ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣ ದುರ್ಬಳಕೆ; ಬೆಳಗಾವಿಯ ಲೋಕಮಾನ್ಯ ಸೊಸೈಟಿ ಆಸ್ತಿ ಜಪ್ತಿಗೆ ಸರ್ಕಾರ ಆದೇಶ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 28: ಲೋಕಮಾನ್ಯ ಸೊಸೈಟಿಯ ಕೆಲವು ಠೇವಣಿದಾರರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಲೋಕಮಾನ್ಯ ಸೊಸೈಟಿಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಂಸ್ಥೆಯ, ಸಂಸ್ಥೆಗೆ ಸಂಬಂಧಪಟ್ಟ ಹಕ್ಕುದಾರರು ಮತ್ತು ತರುಣ ಭಾರತ ಪತ್ರಿಕೆಗೆ ಸಂಬಂಧಪಟ್ಟ ಒಟ್ಟು 49 ಆಸ್ತಿಗಳ ಜಪ್ತಿಗೆ ಆದೇಶ ನೀಡಿದೆ.

ಈಗಾಗಲೇ ಸರ್ಕಾರದಿಂದ ಮುಖ್ಯ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಫೈನಾನ್ಸಿಯಲ್ ಪ್ರೊಟೆಕ್ಷನ್ ಆಕ್ಟ್ 2004 ಪ್ರಕಾರ ಲೋಕಮಾನ್ಯ ಸೊಸೈಟಿ ಹಾಗೂ ತರುಣ ಭಾರತ ಆಸ್ತಿ ಜಪ್ತಿ ಮಾಡಬೇಕೆಂದು ಕ್ರಮ ಕೈಗೊಳ್ಳಲಾಗಿದೆ.

Belagavi: Government Order To Confiscation of All Assets Belonging To Lokamanya Society

 ಪುತ್ಥಳಿ ತೆರವು ವಿವಾದ; ಬೆಳಗಾವಿಯಲ್ಲಿ ರಾಯಣ್ಣನ ಅಭಿಮಾನಿಗಳ ಬೃಹತ್ ಪ್ರತಿಭಟನೆ ಪುತ್ಥಳಿ ತೆರವು ವಿವಾದ; ಬೆಳಗಾವಿಯಲ್ಲಿ ರಾಯಣ್ಣನ ಅಭಿಮಾನಿಗಳ ಬೃಹತ್ ಪ್ರತಿಭಟನೆ

ಇದರಲ್ಲಿ ತರುಣ ಭಾರತ ಪತ್ರಿಕೆಯ ಮಾಲೀಕರಾದ ಕಿರಣ ಠಾಕೋರ, ಮಾಜಿನಗರ ಸೇವಕ ಪಂಡರ ಪರಭ ಅವರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಆದೇಶದಡಿಯಲ್ಲಿ ಠೇವಣಿದಾರರ ಹಣವನ್ನು ಮರಳಿಸಿಲ್ಲ. ಲೋಕಮಾನ್ಯ ಸೊಸೈಟಿಯು ಠೇವಣಿದಾರರ ಹಣವನ್ನು ದುರ್ಬಳಕೆ ಮಾಡಿದೆ ಮತ್ತು ಠೇವಣಿದಾರರ ಹಣವನ್ನು ಮರು ಪಾವತಿಸಲು ಸೊಸೈಟಿ ತಯಾರಿಲ್ಲ. ಈ ಕಾರಣಕ್ಕೆ ಆಸ್ತಿಗಳ ಜಪ್ತಿಗೆ ಆದೇಶ ನೀಡಲಾಗಿದೆ.

English summary
The Government of Karnataka has taken strict action against the lokamanya Society and ordered the confiscation of all assets belonging to it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X