ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

300 ಕನ್ನಡಿಗ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ಗೋವಾ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 29: ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕದ ಸಾವಿರಾರು ಕಾರ್ಮಿಕರನ್ನು ಗೋವಾದಿಂದ ಹೊರಹೋಗಲು ಹೇಳಿದ್ದ ಅಲ್ಲಿನ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ.

ಗೋವಾದಿಂದ ಹೊರಹಾಕಲ್ಪಟ್ಟ ಕರ್ನಾಟಕ ಮೂಲದ ಕಾರ್ಮಿಕರು ಆಗಲೇ ಬೆಳಗಾವಿ ಜಿಲ್ಲೆಯ ಗಡಿ ತಲುಪಿದ್ದರು. ಆಗ ತಕ್ಷಣವೇ ಕರ್ನಾಟಕ ಸರ್ಕಾರದಿಂದ ಗೋವಾ ಸರ್ಕಾರಕ್ಕೆ ಮಾಹಿತಿ ನೀಡಲಾಯಿತು.

ಹೀಗಾಗಿ ಕೊನೆಗೂ ಗೋವಾ ಸರ್ಕಾರ 300 ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದೆ. ಎಲ್ಲ 300 ಕಾರ್ಮಿಕರನ್ನು ಗೋವಾ ರಾಜ್ಯದ ಆಯಾ ತಾಲ್ಲೂಕಿನ ಲೇಬರ್ ಕ್ಯಾಂಪಿನಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿದೆ.

 Goa Government Help To 300 Kannadiga Workers

""ಕ್ಯಾಂಪಿನಲ್ಲಿ ವೈದ್ಯಕೀಯ, ಆಹಾರ ಸೇರಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಗೋವಾದಲ್ಲಿರುವ ಯಾವ ಕನ್ನಡಿಗರು ಕರ್ನಾಟಕಕ್ಕೆ ಹೋಗಬೇಕಿಲ್ಲ. ಏನೇ ಸಮಸ್ಯೆ ಇದ್ದರೂ, ಸಹಾಯ ಬೇಕಾದರೂ ಗೋವಾ ಸರ್ಕಾರ ಸ್ಪಂದಿಸಲಿದೆ'' ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಸ್ಪಷ್ಟನೆ ನೀಡಿದ್ದಾರೆ.

English summary
Goa Government Said About 300 workers have been arranged to Stay remain in the labor camp of the respective taluk of Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X