ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ಬೈಪಾಸ್ ನಿರ್ಮಾಣಕ್ಕೆ ಕೃಷಿ ಭೂಮಿ, ರೈತರ ಪ್ರತಿಭಟನೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಫೆಬ್ರವರಿ 11: ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಮೂರು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಮಚ್ಛೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗುರುವಾರ ಪುಟ್ಟ-ಪುಟ್ಟ ಮಕ್ಕಳ ಜೊತೆ ತಲೆ ಮೇಲೆ ಕಲ್ಲು ಇಟ್ಟುಕೊಂಡು ರೈತರು ಪ್ರತಿಭಟನೆ ನಡೆಸಿದರು.

ಭಾರತ- ನೇಪಾಳ ನಡುವಿನ 108 ಕಿ.ಮೀ ಗಡಿ ರಸ್ತೆ ಸಾರ್ವಜನಿಕರಿಗೆ ಮುಕ್ತ ಭಾರತ- ನೇಪಾಳ ನಡುವಿನ 108 ಕಿ.ಮೀ ಗಡಿ ರಸ್ತೆ ಸಾರ್ವಜನಿಕರಿಗೆ ಮುಕ್ತ

ತಲೆ ಮೇಲೆ ಇಟ್ಟಿಗೆ, ಕಲ್ಲು ಇಟ್ಟು ಧರಣಿಯಲ್ಲಿ ಭಾಗಿಯಾದ ರೈತರ ಮಕ್ಕಳು ಯಾವುದೇ ಕಾರಣಕ್ಕೂ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಉತ್ತರ ಕರ್ನಾಟಕದಲ್ಲೂ ನಡೆಯುತ್ತಾ ದೆಹಲಿ ಮಾದರಿಯ ರೈತ ಪ್ರತಿಭಟನೆ ಉತ್ತರ ಕರ್ನಾಟಕದಲ್ಲೂ ನಡೆಯುತ್ತಾ ದೆಹಲಿ ಮಾದರಿಯ ರೈತ ಪ್ರತಿಭಟನೆ

Belagavi Farmers Protest Against Halaga-Macche Bypass Road Construction

ಮೂಲ ಕಾಮಗಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಫಲವತ್ತಾದ ಜಮೀನನ್ನು ಬೈಪಾಸ್ ರಸ್ತೆಗಾಗಿ ಬಿಟ್ಟು ಕೊಡುವುದಿಲ್ಲ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ನೈಜ ಭಾರತೀಯರು ನಕಲಿ ರೈತ ಹೋರಾಟ ಬೆಂಬಲಿಸಬಾರದು; ಈಶ್ವರಪ್ಪ ನೈಜ ಭಾರತೀಯರು ನಕಲಿ ರೈತ ಹೋರಾಟ ಬೆಂಬಲಿಸಬಾರದು; ಈಶ್ವರಪ್ಪ

ಹಲಗಾ ಗ್ರಾಮದಿಂದ ಮಚ್ಛೆವರೆಗೂ 9.5ಕಿಮೀ ಬೈಪಾಸ್ ರಸ್ತೆ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ರೈತರ ಸುಮಾರು 175 ಎಕರೆ ಜಮೀನನ್ನು ಎನ್‌ಎಚ್‌ಎಐ ಸ್ವಾಧೀನ ಪಡಿಸಿಕೊಂಡಿದೆ.

ಅಧಿಕಾರಿಗಳು ಶೇ 75ರಷ್ಟು ರೈತರಿಗೆ ಪರಿಹಾರ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ರೈತರಿಗೆ ಪರಿಹಾರ ನೀಡಿಲ್ಲ ಎಂದು ರೈತರು ಆರೋಪ ಮಾಡುತ್ತಿದ್ದು,ಕಾಮಗಾರಿ ಆರಂಭಿಸಬಾರದು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸದಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೆ, ಕಾನೂನು ಬಾಹಿರವಾಗಿ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

English summary
Belagavi farmers protest against Halaga-Macche bypass road construction. Farmers alleged that their agriculture land getting acquired by NHAI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X