ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಣಾಳಿಕೆಯಲ್ಲಿ ಉಚಿತ ಅಂತ್ಯಸಂಸ್ಕಾರ: ಕ್ಷಮೆಯಾಚಿಸಿದ ಗೋವಿಂದ ಕಾರಜೋಳ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 30: ರಾಜ್ಯದ ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಸೆ. 3ರಂದು ಮತದಾನ ನಡೆಯಲಿದೆ.

ಸೆ. 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಬಿಜೆಪಿಯಿಂದ ಉಚಿತ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ, "ಬಡವರು, ನಿರ್ಗತಿಕರು ಶವಸಂಸ್ಕಾರಕ್ಕೆ ಹಣ ಇಲ್ಲದವರು ಇದ್ದಾರೆ. ಕೆಲವರು ಶವಸಂಸ್ಕಾರದ ಹಣಕ್ಕೆ ಕೈವೊಡ್ಡಿದವರು ಇದ್ದಾರೆ. ಅವರಿಗೆ ಅನುಕೂಲ ಆಗಲಿ ಎಂದು ಪ್ರಣಾಳಿಕೆಯಲ್ಲಿ 'ಉಚಿತ ಅಂತ್ಯಸಂಸ್ಕಾರ' ಎಂದು ಹೇಳಿದ್ದಾರೆ. ಇದರಿಂದ ಸಾರ್ವಜನಿಕರ ಮನಸ್ಸಿಗೆ ನೋವಾಗಿದರೆ ಕ್ಷಮಿಸಿ,'' ಎಂದು ಕೇಳಿಕೊಂಡಿದ್ದಾರೆ.

ಕಲಬುರಗಿ ಪಾಲಿಕೆ ಚುನಾವಣೆ: ವಿಜಯೇಂದ್ರ, ಕುಮಾರಸ್ವಾಮಿ ಮತಬೇಟೆಕಲಬುರಗಿ ಪಾಲಿಕೆ ಚುನಾವಣೆ: ವಿಜಯೇಂದ್ರ, ಕುಮಾರಸ್ವಾಮಿ ಮತಬೇಟೆ

"ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಬಿಟ್ಟರೆ ಬೆಳಗಾವಿ ನಗರಕ್ಕೆ ಹೆಚ್ಚು ಮಹತ್ವ ಇದೆ. ಬೆಳಗಾವಿ ಮಹಾನಗರ ಪಾಲಿಕೆಗೆ 58 ವಾರ್ಡ್‍ಗಳ ಪೈಕಿ 56 ವಾರ್ಡ್‍ಗಳಲ್ಲಿ ಸ್ಪರ್ಧೆಯಾಗುತ್ತಿದೆ. ಬೆಳಗಾವಿ ಸುತ್ತಮುತ್ತ ನಾಲ್ಕು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು. ಒಂದೂವರೆ ವರ್ಷದೊಳಗಾಗಿ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಳಿಸುತ್ತೇವೆ," ಎಂದು ಭರವಸೆ ನೀಡಿದರು.

Belagavi: Govind Karajol Apologized For Free Cremation In BJP Manifesto

"ನಮ್ಮವರು ಅಚಾತುರ್ಯದಿಂದ ಮಾಡಿದರೆ, ಜನರ ಮನಸ್ಸಿಗೆ ನೋವಾಗಿದೆ ವಿಷಾದಿಸುತ್ತೇನೆ. ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಅರವತ್ತು ವರ್ಷ ಆಡಳಿತ ಮಾಡಿದೆ. ಏನು ಸಾಧನೆ ಮಾಡಿದೆ ಹೇಳು ಮಾರಾಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಪ್ರಶ್ನಿಸಿದ್ದಾರೆ. ಸುರೇಶ್ ಅಂಗಡಿ ಸಾವು ಕೋವಿಡ್‍ನಿಂದ ಆಗಿರುವುದು ಎಂದು ಎಲ್ಲರಿಗೂ ಗೊತ್ತಿದೆ. ಕೋವಿಡ್ ನಿಯಮ ಎಲ್ಲರಿಗೂ ಒಂದೇ ಇದರಲ್ಲಿ ರಾಜಕಾರಣ ಮಾಡಬಾರದು," ಎಂದು ತಿಳಿಸಿದ್ದಾರೆ.

"ಚುನಾವಣೆ ನಂತರ ಸಿಎಂ ಬಸವರಾಜ ಬೊಮ್ಮಾಯಿ ಕರೆದುಕೊಂಡು ಚೆನ್ನಮ್ಮ ವಿವಿ ಹೊಸ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ಮಾಡಿಸುತ್ತೇವೆ. ಬೆಳಗಾವಿ ನಗರದಲ್ಲಿ ಮನೆ ಇಲ್ಲದವರಿಗೆ ಮನೆ ಕೊಡುವ ವ್ಯವಸ್ಥೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಡೀ ವಿಶ್ವ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡಲು ಆರಂಭಿಸಿದ್ದಾರೆ," ಎಂದು ತಿಳಿಸಿದರು.

"ಪೆಟ್ರೋಲ್, ಡಿಸೇಲ್ ಸ್ವಲ್ಪ ಹೆಚ್ಚಾಗಿದೆ ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತೆ. ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ಆಗಿದ್ದರೆ ಡಿ.ಕೆ. ಶಿವಕುಮಾರ್ ದಾಖಲೆ ಬಿಡುಗಡೆ ಮಾಡಲಿ,," ಎಂದು ಸವಾಲು ಹಾಕಿದ್ದಾರೆ.

ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಸಾರ್ವಜನಿಕರು ಧಾರ್ಮಿಕವಾಗಿ ಆಚರಿಸುವ ದೊಡ್ಡ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಣೇಶ ಹಬ್ಬ ಆಚರಿಸುತ್ತೇವೆ. ಮಹಾರಾಷ್ಟ್ರ, ಪುಣೆ ಬಿಟ್ಟರೆ ಬೆಳಗಾವಿಗೆ ಗಣೇಶ ಉತ್ಸವಕ್ಕೆ ಹೆಸರುವಾಸಿ. ಅದಕ್ಕೆ ತೊಂದರೆಯಾಗದ ರೀತಿಯಲ್ಲಿ ಕೋವಿಡ್ ನಿಯಮಾವಳಿ ಒಳಗೆ ಯಾವ ಪರವಾನಗಿ ಕೊಡಲು ಸಾಧ್ಯವಿದೆ ಅದನ್ನೆಲ್ಲಾ ಮಾಡುತ್ತೇವೆ. ಹಬ್ಬದ ಆಚರಣೆಗೆ ಯಾವುದೇ ಅಡಚಣೆ ಆಗದ ಹಾಗೇ ಕೋವಿಡ್ ನಿಯಮಾವಳಿ ವ್ಯವಸ್ಥೆ ಒಳಗೆ ಅನುಕೂಲ ಮಾಡುತ್ತೇವೆ," ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

English summary
Belagavi Municipal Corporation election: Minister Govind Karajol apologized for announcing Free Cremation in BJP Manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X