ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ಕ್ವಾರಂಟೈನ್ ನಿಯಮ ಮುರಿದು ತಿರುಗಾಡಿದ 573 ಜನರ ವಿರುದ್ಧ ಕೇಸ್

|
Google Oneindia Kannada News

ಬೆಳಗಾವಿ, ಜುಲೈ 2: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ ಇವ್ಯಾವುದನ್ನೂ ಲೆಕ್ಕಿಸದೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಬೆಳಗಾವಿ ಜಿಲ್ಲೆಯ 573 ಜನರ ವಿರುದ್ಧ ಪ್ರಕರಣ ದಾಖಲಿಸಲು ಕ್ವಾರಂಟೈನ್ ನೋಡಲ್ ಅಧಿಕಾರಿಗಳು, ಜಿಲ್ಲೆಯ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.

Recommended Video

TikTok ban,China lost 6B$?ಟಿಕ್‌ ಟಾಕ್ ಬ್ಯಾನ್‌ನಿಂದಾಗಿ ಕಂಪನಿಗೆ 45000 ಕೋಟಿ ನಷ್ಟ ಸಾಧ್ಯತೆ|Oneindia Kannada

ಮಹಾರಾಷ್ಟ್ರ ಮತ್ತು ಪಕ್ಕದ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಬಂದಿರುವ 573 ಜನ ಹೋಂ ಕ್ವಾರಂಟೈನ್ ನಲ್ಲಿರದೇ ಸುತ್ತಾಡಿದ್ದು, ಇವರನ್ನು ಟ್ರ್ಯಾಕ್ ಮಾಡಿರುವ ಕ್ವಾರಂಟೈನ್ ಅಧಿಕಾರಿಗಳು, ನಿಯಮ ಉಲ್ಲಂಘನೆ ಮಾಡಿರುವ 573 ಜನರ ಪಟ್ಟಿ ಮಾಡಿ ಬೆಳಗಾವಿ ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ರವಾನಿಸಿದ್ದಾರೆ.

ಹೋಂ ಕ್ವಾರಂಟೈನ್ ಉಲ್ಲಂಘನೆ; ರಾಮನಗರದಲ್ಲಿ 8 ಮಂದಿ ಮೇಲೆ FIRಹೋಂ ಕ್ವಾರಂಟೈನ್ ಉಲ್ಲಂಘನೆ; ರಾಮನಗರದಲ್ಲಿ 8 ಮಂದಿ ಮೇಲೆ FIR

ಬೆಳಗಾವಿ ಜಿಲ್ಲೆಯ ಆಯಾ ತಾಲೂಕುಗಳ ತಹಶೀಲ್ದಾರರು ತಮ್ಮ ತಾಲೂಕುಗಳಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರನ್ನು ಗುರುತಿಸಿ, ಅವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್ ಮಾಡಿ ಅವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಿದ್ದಾರೆ.

FIR On 573 People For Violating Quarantine Rules In Belagavi

ಬೆಳಗಾವಿ ನಗರ -76, ಬೆಳಗಾವಿ ಗ್ರಾಮೀಣ -103, ಹುಕ್ಕೇರಿ 55, ಖಾನಾಪೂರ 54, ಬೈಲಹೊಂಗಲ 28, ಸವದತ್ತಿ 15, ರಾಮದುರ್ಗ 11, ಗೋಕಾಕ 45, ಮೂಡಲಗಿ 13, ಅಥಣಿ 37, ಕಾಗವಾಡ 16, ಚಿಕ್ಕೋಡಿ 30, ನಿಪ್ಪಾಣಿ 48, ರಾಯಬಾಗ 24, ಕಿತ್ತೂರು 18... ಹೀಗೆ ಜಿಲ್ಲೆಯಲ್ಲಿ ಒಟ್ಡು 573 ಜನರು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದು ಇವರ ವಿರುದ್ಧ ಎಫ್ ಐ ಆರ್ ದಾಖಲು ಮಾಡುವ ಜೊತೆಗೆ ಇವರನ್ನು ಪುನಃ ಕ್ವಾರಂಟೈನ್ ಮಾಡಲಾಗುತ್ತಿದೆ.

English summary
FIR has been lodged against 573 people in belagavi district for violating home quarantine rules
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X