ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಸುರಿದ ಬಿಜೆಪಿ ಶಾಸಕ!

|
Google Oneindia Kannada News

ಬೆಳಗಾವಿ, ಜುಲೈ 25; ಕಸ ವಿಲೇವಾರಿ ಮಾಡಿಲ್ಲ ಎಂದು ಆರೋಪಿಸಿ ಬಿಜೆಪಿ ಶಾಸಕರು ಮಹಾನಗರ ಪಾಲಿಕೆ ಆಯುಕ್ತರ ನಿವಾಸದ ಮುಂದೆ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಭಾನುವಾರ ಟ್ರಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ. ಎಚ್. ನಿವಾಸದ ಮುಂದೆ ತಂದು ಸುರಿದಿದ್ದಾರೆ.

ಬೆಳಗಾವಿ; ಕೊರೊನಾ ತೊಲಗಿಸಲು ಬಿಜೆಪಿ ಶಾಸಕನಿಂದ ಹೋಮ! ಬೆಳಗಾವಿ; ಕೊರೊನಾ ತೊಲಗಿಸಲು ಬಿಜೆಪಿ ಶಾಸಕನಿಂದ ಹೋಮ!

ತಾವೇ ಟ್ರಾಕ್ಟರ್ ಚಲಾಯಿಸಿಕೊಂಡು ಬಂದ ಶಾಸಕರು ವಿಶ್ವೇಶ್ವರಯ್ಯ ನಗರದಲ್ಲಿರುವ ಪಾಲಿಕೆ ಆಯುಕ್ತರ ನಿವಾಸದ ಮುಂದೆ ತಂದು ಸುರಿದು ಆಕ್ರೋಶವನ್ನು ವ್ಯಕ್ತಪಡಿಸಿದರು. ಸ್ವಚ್ಛತಾ ಕಾರ್ಯ ಕೈಗೊಳ್ಳಿ ಎಂದು ಹೇಳಿದರೆ ಅಧಿಕಾರಿಗಳು ಸ್ಪಂದಿಸಿಲ್ಲ. ಅದಕ್ಕೆ ಈ ರೀತಿ ಮಾಡಿರುವುದಾಗಿ ಶಾಸಕರು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ.

ಕಸ ಗುಡಿಸುತ್ತಿದ್ದ ಮಹಿಳೆ ಈಗ ರಾಜಸ್ಥಾನದ ಜಿಲ್ಲಾಧಿಕಾರಿ!ಕಸ ಗುಡಿಸುತ್ತಿದ್ದ ಮಹಿಳೆ ಈಗ ರಾಜಸ್ಥಾನದ ಜಿಲ್ಲಾಧಿಕಾರಿ!

Garbage Dumped In Front Of Municipal Corporation Commissioner House

ಮೂರು ತಿಂಗಳಿನಿಂದ ಹೇಳಿದರೂ ಪಾಲಿಕೆ ಆಯುಕ್ತರು ಕ್ರಮ ಕೈಗೊಂಡಿಲ್ಲ. ಅದಕ್ಕೆ ಆಯುಕ್ತರ ಮನೆ ಮುಂದೆ ಕಸ ಸುರಿದಿದ್ದೇನೆ. ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ನಿವಾಸದ ಮುಂದೆಯೂ ಕಸ ಹಾಕುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.

ಗುತ್ತಿಗೆದಾರನ ಮೇಲೆ ಕಸ ಸುರಿಸಿದ ಶಿವಸೇನೆಯ ಶಾಸಕ: ವಿಡಿಯೋ ವೈರಲ್‌ ಗುತ್ತಿಗೆದಾರನ ಮೇಲೆ ಕಸ ಸುರಿಸಿದ ಶಿವಸೇನೆಯ ಶಾಸಕ: ವಿಡಿಯೋ ವೈರಲ್‌

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯನ್ನು ಅವರು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತಕ ನಿವಾಸದ ಮುಂದೆ ಕಸ ಸುರಿದ ವಿಚಾರದ ಬಗ್ಗೆ ಸಹ ಚರ್ಚೆ ಸಹ ನಡೆಯುವ ಸಾಧ್ಯತೆ ಇದೆ.

English summary
Belagavi Dakshina BJP MLA Abhay Patil dumped the garbage in front of the Belagavi city municipal corporation commissioner Jagadish K. H. house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X