವಾದ ಸೃಷ್ಟಿಸಿದ ರಾಣಿ ಚೆನ್ನಮ್ಮಳ ಜಯಂತಿಮತ್ತೆ ವಿವಾದ ಸೃಷ್ಟಿಸಿದ ರಾಣಿ ಚೆನ್ನಮ್ಮಳ ಜಯಂತಿ

ಮೈಸೂರು ದಸರಾ, ಹಂಪಿ ಉತ್ಸವ ಮತ್ತು ಗದಗ ಉತ್ಸವದಲ್ಲಿ ಹೆಲಿಕಾಪ್ಟರ್ ಸೇವೆ ನೀಡಿದ್ದ ಹುಬ್ಬಳ್ಳಿಯ ಬಾಹುಬಲಿ ಟೂರಿಸಂ ಸಂಸ್ಥೆ ಕಿತ್ತೂರಿನಲ್ಲಿಯೂ ಹೆಲಿಕಾಪ್ಟರ್ ಸೇವೆ ನೀಡಲಿದೆ. ಜಿಲ್ಲಾಡಳಿತ, ಉತ್ಸವ ಸಮಿತಿ, ಪೊಲೀಸರು ಅಗತ್ಯ ಸಹಕಾರ ನೀಡಲಿದ್ದಾರೆ.

Kittur Utsav 2018

8 ರಿಂದ 10 ನಿಮಿಷದ ಹಾರಾಟಕ್ಕೆ 3 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಹೆಲಿಕಾಪ್ಟರ್‌ನಲ್ಲಿ 4 ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಬಾಹುಬಲಿ ಟೂರಿಸಂ ಸಂಸ್ಥೆ ಹೆಲಿ ಟೂರಿಸಂ ಸೇವೆ ನೀಡುವುದಕ್ಕೆ 20 ಜನರ ತಂಡವನ್ನು ಸಿದ್ಧಪಡಿಸಿದೆ.

ಬೆಳಗಾವಿ: ಸಂಬಳ ನೀಡದಿದ್ದಕ್ಕೆ ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನಬೆಳಗಾವಿ: ಸಂಬಳ ನೀಡದಿದ್ದಕ್ಕೆ ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನ

ಡೊಂಬರಕೊಪ್ಪ ಪ್ರವಾಸಿ ಮಂದಿರದ ಬಳಿ ಹೆಲಿಕಾಪ್ಟರ್ ನಿಲುಗಡೆ ಮಾಡಲಾಗುತ್ತದೆ. ಅಕ್ಟೋಬರ್ 23ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೆಲಿ ಟೂರಿಸಂ ಸೇವೇಗೆ ಚಾಲನೆ ನೀಡಲಿದ್ದಾರೆ.

ಬೆಳಗಾವಿ ರಾಜಕಾರಣದಿಂದ ಹೊಸ ಸುದ್ದಿಯೊಂದು ಹೊರಬಂತುಬೆಳಗಾವಿ ರಾಜಕಾರಣದಿಂದ ಹೊಸ ಸುದ್ದಿಯೊಂದು ಹೊರಬಂತು

ಸಿಬ್ಬಂದಿಗಳು ಪ್ರಯಾಣಿಕರನ್ನು ಹೆಲಿಕಾಪ್ಟರ್‌ಗೆ ಹತ್ತಿಸುವ, ಇಳಿಸುವ ಹೊಣೆ ನೋಡಿಕೊಳ್ಳಲಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣ ಮಾಡುವವರಿಗೆ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ.

English summary
Heli Tourism main attraction of Kittur Utsav 2018. Three-day Kittur Utsav will be held from October 23 to 25. People to pay 3 thousand Rs for 8 to 10 minute helicopter ride.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X