ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳಸಿದಷ್ಟು ಬೆಳೆದೀತು ಕನ್ನಡ ಭಾಷೆ; ಬೆಳಗಾವಿಯಲ್ಲಿ ಸಾಹಿತಿಗಳ ಸಂವಾದ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಅಕ್ಟೋಬರ್ 31: ಇಂಗ್ಲಿಷ್ ಭಾಷೆಯ ಮೋಹದಲ್ಲಿ ಕನ್ನಡದ ಅಸ್ಮಿತೆ ಕಳೆದುಹೋಗಬಾರದು; ಬರೀ ಹೋರಾಟ, ಭಾಷಣದಿಂದ ಭಾಷೆ ಬೆಳೆಯುವುದಿಲ್ಲ; ಅದರ ಜತೆಗೆ ಬಳಕೆಯಿಂದ ಭಾಷೆ ಉಳಿಸೋಣ; ಗಡಿ ಗಟ್ಟಿಗೊಳಿಸಲು ಕನ್ನಡ ಶಾಲೆ ಗಟ್ಟಿಗೊಳಿಸುವುದರ ಜತೆಗೆ ಇಂಗ್ಲಿಷ್ ನ ಮಮ್ಮಿಯ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕನ್ನಡದ "ಅವ್ವ"ನನ್ನು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸೋಣ...

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶನಿವಾರ ನಡೆದ "ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಾಗಿರುವುದು ಏನು" ವಿಷಯದ ಕುರಿತು ಸಾಹಿತಿಗಳೊಂದಿಗೆ ನಡೆದ ಫೇಸ್‌ಬುಕ್‌ ಲೈವ್ ಸಂವಾದದಲ್ಲಿ ಕೇಳಿಬಂದ ಸಾಹಿತ್ಯ ಲೋಕದ ಒತ್ತಾಸೆಗಳಿವು.

ರಾಜ್ಯೋತ್ಸವ ಪ್ರಶಸ್ತಿ-2020: ನೈಜ ಸಾಧಕರಿಗೆ ಮಣೆ, ಲಾಬಿಗೆ ಕೊನೆ ರಾಜ್ಯೋತ್ಸವ ಪ್ರಶಸ್ತಿ-2020: ನೈಜ ಸಾಧಕರಿಗೆ ಮಣೆ, ಲಾಬಿಗೆ ಕೊನೆ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಆಶಯ ನುಡಿಗಳನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಸ್ತುತಪಡಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಫೇಸ್‌ಬುಕ್‌ ಲೈವ್ ಮೂಲಕ ಜನರನ್ನು ತಲುಪುವ ಪ್ರಯತ್ನ ಇದಾಗಿತ್ತು. ಕನ್ನಡ ಅನುಷ್ಠಾನಕ್ಕೆ ಸರ್ಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಕನ್ನಡದ ಸಮರ್ಪಕ ಅನುಷ್ಠಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಗೆ ಬರುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.

Belagavi: Facebook Live With Writers Onbehalf Of Kannada Rajyotsava

ಸಂವಾದದಲ್ಲಿ‌ ಮಾತನಾಡಿದ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಪ್ರೊ.ಬಸವರಾಜ ಜಗಜಂಪಿ ಅವರು, ಕನ್ನಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷಾಭಿಮಾನ ಇಲ್ಲದಿರುವುದರಿಂದ ಬೆಳವಣಿಗೆಗೆ ಕುತ್ತು ಬರುತ್ತಿದೆ. ಯಾವುದೇ ಭಾಷೆ ಕಲಿತರೂ ಅನುಕೂಲ. ಆದರೆ ಮಾತೃಭಾಷೆಗೆ ಮೊದಲ ಆದ್ಯತೆ ನಮ್ಮದಾಗಬೇಕು. ಮಕ್ಕಳಲ್ಲಿ ಕನ್ನಡದ ಪ್ರೀತಿ ಬೆಳೆಸಬೇಕು. ಇಂಗ್ಲಿಷ್ ಮೋಹದಲ್ಲಿ ಕನ್ನಡದ ಅಸ್ಮಿತೆ ಕಳೆದುಹೋಗದಂತೆ ನಾವು ಎಚ್ಚರಿಕೆ ವಹಿಸಬೇಕು. ಇಂಗ್ಲಿಷ್ ಭ್ರಮೆಯಿಂದ ಹೊರಬರಬೇಕಿದೆ. ಹೋರಾಟ ಮತ್ತು ಬರವಣಿಗೆ, ಭಾಷಣಗಳಿಂದ ಭಾಷೆ ಬೆಳೆಯುವುದಿಲ್ಲ. ಭಾಷೆಯನ್ನು ಎಲ್ಲರೂ ಕೂಡಿ ಬೆಳೆಸಬೇಕು. ಶ್ರದ್ಧೆ ಮತ್ತು ಬದ್ಧತೆ ಯಿಂದ ಕನ್ನಡ ಬೆಳವಣಿಗೆ ಸಾಧ್ಯ" ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಬಸವರಾಜ ಗವಿಮಠ ಅವರು ಕನ್ನಡ ಭಾಷೆಯ ಉನ್ನತಿಗೆ ಹಲವು ಸಲಹೆಗಳನ್ನು ನೀಡಿದರು.

ಕನ್ನಡ-ಮರಾಠಿ ಭಾಷಾ ಸಾಮರಸ್ಯ
ಕನ್ನಡ-ಮಹಾರಾಷ್ಟ್ರ-ಆಂಧ್ರ ರಾಜ್ಯಗಳ ಜನರ ಭಾಷೆ-ಬದುಕಿನಲ್ಲಿ ಸಾಮ್ಯತೆಯಿದೆ ಎಂದು ಅಭಿಪ್ರಾಯಪಟ್ಟ ಹಿರಿಯ ನಾಟಕಕಾರ, ವಿಮರ್ಶಕ ಮತ್ತು ಕಲಾವಿದ ಡಿ.ಎಸ್.ಚೌಗಲೆ ಅವರು, ಈ ಭಾಷೆಗಳ ನಡುವಿನ ಅನನ್ಯತೆಯನ್ನು ಸೋದಾರಣವಾಗಿ ವಿವರಿಸಿದರು. ಮರಾಠಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯಿಂದ ಕನ್ನಡಕ್ಕೆ ಸವಾಲುಗಳಿಲ್ಲ. ಯಾವುದೇ ಭಾಷೆಯಾಗಲಿ ನಾವು ಬಳಸಿದಾಗ ಮಾತ್ರ ಅದು ಬೆಳೆಯುತ್ತದೆ ಎಂದರು.

English summary
Facebook Live with writers was organised by belagavi district administration, information department onbehalf of Kannada Rajyotsava,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X