ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರಿಗೆ ಸಿಹಿ ಸುದ್ದಿ; ದೂಧ್ ಸಾಗರದಲ್ಲಿ ರೈಲು ನಿಲ್ಲಲಿದೆ

|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 05 : ಭಾರತೀಯ ರೈಲ್ವೆ ದೂಧ್ ಸಾಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ. ದೂಧ್ ಸಾಗರ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಬುಧವಾರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಗೋವಾ-ಬೆಳಗಾವಿ ನೂತನ ರೈಲು ಸೇವೆಗೆ ಚಾಲನೆ ನೀಡಿದರು. ದೂಧ್ ಸಾಗರ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಪೂರ್ವ ರೈಲ್ವೆ ನೇಮಕಾತಿ 252 ಹುದ್ದೆ, ದ್ವಿತೀಯ ಪಿಯುಸಿ ವಿದ್ಯಾರ್ಹತೆಪೂರ್ವ ರೈಲ್ವೆ ನೇಮಕಾತಿ 252 ಹುದ್ದೆ, ದ್ವಿತೀಯ ಪಿಯುಸಿ ವಿದ್ಯಾರ್ಹತೆ

Dudhsagar Falls Commercial Halt Station Inaugurated

ದೂಧ್ ಸಾಗರ ಜಲಪಾತ ವೀಕ್ಷಣೆ ಮಾಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಅನುಕೂಲ ಕಲ್ಪಿಸಲು ನಿಲ್ದಾಣದಲ್ಲಿ ರೈಲುಗಳು ನಿಲುಗಡೆಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು-ಮೈಸೂರು ನಡುವೆ 2 ಹೊಸ ಮೆಮು ರೈಲಿಗೆ ಗ್ರೀನ್ ಸಿಗ್ನಲ್ಬೆಂಗಳೂರು-ಮೈಸೂರು ನಡುವೆ 2 ಹೊಸ ಮೆಮು ರೈಲಿಗೆ ಗ್ರೀನ್ ಸಿಗ್ನಲ್

ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಅಂಗಡಿ, "ಪ್ರವಾಸಿಗರ ಅನುಕೂಲಕ್ಕಾಗಿ ದೂಧ್ ಸಾಗರ ರೈಲು ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಆರಂಭಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದರು.

ಪ್ರೇಮಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಭಾರತೀಯ ರೈಲ್ವೆ!ಪ್ರೇಮಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಭಾರತೀಯ ರೈಲ್ವೆ!

Dudhsagar Falls Commercial Halt Station Inaugurated

ದೂಧ್ ಸಾಗರ ಮೂಲಕ ರೈಲುಗಳು ಸಂಚಾರ ನಡೆಸುತ್ತಿದ್ದರೂ ರೈಲುಗಳು ಅಲ್ಲಿ ನಿಲುಗಡೆಗೊಳ್ಳುತ್ತಿರಲಿಲ್ಲ. ಈಗ ಪ್ರಾಯೋಗಿಕವಾಗಿ ರೈಲುಗಳನ್ನು ನಿಲ್ಲಿಸಲು ಆರಂಭಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಇದನ್ನು ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಗುತ್ತದೆ.

English summary
Good news for tourists Dudhsagar Falls commercial halt station inaugurated by Indian railways. Belagavi-Goa train will halt in station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X