• search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿಯಲ್ಲಿ 'ನಗ್ನ ಯುವತಿ'ಯಾಗಿ ನಗರ ಪ್ರದಕ್ಷಿಣೆ ಮಾಡಿದ್ದು ಯಾರು ಗೊತ್ತೇ?

By Avani Malnad
|
   ಬೆಳಗಾವಿಯಲ್ಲಿ ಮಧ್ಯರಾತ್ರಿ ವೇಳೆ ನಗ್ನ ಯುವತಿಯ ನಗರ ಪ್ರದಕ್ಷಿಣೆ

   ಬೆಳಗಾವಿ, ಆಗಸ್ಟ್ 28: ಬೆಳಗಾವಿಯಲ್ಲಿ ಮಧ್ಯರಾತ್ರಿ ಯುವತಿಯೊಬ್ಬಳು ನಗ್ನಳಾಗಿ ನಗರಪ್ರದಕ್ಷಿಣೆ ಮಾಡಿದ ಘಟನೆ ಭಾರಿ ಚರ್ಚೆಗೆ ಒಳಗಾಗಿತ್ತು. ಸ್ಕೂಟರ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಪುರುಷನೊಟ್ಟಿಗೆ ಬಂದ ಯುವತಿ ಕ್ಲಬ್ ರಸ್ತೆಯಲ್ಲಿ ಆತನನ್ನು ಇಳಿಸಿ ತಾನೇ ಸ್ಕೂಟರ್ ಚಲಾಯಿಸಿಕೊಂಡು ನಡೆದ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು.

   ಈ ವಿಡಿಯೋ ದೃಶ್ಯಗಳು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಒಬ್ಬರಿಂದೊಬ್ಬರಿಗೆ ಹರಿದಾಡತೊಡಗಿತ್ತು. ರಾಜ್ಯ, ಹೊರರಾಜ್ಯಗಳಲ್ಲಿಯೂ ಈ ವಿಡಿಯೋ ವೈರಲ್ ಆಗಿತ್ತು. ಪಾಶ್ಚಾತ್ಯ ಸಂಸ್ಕೃತಿ ಮತ್ತು ಆಧುನಿಕತೆಗೆ ಹೆಚ್ಚು ತೆರೆದುಕೊಂಡಿರುವ ಬೆಂಗಳೂರು, ಮುಂಬೈನಂತಹ ದೊಡ್ಡ ನಗರಗಳಲ್ಲಿ ಈ ರೀತಿ ಯುವತಿಯೊಬ್ಬಳು ನಗ್ನಳಾಗಿ ಗಾಡಿ ಓಡಿಸಿದ್ದರೆ ಇಷ್ಟು ಚರ್ಚೆ ಆಗುತ್ತಿರಲಿಲ್ಲವೇನೋ. ಆದರೆ, ಬೆಳಗಾವಿಯಂತಹ ಸಾಂಪ್ರದಾಯಿಕ ಮನಸ್ಥಿತಿಯ ಜನರಿರುವ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.

   ಬೆಳಗಾವಿಯಲ್ಲಿ ಮಧ್ಯರಾತ್ರಿ ವೇಳೆ ನಗ್ನ ಯುವತಿಯ ನಗರ ಪ್ರದಕ್ಷಿಣೆ

   ಆ ಯುವತಿ ಯಾರಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಏಕೆಂದರೆ ವಿಡಿಯೋ ಚಿತ್ರೀಕರಿಸಿದಾಗ ಆಕೆಯ ಹಿಂಬದಿ ಕಂಡಿತ್ತೇ ಹೊರತು ಮೊಬೈಲ್‌ನಲ್ಲಿ ಮುಖ ಸೆರೆಯಾಗಿರಲಿಲ್ಲ. ಜಿಲ್ಲಾ ಪೊಲೀಸರು ಕೊನೆಗೂ ಈ ಪ್ರಕರಣವನ್ನು ಭೇದಿಸಿದ್ದಾರೆ. ತನಿಖೆಯಿಂದ ಹೊರಬಂದ ಫಲಿತಾಂಶ ಅಚ್ಚರಿ ಮೂಡಿಸಿದೆ.

   ಅದು ಅವಳಲ್ಲ... ಅವನು!

   ಅದು ಅವಳಲ್ಲ... ಅವನು!

   ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ನಡುರಾತ್ರಿ ನಗ್ನವಾಗಿ ಸ್ಕೂಟರ್ ಚಲಾಯಿಸಿಕೊಂಡು ಓಡಾಡಿದ್ದು ಯುವತಿಯಲ್ಲ, ತೃತೀಯ ಲಿಂಗಿ ಎಂಬ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಇದರಿಂದ ಅದು ಯುವತಿ ವಿಡಿಯೋ ಎಂದೇ ಭಾವಿಸಿ, ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದವರು ಬೇಸ್ತುಬೀಳುವಂತಾಗಿದೆ.

