ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Just in : ಬೆಳಗಾವಿಯಲ್ಲಿ ಸೋಮವಾರವೂ ಮಳೆ ಆರ್ಭಟ, ಕಟ್ಟಡ ಕುಸಿತ, ಶಾಲೆಗೆ ರಜೆ

|
Google Oneindia Kannada News

ಬೆಳಗಾವಿ, ಆಗಸ್ಟ್‌ 8: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಆಗುತ್ತಿದೆ. ಸೋಮವಾರವೂ ಕೂಡ ತುಂತುರು ಮಳೆ ಶುರುವಾಗಿದ್ದು ಬೆಳ್ಳಂಬೆಳಗ್ಗೆ ಜನತೆಯನ್ನು ಕಂಗಾಲಾಗಿಸಿದೆ. ಹಲವು ಕಡೆ ಮನೆಗಳಿಗೆ, ಕಾಂಪ್ಲೆಕ್ಸ್‌ಗಳಿಗೆ ನೀರು ನುಗ್ಗಿದೆ.

ಬೆಳಗಾವಿ ನಗರದಲ್ಲಿ ಭಾನುವಾರ ಸುರಿದ ಮಳೆಗೆ ಮನೆಯೊಂದು ಕುಸಿದಿದ್ದು, ವೃದ್ಧ ದಂಪತಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸವರಾಜ ಹಂಗರಕಿ, ಶಂಕರೆವ್ವ ಎಂಬ ದಂಪತಿ ವಾಸವಿದ್ದ ಮನೆಯ ಚಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಮನೆ ಕುಸಿದಿರುವ ಪರಿಣಾಮ ದಂಪತಿ ಮತ್ತೊಬ್ಬರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ತುಂಬಿ ಹರಿಯುತ್ತಿರುವ ನದಿಗಳು: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆರಾಜ್ಯದಲ್ಲಿ ತುಂಬಿ ಹರಿಯುತ್ತಿರುವ ನದಿಗಳು: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ವಡಗಾವಿಯಲ್ಲಿರುವ ಪಾಟೀಲ್ ಗಲ್ಲಿಯಲ್ಲಿ ರಂಜಿತ್ ಚವ್ಹಾಣ್ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಅದೃಷ್ಟವಶಾತ್‌ ಗೋಡೆ ಕುಸಿಯುವಾಗಲೇ ಮನೆಯಲ್ಲಿದ್ದವರು ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ ಮನೆಯಲ್ಲಿದ್ದ ಆಹಾರ ಸಾಮಗ್ರಿಗಳು, ಬಟ್ಟೆ ಎಲ್ಲವೂ ಮಣ್ಣಿನಡಿ ಸಿಲುಕಿದ್ದು, ಬೀದಿಗೆ ಬಿದ್ದಿರುವ ಕುಟುಂಬ ಪರಿಹಾರಕ್ಕಾಗಿ ಪರಿತಪಿಸುತ್ತಿದ್ದಾರೆ.

Heavy Rainfall in Continues in Bealagavi,Holiday diclare for Schools

ಧಾರಾಕಾರ ಮಳೆಯ ಕಾರಣ ಬೆಳಗಾವಿ ನಗರ, ಬೆಳಗಾವಿ ತಾಲೂಕು ಮತ್ತು ಖಾನಾಪುರ ತಾಲೂಕುಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ಮಳೆ ಆಗುತ್ತಿದ್ದ ಕಾರಣ ಜಿಲ್ಲಾಧಿಕಾರಿ ಈ ಘೋಷಣೆ ಮಾಡಿದ್ದಾರೆ. ಅಲ್ಲದೆ ಮಳೆ ಕಾರಣ ಮಕ್ಕಳು ಕೂಡ ಕೆಲವೇ ಬಂದಿ ಶಾಲೆಗ ದಾವಿಸಿದ್ದರು, ಆದರೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.

Heavy Rainfall in Continues in Bealagavi,Holiday diclare for Schools

ಭತ್ತದ ಗದ್ದೆ ಜಲಾವೃತ
ಭಾರಿ ಮಳೆಗೆ ಬಳ್ಳಾರಿ ನಾಲೆ ತುಂಬಿ ಹರಿಯುತ್ತಿರುವ ಪರಿಣಾಮ ತಾಲೂಕಿನ ಯಳ್ಳೂರು, ದಾಮಣೆ, ವಡಗಾಂವಿ, ಆನಗೋಳ, ಜುನೇ ಬೆಳಗಾವಿ ಸೇರಿ ನಾಲಾ ಸುತ್ತಮುತ್ತಲಿನ ಪ್ರದೇಶದ ಜಮೀನಿಗೆ ನೀರು ನುಗ್ಗಿದ್ದು, ಭತ್ತದ ಬೆಳೆ ಮತ್ತೆ ಜಲಾವೃತವಾಗಿದೆ. ಕಳೆದ 15 ದಿನಗಳ ಹಿಂದೆ ಸುರಿದಿದ್ದ ಮಳೆಯಿಂದ ಜಮೀನು ಜಲಾವೃತವಾಗಿ‌ ಬೆಳೆ ಕೊಳೆತು ಹೋಗಿತ್ತು. ಕೆಲವು ರೈತರು ಮತ್ತೆ ನಾಟಿ ಮಾಡಿದ್ದರು. ಆದರೆ ಮತ್ತೆ ಜಲಾವೃತವಾಗಿದ್ದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

Recommended Video

ಕಾಮಗಾರಿ ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ಭೈರತಿ ಸಿಡಿಲು | Oneindia Kannada

English summary
Residents amd shopkeepers of some areas in Belagavi suffered as water entered their houses and shops on Sunday due to heavy rain. Dc diclared holiday for schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X