ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಗಂಟೆ ವಿದ್ಯುತ್ ನೀಡಲು ರೈತರೇ ಬೇಡ ಎಂದಿದ್ದಾರೆ: ಕುಮಾರಸ್ವಾಮಿ

|
Google Oneindia Kannada News

ಬೆಳಗಾವಿ, ಡಿಸೆಂಬರ್ 11: ಹಗಲಿನಲ್ಲಿ ಸತತ 10 ಗಂಟೆ ಪಂಪ್‌ಸೆಟ್‌ಗೆ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದೆ ಆದರೆ ರೈತರೇ ಇದಕ್ಕೆ ಬೇಡ ಎಂದಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಇಂದು ಸದನಕ್ಕೆ ತಿಳಿಸಿದರು.

ರೈತರ ಪಂಪ್‌ಸೆಟ್‌ಗೆ ವಿದ್ಯುತ್ ನೀಡುವಲ್ಲಿ ಆಗುತ್ತರುವ ವ್ಯತ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹೆಚ್ಚು ವಿದ್ಯುತ್ ನೀಡಿದರೆ ಹೆಚ್ಚು ಕಾಲ ಪಂಪ್‌ಸೆಟ್‌ ಓಡಿ ಅಂತರ್ಜಲ ಬೇಗ ಖಾಲಿ ಆಗುತ್ತದೆ ಹಾಗಾಗಿ ಹೆಚ್ಚು ವಿದ್ಯುತ್ ಬೇಡವೆಂದು ಕೆಲವು ರೈತರೇ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಅವರು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಋಣಮುಕ್ತ ಕಾಯಿದೆ ಮಂಡನೆಗೆ ಸಿದ್ಧತೆಬೆಳಗಾವಿ ಅಧಿವೇಶನದಲ್ಲಿ ಋಣಮುಕ್ತ ಕಾಯಿದೆ ಮಂಡನೆಗೆ ಸಿದ್ಧತೆ

ಈಗ ದಿನಕ್ಕೆ 7 ಗಂಟೆ ಕಾಲ ಕೃಷಿಗೆ 3 ಫೇಸ್ ವಿದ್ಯುತ್ ನೀಡಲಾಗುತ್ತಿದೆ. ನಿರಂತರ ಜ್ಯೋತಿ ಪೂರ್ಣಗೊಂಡಿರುವ ಕಡೆ ದಿನದ 20 ರಿಂದ 22 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಗುಣಮಟ್ಟ ಹೆಚ್ಚಿಸಲು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಮಾಹಿತಿ ನೀಡಿದರು.

Farmers not wanted 10 hours of power to pump set: CM Kumaraswamy

ರಾಜ್ಯವು ಬರದಿಂದ ನಲುಗುತ್ತಿದೆ, ನೀರಿನ ಅವಶ್ಯಕತೆ ಇದೆ ಹಾಗಾಗಿ ಏಳು ಗಂಟೆ ಬದಲಿಗೆ ಗ್ರಾಮೀಣ ಭಾಗಗಳಿಗೆ 10 ಗಂಟೆ ವಿದ್ಯುತ್ ನೀಡಿ ಎಂದು ಅವರು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರು ಆಗ್ರಹಿಸಿದರು.

ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್‌ಸಿಗೆ ಬೇಡಿಕೆ ಇಟ್ಟ ಎಸ್ಕಾಂಗಳುವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್‌ಸಿಗೆ ಬೇಡಿಕೆ ಇಟ್ಟ ಎಸ್ಕಾಂಗಳು

ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆ ಅಘೋಷಿತ ಲೋಡ್‌ ಶೆಡ್ಡಿಂಗ್ ಮಾಡಲಾಗುತ್ತಿದೆ. ಆದರೆ ಸರ್ಕಾರವು ಇದೇ ವೇಳೆ ಗ್ರಾಮೀಣ ಭಾಗಗಳಿಗೂ 10 ಗಂಟೆ ವಿದ್ಯುತ್ ನೀಡುತ್ತೇವೆ ಎಂದಿದೆ.

English summary
CM Kumaraswamy said government is ready to give 10 hours power to rural area but farmers only objected for it. They say if ground water will become empty if government give 10 hours of power to pomp sets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X