ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾರ್ಮೋಡ: ಮತ್ತೊಬ್ಬ ರೈತ ನೇಣಿಗೆ ಶರಣು

|
Google Oneindia Kannada News

ಬೆಳಗಾವಿ, ಏಪ್ರಿಲ್ 2: ಕೊರೊನಾದಿಂದ ರಾಜ್ಯದ ರೈತರ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ. ಸಮೃದ್ದಿಯಾಗಿ ಬೆಳೆದ ಮೆಣಸಿನಕಾಯಿಯನ್ನು ಸೂಕ್ತ ದರಕ್ಕೆ ಮಾರಾಟ ಮಾಡಲು ಆಗಲಿಲ್ಲ ಎಂದು ರೈತನೊಬ್ಬ ಜಮೀನಿನಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದ ಕಲ್ಲಪ್ಪ ಬಾಳೆಕುಂದ್ರಿ (54) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಚೀನಾದಲ್ಲಿದ್ದಾರಂತೆ 40 ಸಾವಿರ ಅಗೋಚರ ಕೊರೊನಾ ರೋಗಿಗಳು..!ಚೀನಾದಲ್ಲಿದ್ದಾರಂತೆ 40 ಸಾವಿರ ಅಗೋಚರ ಕೊರೊನಾ ರೋಗಿಗಳು..!

ಕಲ್ಲಪ್ಪ ವಿವಿಧ ಬ್ಯಾಂಕ್‌ಗಳಲ್ಲಿ 5 ಲಕ್ಷ 55 ಸಾವಿರ ಸಾಲ ಮಾಡಿಕೊಂಡಿದ್ದ. ಕಳೆದ ವರ್ಷ ಅತಿವೃಷ್ಟಿಯಿಂದ ಭತ್ತದ ಬೆಳೆ ಕೈಕೊಟ್ಟಿತ್ತು. ಈ ಸಲದ ಬೇಸಿಗೆಗೆ ಸಾಲ ಮಾಡಿ ಮೆಣಸಿಕಾಯಿಯನ್ನು ಬೆಳೆದಿದ್ದ ರೈತ ಭರ್ಜರಿ ಫಸಲು ಬಂದಿದ್ದರಿಂದ ಸಂತಸಗೊಂಡಿದ್ದ.

Farmer Commits Suicide In Belagavi District For Coronavirus Effect

ಕರೊನಾ ಹಿನ್ನೆಲೆ ಮೆಣಸಿನಕಾಯಿ ಬೇಡಿಕೆ ಕುಗ್ಗಿತ್ತು. 5-6 ರೂಗೆ ಕೆಜಿಯಂತೆ ಮೆಣಸಿನಕಾಯಿ ವ್ಯಾಪಾರವಾಗುತ್ತಿದ್ದರಿಂದ ಮನನೊಂದು ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂದಗಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

English summary
Farmer Commits Suicide In Belagavi District For Coronavirus Effect. Khanapura taluku avarolli village farmer kallappa commits suicide. he upset with green chilly rate down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X