ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು ಎಂದು ಸಿದ್ದರಾಮಯ್ಯ ಹೇಳಿದಾಗ ಕುಡುಕ ಹೇಳಿದ್ದೇನು?

|
Google Oneindia Kannada News

ಬೆಳಗಾವಿ, ನ 30: ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಸಂಬಂಧ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ, ಸ್ವಾರಸ್ಯಕರ ಘಟನೆಯೊಂದು ನಡೆದಿದೆ.

ಕ್ಷೇತ್ರದ ಅಭ್ಯರ್ಥಿ ರಾಜು ಕಾಗೆ ಪರ ಪ್ರಚಾರ ನಡೆಸುತ್ತಿದ್ದ ಸಿದ್ದರಾಮಯ್ಯ ತನ್ನ ಎಂದಿನ ದಾಟಿಯಲ್ಲಿ ಭಾಷಣ ಮಾಡುತ್ತಿದ್ದರು. ಸಿದ್ದರಾಮಯ್ಯ ಭಾಷಣದ ವೇಳೆ, ಕುಡುಕನೊಬ್ಬ ಲೇವಡಿ ಮಾಡಿದ್ದಾನೆ.

ಮುಖಂಡರ ಅಸಹಕಾರ: ಕಾಂಗ್ರೆಸ್ಸಿಗೆ 'ಶಿವಾಜಿನಗರ' ದಲ್ಲಿ ಧರ್ಮಸಂಕಟಮುಖಂಡರ ಅಸಹಕಾರ: ಕಾಂಗ್ರೆಸ್ಸಿಗೆ 'ಶಿವಾಜಿನಗರ' ದಲ್ಲಿ ಧರ್ಮಸಂಕಟ

"ಇಂದಿರಾ ಗಾಂಧಿ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನು ತೆತ್ತರು" ಎಂದು ಸಿದ್ದರಾಮಯ್ಯ ಹೇಳಿದಾಗ, ಕುಡುಕ, "ಹೌದು ಹುಲಿಯಾ" ಎಂದು ಕೂಗಿದ್ದಾನೆ. ತುಂಬಿದ ಸಭೆ, ಕುಡುಕನ ಮಾತಿಗೆ ಒಂದು ಬಾರಿ ಗುಳ್ಳೆಂದು ನಕ್ಕಿದೆ.

Drunkard Disturbance During Siddaramaiah By Election Speech In Kagwad, Belagavi

ಇದರಿಂದ ಸಿಟ್ಟಾದ ಸಿದ್ದರಾಮಯ್ಯ, "ಏ ಯಾರೋ ಅವನು, ಕಳ್ಸೋ ಆಚೆ ಅವನ್ನಾ" ಎಂದು ಗರಂ ಆಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕುಡುಕನನ್ನು ಹೊರಹಾಕಲು ಮುಂದಾದಾಗ, "ಸುಮ್ಮನೆ ಕೂತ್ಕೋಬೇಕು. ಇನ್ನೊಂದು ಸಲ ಈ ರೀತಿ ಮಾತಾಡಿದರೆ ಆಚೆ ಕಳುಹಿಸಿಬಿಡುತ್ತೇನೆ" ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಕುಡುಕ ಮತ್ತೆ ಕಿರಿಕಿರಿ ಮಾಡಿದಾಗ, " ಏ.. ಬೆಳಗ್ಗೆನೇ.. ಗುಂಡು ಹಾಕಿಕೊಂಡು ಬಂದಿದ್ದಾನೆ. ಕಳುಹಿಸಿ ಆಚೆ ಅವನನ್ನ, ಎಲ್ಲಾ ಈ ಕಡೆ ತಿರುಗಿ, ಅವನು ಹೋಗಲಿ" ಎಂದು ಸಿದ್ದರಾಮಯ್ಯ ಭಾಷಣ ಮುಂದುವರಿಸಿದ್ದಾರೆ.

ನಿಮ್ಮ ಕಾಲಿಗೆ ಬೀಳ್ತೀನಿ, ನನ್ನನ್ನು ಗೆಲ್ಲಿಸಿ: ಮತ್ತೆ ಮತ್ತೆ ಸೋತರೆ ತಡೆದುಕೊಳ್ಳುವ ಶಕ್ತಿ ನನಗಿಲ್ಲನಿಮ್ಮ ಕಾಲಿಗೆ ಬೀಳ್ತೀನಿ, ನನ್ನನ್ನು ಗೆಲ್ಲಿಸಿ: ಮತ್ತೆ ಮತ್ತೆ ಸೋತರೆ ತಡೆದುಕೊಳ್ಳುವ ಶಕ್ತಿ ನನಗಿಲ್ಲ

"ನಮ್ಮ‌ ಪಕ್ಷದಿಂದ ಗೆದ್ದ ಶ್ರೀಮಂತ ಪಾಟೀಲ್ ಅವಧಿ ಮುಗಿಯುವ ತನಕ ಕಾಂಗ್ರೆಸ್‌ನಲ್ಲಿ ಇರಬೇಕಿತ್ತು.‌ ಆದರೆ ಬಿಜೆಪಿಯವರು ಒಡ್ಡಿದ ಆಮಿಷಕ್ಕೆ ಬಲಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷಾಂತರ ಮಾಡಿ ಈಗ ಅನರ್ಹ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಅವರನ್ನು ಸೋಲಿಸಿ, ಮನೆಗೆ ಕಳುಹಿಸುವ ಕೆಲಸವನ್ನು ಮತದಾರರು ಮಾಡಬೇಕು" ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಶ್ರೀಮಂತ ಪಾಟೀಲ, ಕಾಂಗ್ರೆಸ್ಸಿನಿಂದ ರಾಜು ಕಾಗೆ ಮತ್ತು ಜೆಡಿಎಸ್ಸಿನಿಂದ ಶ್ರೀಶೈಲ ತುಗಶೆಟ್ಟಿ ಕಣದಲ್ಲಿದ್ದಾರೆ.

English summary
Drunkard Disturbance During Opposition Leader Siddaramaiah By Election Speech In Kagwad, Belagavi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X