• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈದುಂಬಿ ಹರಿಯುತ್ತಿರುವ ಭಾರತದ 'ನಯಾಗರ' ಗೋಕಾಕ್ ಜಲಪಾತ

|
Google Oneindia Kannada News

ಬೆಳಗಾವಿ, ಜುಲೈ 11: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಭಾರತದ 'ನಯಾಗರ' ಎಂದೇ ಖ್ಯಾತಿ ಪಡೆದ ಗೋಕಾಕ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ರುದ್ರ ರಮಣೀಯ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ.

ಮಹಾರಾಷ್ಟ್ರ ಪಶ್ಚಿಮ ಘಟ್ಟಗಳು ಸೇರಿ ಘಟಪ್ರಭಾ ನದಿ ಪಾತ್ರದಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ದಿನೇ ದಿನೇ ಗೋಕಾಕ್‌ ಫಾಲ್ಸ್‌ನಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಧುಮುಕ್ಕಿ ಹರಿಯುತ್ತಿರುವ ಗೋಕಾಕ ಫಾಲ್ಸ್‌ನ ಅಂದವನ್ನು ಹೆಚ್ಚಳ ಮಾಡುತ್ತಿದೆ ಸುತ್ತಲಿರುವ ಪರಿಸರ.

ಬಾಗಲಕೋಟೆ ಜಿಲ್ಲೆಯಲ್ಲಿ ಬೆಟ್ಟದ ಮಧ್ಯೆ ಜಲವೈಭವ: ಕೈ ಬೀಸಿ ಕರೆಯುತ್ತಿದೆ ಮಿನಿ ಫಾಲ್ಸ್ಬಾಗಲಕೋಟೆ ಜಿಲ್ಲೆಯಲ್ಲಿ ಬೆಟ್ಟದ ಮಧ್ಯೆ ಜಲವೈಭವ: ಕೈ ಬೀಸಿ ಕರೆಯುತ್ತಿದೆ ಮಿನಿ ಫಾಲ್ಸ್

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಕರ್ನಾಟಕ ಗಡಿ ಪ್ರದೇಶದ ಜಿಲ್ಲೆಗಳ ಜಲಪಾತಗಳು ತುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಸಪ್ತ ನದಿಗಳ ಒಳ ಹರಿವು ಹೆಚ್ಚಾಗುತ್ತಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಗೋಕಾಕ್ ಫಾಲ್ಸ್ ವೈಭವದ ಜೊತೆಗೆ ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ

ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ

ಗೋಕಾಕ್‌ ಫಾಲ್ಸ್‌ನಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಕೆಲವು ಪ್ರವಾಸಿಗರು ಅಪಾಯವನ್ನು ಲೆಕ್ಕಿಸದೆ ಫೋಟೊ ಹುಚ್ಚಿಗೆ ಜಲಪಾತದ ತುದಿಯಲ್ಲಿ ನಿಲ್ಲುವ ಸಾಹಸ ಮಾಡುತ್ತಿದ್ದಾರೆ.

ಗೋಕಾಕ್‌ ಫಾಲ್ಸ್‌ಗೆ ಭೇಟಿ ನೀಡಿದ ಎಸ್‌ಪಿ ಡಾ. ಸಂಜೀವ ಪಾಟೀಲ್ ಭದ್ರತೆ ಪರಿಶೀಲಿಸಿದ್ದಾರೆ. ಜಲಪಾತದ ಎತ್ತರದಲ್ಲಿ ನಿಂತಿದ್ದ ಪ್ರವಾಸಿಗರನ್ನು ಪೊಲೀಸರು ಬುದ್ದಿವಾದ ಹೇಳಿ ವಾಪಸ್ ಕಳುಹಿಸಿದ್ದಾರೆ. ಜಲಪಾತದ ತುದಿಗೆ ತೆರಳದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದು, ಬಂಡೆಗಳ ಮೇಲೆ ನಿಂತು ಪೋಟೋ ತೆಗೆಯದಂತೆ ಸೂಚನೆ ನೀಡಿದರು. ಇದೇ ವೇಳೆ ಗೋಕಾಕ್​ ಗ್ರಾಮೀಣ ಠಾಣೆ ಪೊಲೀಸರಿಗೆ ಅಗತ್ಯ ಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ, ಸಾರ್ವಜನಿಕರಿಂದ ಆಕ್ರೋಶಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ, ಸಾರ್ವಜನಿಕರಿಂದ ಆಕ್ರೋಶ

ಪ್ರವಾಸಿಗರ ರಕ್ಷಣೆಗೆ ಸೂಕ್ತ ಕ್ರಮ

ಪ್ರವಾಸಿಗರ ರಕ್ಷಣೆಗೆ ಸೂಕ್ತ ಕ್ರಮ

ಗೋಕಾಕ್‌ ಫಾಲ್ಸ್‌ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಎಸ್‌ಪಿ ಡಾ. ಸಂಜೀವ್ ಪಾಟೀಲ, "ಪ್ರವಾಸಿಗರಿಗೆ ಜಲಪಾತದ ಸಮೀಪ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಕ್ರೈಂಸೀನ್ ಟೇಪ್ ಮತ್ತು ಬ್ಯಾರಿಕೇಡ್ ಅಳವಡಿಸಲಾಗಿದೆ. ಜಲಪಾತದ ಸಮೀಪ ಪ್ರವಾಸಿಗರು ಹೋಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ" ಎಂದರು.

