ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಉಪ ಚುನಾವಣೆಯಲ್ಲಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧವಾಗಲಿದೆ''

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 29: ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

Recommended Video

ಯಡಿಯೂರಪ್ಪನನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣವು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ತಿರುಗು ಬಾಣವಾಗಲಿದೆ ಎಂದರು.

ಬೆಳಗಾವಿ ಲೋಕಸಭಾ ಉಪ ಚುನಾವಣೆ: ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆಬೆಳಗಾವಿ ಲೋಕಸಭಾ ಉಪ ಚುನಾವಣೆ: ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಸಿಡಿ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಅದನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳುವುದಿಲ್ಲ ಎಂದ ಸಿದ್ದರಾಮಯ್ಯ, ಸಿಡಿ ಪ್ರಕರಣದ ಎಸ್ಐಟಿ ತನಿಖೆ ಮೇಲೆ ಯಾವ ನಂಬಿಕೆ ಇಲ್ಲ. ಸಿಡಿ ಪ್ರಕರಣ ನಿಷ್ಪಕ್ಷಪಾತವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕೆಂದು ನಾವು ಆಗ್ರಹಿಸಿದ್ದೇವೆ ಎಂದು ಹೇಳಿದರು.

Former CM Siddaramaiah Reaction On Belagavi Lok Sabha By-Election

ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ, ಅದು ಬಸ್‌ಸ್ಟ್ಯಾಂಡ್ ಎಂಬ ಪ್ರಹ್ಲಾದ್ ಜೋಶಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಬಸ್‌ಸ್ಟ್ಯಾಂಡ್ ಆಗಿರೋರು ಯಾರಪ್ಪ? ಮಿಸ್ಟರ್ ನರೇಂದ್ರ ಮೋದಿ ಬಸ್‌ಸ್ಟ್ಯಾಂಡ್ ಆಗಿದ್ದಾರೆ ಎಂದು ಉತ್ತರಿಸಿದರು.

ಪ್ರಹ್ಲಾದ್ ಜೋಶಿ ಒಬ್ಬ ಸೈಡ್ ಆ್ಯಕ್ಟರ್, ಡೈರೆಕ್ಟರ್ ಆರ್‌ಎಸ್‌ಎಸ್. ಬೆಲೆ ಏರಿಕೆ, ಕೇಂದ್ರ ಸರ್ಕಾರದ ವೈಫಲ್ಯ, ರೈತ ವಿರೋಧಿ ಕಾನೂನು ತಂದಿರುವುದು, ಬೆಲೆ ಏರಿಕೆ ನಿಯಂತ್ರಣ ಇಲ್ಲದಿರುವುದು, ಅಚ್ಛೆ ದಿನ್ ಇಲ್ಲ ನರಕ ಆಗಿಬಿಟ್ಟಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.

Former CM Siddaramaiah Reaction On Belagavi Lok Sabha By-Election

ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾದ ಪಾರ್ಟಿ ಅಲ್ಲ, ಎಲ್ಲಾ ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಆಗಿದ್ದು, ಸತೀಶ್ ಜಾರಕಿಹೊಳಿ ಬಹಳ ಒಳ್ಳೆಯ, ಸಮರ್ಥ ಅಭ್ಯರ್ಥಿ ಆಗಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

English summary
Former Minister Ramesh Jarkiholi's CD case in Belagavi by-elections will against to the BJP, former CM Siddaramaiah said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X