• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋಕಾಕಿನಲ್ಲಿ ಪೊಲೀಸರ ಖೆಡ್ಡಾಗೆ ಬಿದ್ದ ಟೈಗರ್ ಗ್ಯಾಂಗ್

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಸೆಪ್ಟೆಂಬರ್ 2: ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಟೈಗರ್ ಗ್ಯಾಂಗ್ ನವರನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಇಂದು ಗೋಕಾಕ ಶಹರ ಠಾಣೆ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದು, 30 ಲಕ್ಷಕ್ಕೂ ಹೆಚ್ಚು ಹಣ ಜಪ್ತಿ ಮಾಡಿಕೊಂಡಿದ್ದಾರೆ. ಕೊಲೆಯ ಹಿಂದೆ ಅಕ್ರಮ ದಂಧೆಯ ದೊಡ್ಡ ಜಾಲವೂ ಇರುವುದು ಪ್ರಕರಣದ ವಿಚಾರಣೆ ವೇಳೆ ಬಯಲಾಗಿದೆ.

ರಾಜಸ್ಥಾನ ಮೂಲದ ಟೈಲ್ಸ್ ಉದ್ಯಮಿಗೆ ಗುಂಡಿಕ್ಕಿ ಹತ್ಯೆ

ಮೇ 6ರಂದು ಸಿದ್ದು ಕನಮಡ್ಡಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಶೋಧದಲ್ಲಿ ಪೊಲೀಸರು ನಿರತರಾಗಿದ್ದರು. ಇಂದು ಪ್ರಕರಣ ಸಂಬಂಧ ಗೋಕಾಕ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಪಿಸ್ತೂಲ್, 20 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಯಲ್ಲಿ ಭಾಗಿಯಾದವರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ ಪಡಿಸಿಕೊಳ್ಳಲಾಗಿದೆ.

ಸದ್ಯ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ ಎಂದು ಎಸ್‌ಪಿ‌ ಲಕ್ಷ್ಮಣ್ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

English summary
Gokak police have arrested a Tiger gang in connection with the murder of a youth in Gokak, Belagavi district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X