ಮತ್ತಷ್ಟು ಸುರಕ್ಷತೆಗಾಗಿ ಕಬ್ಬಿಣದ ಗ್ರಿಲ್ ಅಳವಡಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರವಾಸಿಗರು ಕೂಡ ಅಪಾಯದ ಬಗ್ಗೆ ಅರಿತು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಗೊಡಚಿನಮಲ್ಕಿ ಸೇರಿ ಇತರೆ ಜಲಪಾತಗಳಲ್ಲಿನ ಭದ್ರತೆಯ ಬಗ್ಗೆ ವರದಿಯನ್ನು ತರಿಸಿಕೊಳ್ಳುತ್ತೇನೆ. ಬೆಳಗಾವಿ ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದು, ಹಲವು ಪ್ರವಾಸಿ ತಾಣಗಳಿವೆ. ಪ್ರವಾಸಿಗರು, ಸ್ಥಳೀಯರು ಪೊಲೀಸರಿಗೆ ಸಹಕಾರ ನೀಡಬೇಕು. ಪ್ರಾಣಹಾನಿ, ಜೀವಹಾನಿ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಪ್ರವಾಸೋದ್ಯಮ ಇಲಾಖೆ ಜೊತೆಗೆ ಸಮನ್ವಯ ಸಾಧಿಸಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಭಾರತದ ನಯಾಗರ ಎಂದೇ ಕರೆಯುವ ಗೋಕಾಕ್ ಜಲಪಾತ

ಭಾರತದ ನಯಾಗರ ಎಂದೇ ಕರೆಯುವ ಗೋಕಾಕ್ ಜಲಪಾತ

ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಜಲಪಾತ ಉತ್ತರ ಕರ್ನಾಟಕದ ಜನಪ್ರಿಯ ಜಲಪಾತಗಳಲ್ಲಿ ಒಂದು. ಗೋಕಾಕ್ ಜಲಪಾತವು ಹೆದ್ದಾರಿಯ ಸಮೀಪದಲ್ಲೇ ಇರುವುದರಿಂದ ಪ್ರವಾಸಿಗರಿಗೆ ಭೇಟಿ ನೀಡಲು ಅನುಕೂಲವಾಗಿದೆ.

ಘಟಪ್ರಭಾ ನದಿ ಕುದುರೆಯ ಲಾಳದ ಆಕಾರದಲ್ಲಿರುವ 52 ಮೀಟರ್ ಎತ್ತರದ ಬಂಡೆಯ ಮೇಲಿನಿಂದ ಧುಮ್ಮಿಕ್ಕುವ ದೃಶ್ಯ ನಯನ ಮನೋಹರ. ಇತರ ಜಲಪಾತಗಳಿಗೆ ಹೋಲಿಸಿದಾಗ ಗೋಕಾಕ್ ಜಲಪಾತ 177 ಮೀಟರ್ ಅಗಲವಿದೆ. ತುಂಬಿ ಹರಿಯುವಾಗಲಂತೂ ಗೋಕಾಕ್ ಜಲಪಾತ ರುದ್ರ ರಮಣೀಯವಾಗಿ ಕಾಣಿಸುತ್ತದೆ. ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ 200 ಮೀಟರ್ ಉದ್ದದ ತೂಗು ಸೇತುವೆ ಗೋಕಾಕ್ ಜಲಪಾತದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಗೋಕಾಕ್ ಜಲಪಾತದ ಸಮೀಪದ ಪ್ರವಾಸಿ ಸ್ಥಳಗಳು

ಗೋಕಾಕ್ ಜಲಪಾತದ ಸಮೀಪದ ಪ್ರವಾಸಿ ಸ್ಥಳಗಳು

ಗೋಕಾಕ್ ಫಾಲ್ಸ್‌ಗೆ ಭೇಟಿ ನೀಡುವ ಪ್ರವಾಸಿಗರು, ಸಮೀಪದ ಚಾಲುಕ್ಯ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಭಗವಾನ್ ಮಹಾಲಿಂಗೇಶ್ವರ ದೇವಸ್ಥಾನ, ಕೆಂಪಲ್ ಸಸ್ಯ ಉದ್ಯಾನಕ್ಕೆ ಭೇಟಿ ನೀಡಬಹುದು.

ಚಾರಣಿಗರು ಗೊಕಾಕ್ ಜಲಪಾತದಿಂದ 3 ಕಿ. ಮೀ. ದೂರದಲ್ಲಿರುವ ಜನಪ್ರಿಯ ಚಾರಣ ತಾಣ ಯೋಗಿ ಕೊಳ್ಳಕ್ಕೆ ಭೇಟಿ ನೀಡಬಹುದಾಗಿದೆ. ಮಾರ್ಕಂಡೇಯ ನದಿಯಲ್ಲಿ ಬೋಟಿಂಗ್ ವಿವಾರ ಕೈಗೊಳ್ಳಬಹುದು, ಇದು ಗೋಕಾಕ್ ಜಲಪಾತದಿಂದ 8 ಕಿಲೋ ಮೀಟರ್ ದೂರದಲ್ಲಿದೆ.

ಇಲ್ಲಿಂದ 13 ಕಿಲೋ ಮೀಟರ್ ದೂರದಲ್ಲಿ ಗೋಡಚಿನಮಲ್ಕಿ ಜಲಪಾತ ಇದೆ. ಇನ್ನು ಪ್ರಸಿದ್ಧವಾದ ಸವದತ್ತಿ ಯಲ್ಲಮ್ಮ ಕ್ಷೇತ್ರ ಇಲ್ಲಿಂದ 73 ಕಿಲೋ ಮೀಟರ್ ದೂರವಿದೆ.

English summary
Belagavi Gokaka falls, known as the 'Niagara' of India, is overflowing with rain in the Western Ghats of Maharashtra. People flock to witness the splendor view of Falls. Day by day the flow of water in Gokak Falls is increasing and the surrounding environment is increasing the beauty of the plunging Gokak Falls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X