ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈ-ಫೈ ಸೌಲಭ್ಯ!

By Gururaj
|
Google Oneindia Kannada News

ಬೆಳಗಾವಿ, ಜುಲೈ 17 : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಉಚಿತವಾಗಿ ವೈ-ಫೈ ಸೌಲಭ್ಯ ನೀಡಲಾಗುತ್ತದೆ. ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರ್ ನೀಡಲಾಗಿದ್ದು, ಹಲವು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ತುಂಬಬೇಕಾಗಿದೆ.

ಬೆಳಗಾವಿಯಲ್ಲಿ ಮಂಗಳವಾರ ಮಾತನಾಡಿದ ಐಟಿ-ಬಿಟಿ ಖಾತೆ ಸಚಿವ ಕೆ.ಜೆ.ಜಾರ್ಜ್, 'ರಾಜ್ಯದ ಎಲ್ಲಾ500 ಗ್ರಾಮ ಪಂಚಾಯಿತಿಗಳಿಗೆ ಶೀಘ್ರವೇ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಲಾಗುತ್ತದೆ' ಎಂದು ಹೇಳಿದರು.

ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಉಚಿತ ವೈ-ಫೈ ಸೌಲಭ್ಯಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಉಚಿತ ವೈ-ಫೈ ಸೌಲಭ್ಯ

'ಸ್ಥಳೀಯ ಆಡಳಿತಕ್ಕೆ ಉಚಿತವಾಗಿ ಇಂಟರ್ ನೆಟ್ ಸಂಪರ್ಕ ನೀಡಿದರೆ ಸಹಾಯಕವಾಗಲಿದೆ. ಪ್ರತಿ ದಿನ 100 ಎಂಬಿ ಡಾಟಾವನ್ನು ನೀಡಲಾಗುತ್ತದೆ. ಇದರಿಂದ ಕಾರ್ಯಾಲಯದ ಸಿಬ್ಬಂದಿ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಸಹಾಯಕವಾಗಲಿದೆ' ಎಂದು ಸಚಿವರು ತಿಳಿಸಿದರು.

ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ

Free Wifi to all Gram Panchayats soon KJ George

'ಸರ್ಕಾರದ ವತಿಯಿಂದಲೇ ಉಚಿತವಾಗಿ ವೈ-ಫೈ ಸೌಲಭ್ಯವನ್ನು ನೀಡಲಾಗುತ್ತದೆ. ಇಂದಿನ ದಿನಗಳಲ್ಲಿ ಇಂಟರ್‌ನೆಟ್‌ಗೆ ಭಾರೀ ಬೇಡಿಕೆ ಇದೆ. ಗ್ರಾಮೀಣ ಪ್ರದೇಶಕ್ಕೆ ಉಚಿತವಾಗಿ ಇಂಟರ್‌ ನೆಟ್ ನೀಡಿದರೆ ಅನುಕೂಲವಾಗಲಿದೆ' ಎಂದರು.

ಸರ್ಕಾರ ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರ್ ನೀಡುವ ಜೊತೆಗೆ ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಕ ಮಾಡಿದೆ. ಉಚಿತ ವೈ-ಫೈ ಸೌಲಭ್ಯ ಸಿಕ್ಕಿದರೆ ಗ್ರಾಮ ಪಂಚಾಯಿತಿಯ ಕೆಲಸಗಳು ಸಹ ವೇಗ ಪಡೆಯಲು ಸಹಾಯಕವಾಗಲಿದೆ.

English summary
Karnataka IT Bt minister K.J.George said that 500 gram panchayats in the state have been provided free wifi services. The service would help local body members availing 100 MB Internet services per day to browse various government websites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X