• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಯಾಣಿಕರ ದಟ್ಟಣೆ; ಬೆಳಗಾವಿ ಏರ್‌ಪೋರ್ಟ್‌ಗೆ 3ನೇ ಸ್ಥಾನ

|

ಬೆಳಗಾವಿ, ನವೆಂಬರ್ 22 : ಬೆಂಗಳೂರು ಮತ್ತು ಮಂಗಳೂರು ಬಳಿಕ ಬೆಳಗಾವಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದೆ. 2020ರ ಏಪ್ರಿಲ್‌ನಿಂದ ಅಕ್ಟೋಬರ್ ತನಕ 92,073 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದೆ. 2018 ಮತ್ತು 2019ರಲ್ಲಿ 3ನೇ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಪಡೆದಿತ್ತು. ಆದರೆ, ಈ ವರ್ಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಡಿಸೆಂಬರ್ 10ರಿಂದ ಮೈಸೂರು-ಮಂಗಳೂರು ವಿಮಾನ ಸೇವೆ

ಲಾಕ್ ಡೌನ್ ಬಳಿಕ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮೊದಲು ವಿಮಾನ ಹಾರಾಟ ಆರಂಭಿಸಲಾಯಿತು. ಆದ್ದರಿಂದ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಕೊರತೆ ಎದುರಾಯಿತು. ಅಕ್ಟೋಬರ್ ತಿಂಗಳಿನಲ್ಲಿ 26,183 ಜನರು ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ.

ಜನವರಿ 1ರಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸೇವೆ ಪುನಃ ಆರಂಭವಾಗಿದೆ. ಏರ್ ಇಂಡಿಯಾ ಸಹ ಶೀಘ್ರದಲ್ಲಿಯೇ ಸಂಚಾರ ಪುನಃ ಆರಂಭಿಸಲಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ದೆಹಲಿ ನಡುವೆ ವಿಮಾನ ಯಾನ ಆರಂಭ

ಎಲ್ಲಿಗೆ ಎಷ್ಟು ಪ್ರಯಾಣಿಕರು; 2020ರ ಏಪ್ರಿಲ್‌ನಿಂದ ಅಕ್ಟೋಬರ್ ತನಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ 42,122 ವಿಮಾನಗಳು ಆಗಮಿಸಿವೆ. 35,47,644 ಜನರು ಆಗಮಿಸಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿಯೇ 11,770 ವಿಮಾನ ಆಗಮಿಸಿವೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ 1,727 ವಿಮಾನಗಳು ಸಂಚಾರ ನಡೆಸಿದ್ದು, 1,27,725 ಪ್ರಯಾಣಿಕರು ಭೇಟಿ ನೀಡಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿಯೇ 593 ವಿಮಾನಗಳು ಹಾರಾಟ ನಡೆಸಿವೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ 2,424 ವಿಮಾನಗಳು ಆಗಮಿಸಿದ್ದು, 92,073 ಪ್ರಯಣಿಕರು ಆಗಮಿಸಿದ್ದಾರೆ. 634 ವಿಮಾನಗಳು ಅಕ್ಟೋಬರ್ ತಿಂಗಳಿನಲ್ಲಿ ಬಂದಿವೆ.

ಏಪ್ರಿಲ್‌ನಿಂದ ಅಕ್ಟೋಬರ್ ತನಕ ಕಲಬುರಗಿಗೆ 626, ಮೈಸೂರಿಗೆ 1,464, ಹುಬ್ಬಳ್ಳಿಗೆ 484, ಬೀದರ್‌ಗೆ 158 ವಿಮಾನಗಳು ಆಗಮಿಸಿವೆ.

English summary
After Bengaluru and Mangalruu Belagavi airport emerged as the next most high traffic airport in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X