ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ : ಭಾರಿ ಕಾವೇರಲಿದೆ ಕಲಾಪ

By Manjunatha
|
Google Oneindia Kannada News

ಬೆಳಗಾವಿ, ನವೆಂಬರ್ 23 : ಚಳಿಗಾಲದ ಅಧಿವೇಶನ ಇಂದು (ನವೆಂಬರ್ 23) ಎರಡೂ ಸದನದಲ್ಲಿ ಚರ್ಚೆ ಕಾವೇರುವ ಸಂಭವವಿದೆ.

ಮಂಗಳೂರು-ಮೂಡಬಿದಿರೆ ರಸ್ತೆ ನಾಲ್ಕು ಪಥವಾಗಿ ಅಭಿವೃದ್ಧಿಮಂಗಳೂರು-ಮೂಡಬಿದಿರೆ ರಸ್ತೆ ನಾಲ್ಕು ಪಥವಾಗಿ ಅಭಿವೃದ್ಧಿ

ಅಧಿವೇಶನದ ಪ್ರಮುಖ ಉದ್ದೇಶಗಳಲ್ಲೊಂದಾದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ, ಹಾಗೂ ಇನ್ನಿತರ ವಿಷಯಗಳ ಬಗ್ಗೆ ಉಭಯ ಸದನದಲ್ಲಿ ಮುಖ್ಯಮಂತ್ರಿಗಳು ಸುದೀರ್ಘ ಉತ್ತರ ನಿಡಲಿದ್ದಾರೆ.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Estimated high debate final day of winter session

ನಿನ್ನೆ (ನವೆಂಬರ್ 22) ವಿಧಾನಸಭೆಯಲ್ಲಿ ಅಂಗೀಕಾರವಾದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಮತ್ತು ಬಡ್ತಿ ಮೀಸಲಾತಿ ಕಾಯ್ದೆ ವಿಧಾನಪರಿಷತ್ ನಲ್ಲಿ ಇಂದು (ನವೆಂಬರ್ 23) ಮಂಡನೆ ಆಗಲಿದೆ.

ಇಂದು ಸದನದಲ್ಲಿ ಭಾರಿ ಚರ್ಚೆ, ವಾಗ್ವಾದಗಳು ಜರುಗುವ ಎಲ್ಲ ಮುನ್ಸೂಚನೆಗಳೂ ಇವೆ. ಆದರೆ ಜೆಡಿಎಸ್ ಸದಸ್ಯರು ಈಗಾಗಲೇ ತಾವು ಪ್ರತಿಭಟನೆ ಮಾಡಿ ಸದನದ ಸಮಯ ವ್ಯರ್ಥ ಮಾಡುವುದಿಲ್ಲವೆಂದು ಹೇಳಿರುವ ಕಾರಣ ಹಾಗೂ ಬಿ.ಜೆ.ಪಿ ಸದಸ್ಯರೂ ಕೂಡ ಇದಕ್ಕೆ ಒಪ್ಪಿಗೆ ನೀಡಿರುವುದರಿಂದ ಸದನ ಇಂದು ಸುಸೂತ್ರವಾಗಿ ನಡೆಯುತ್ತದೆ ಎಂಬ ವಿಶ್ವಾಸವಿದೆ.

ಇಂದು ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಸಮಸ್ಯೆ, ಕುಡಿಯುವ ನೀರು, ಮಹದಾಯಿ ಯೋಜನೆ, ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚೆ ಆಗಲಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಎಂಜಿನಿಯರಿಂಗ್ ಕಾಲೇಜುಗಳ ನಿರ್ಮಾಣದ ಬಗೆಗಿನ ಬಹುದಿನಗಳ ಬೇಡಿಕೆಗೆ ಇಂದು ಅನುಮೋದನೆ ಸಿಗಲಿದೆ ಎನ್ನುವ ಆಶಾಭಾವನೆ ಇದೆ.

ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ, ಮಹಾದಾಯಿ ಯೋಜನೆ, ಬಡ್ತಿ ಮೀಸಲಾತಿ ಕಾಯ್ದೆ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಗಳು ಉಭಯ ಸದನದಲ್ಲಿ ಗದ್ದಲಕ್ಕೆ ಕಾರಣವಾಗಬಹುದು.

10 ದಿನಗಳಿಂದ ಸದಸ್ಯರ ಹಾಜರಾತಿ ಕೂಡ ಈ ಬಾರಿ ಅಧಿವೇಶನದ ವಿವಾದಗಳಲ್ಲೊಂದು ಹಾಗಾಗಿ ಪ್ರಮುಖ ಚರ್ಚೆಗಳು ನಡೆಯುತ್ತಿರುವ ಇಂದಾದರೂ (ನವೆಂಬರ್ 23) ಹೆಚ್ಚಿನ ಸದಸ್ಯರು ಕಲಾಪದಲ್ಲಿ ಭಾಗಿಯಾಗುತ್ತಾರೆಯೇ ಕಾದು ನೋಡಬೇಕು.

English summary
Last day of winter session 2017 estimated that thier will be high debate on north Karnataka development issue and KPME and other issues. CM is giving answers to the both houses today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X