   ಬೆಳಗಾವಿಯಲ್ಲಿಯೇ ವಾಸ

   ಬೆಳಗಾವಿಯಲ್ಲಿಯೇ ವಾಸ

   ಸ್ಕೂಟರ್ ಓಡಿಸಿದ್ದು ಯುವತಿಯಂತೆ ಕಾಣುವ ವ್ಯಕ್ತಿ. ಆದರೆ ಯುವತಿ ಅಲ್ಲ. ಅವರು ಲಿಂಗ ಪರಿವರ್ತನೆ ಮಾಡಿಕೊಂಡಿರುವ ತೃತೀಯ ಲಿಂಗಿಯಾಗಿದ್ದಾರೆ. ಅವರು ಬೇರೆ ಎಲ್ಲಿಂದಲೋ ಬಂದವರಲ್ಲ. ಬೆಳಗಾವಿಯಲ್ಲಿಯೇ ವಾಸವಾಗಿದ್ದಾರೆ. ಆದರೆ, ಅವರು ಲಿಂಗಪರಿವರ್ತನೆ ಮಾಡಿಕೊಂಡಿರುವುದು ಅವರ ಮನೆಯವರಿಗೇ ಗೊತ್ತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿಎಸ್ ಲೋಕೇಶ್ ಕುಮಾರ್ ತಿಳಿಸಿದ್ದಾರೆ.

   ಮದುವೆ ಇಷ್ಟು ಬೇಗ ಬೇಡ ಎಂದಿದ್ದಕ್ಕೆ ಪ್ರಿಯಕರ ಮಾಡಿದ್ದೇನು?

   ಪರಾರಿಯಾಗಿರುವ ವ್ಯಕ್ತಿ

   ಪರಾರಿಯಾಗಿರುವ ವ್ಯಕ್ತಿ

   ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕ್ಯಾಂಪ್ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಸ್ಕೂಟರ್ ಚಲಿಸಿದ್ದ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು. ಕೊನೆಗೂ ಆ ವ್ಯಕ್ತಿ ಯಾರು ಎಂಬುದನ್ನು ಅವರು ಪತ್ತೆಹಚ್ಚಿದ್ದಾರೆ. ಆದರೆ, ಆ ವ್ಯಕ್ತಿ ಮನೆಯಿಂದ ಪರಾರಿಯಾಗಿದ್ದಾರೆ. ಅವರನ್ನು ಪತ್ತೆಹಚ್ಚುವ ಕೆಲಸವನ್ನು ಪೊಲೀಸರು ಮುಂದುವರಿಸಿದ್ದಾರೆ.

   ರಾತ್ರಿ 10.30ರಿಂದ ಓಡಾಟ

   ರಾತ್ರಿ 10.30ರಿಂದ ಓಡಾಟ

   ಆಗಸ್ಟ್ 13ರ ರಾತ್ರಿ 10.30ರ ಸುಮಾರಿಗೆ ನಗ್ನ ವ್ಯಕ್ತಿಯೊಬ್ಬರು ಯುವಕನೊಂದಿಗೆ ಸ್ಕೂಟರ್‌ನಲ್ಲಿ ಕ್ಲಬ್ ರಸ್ತೆ ಬಳಿ ಬಂದಿದ್ದರು. ಅಲ್ಲಿ ಸ್ಕೂಟರ್‌ನಿಂದ ಯುವಕನನ್ನು ಕೆಳಗಿಳಿಸಿ ತಾವೇ ಗಾಡಿ ಓಡಿಸಿಕೊಂಡು ಹೋಗಿದ್ದರು. ಕ್ಲಬರ್ ರಸ್ತೆ, ವಿಶ್ವೇಶ್ವರ ನಗರ, ಹನುಮಾನ್ ನಗರಗಳಲ್ಲಿ ಸುತ್ತಾಡಿ ಬಳಿಕ ಹಿಂಡಲಗಾ ಮಾರ್ಗದಲ್ಲಿ ತೆರಳಿದ್ದು ಗೊತ್ತಾಗಿತ್ತು. ವಿಡಿಯೋ ವೀಕ್ಷಿಸಿದಾಗ ಅದು ಯುವತಿಯೇ ಇರಬೇಕು ಎಂದು ಊಹಿಸಲಾಗಿತ್ತು. ಅವರು ಬೆಳಗಾವಿಯವರು ಆಗಿರಲಾರರು. ಹೊರರಾಜ್ಯದಿಂದ ಓದಲು ಬಂದ ವಿದ್ಯಾರ್ಥಿನಿಯಾಗಿರಬಹುದು. ಡ್ರಗ್ಸ್ ಸೇವನೆಯಿಂದ ಅಥವಾ ಬಾಜಿ ಕಟ್ಟಿ ಈ ರೀತಿ ಮಾಡಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Belagavi police has found the person who rided the scooter in the city without cloths. They said, that was not a girl, but a transgender.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more