ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಆಧಾರ್' ಇಲ್ಲದ್ದಕ್ಕೆ ಮಗುವನ್ನೇ ಕಳೆದುಕೊಳ್ಳುವ ಭೀತಿಯಲ್ಲಿ ತಾಯಿ!

|
Google Oneindia Kannada News

ಬೆಳಗಾವಿ, ನವೆಂಬರ್.12: ನೆರೆಗೆ ಸಿಲುಕಿದ ಬದುಕು ಹೊರೆಯಾಗಿದೆ. ಹೆತ್ತ ಕರುಳಿನ ಕುಡಿಯ ಮುಖ ಹೆತ್ತವಳ ಪ್ರಾಣ ಉಳಿಸಿದೆ. ಕರುಳ ಬಳ್ಳಿಗಾಗಿ ಬದುಕಿದ ತಾಯಿ ಇಂದು ಕಣ್ಣೀರಿನಲ್ಲಿ ಕೈ ತೊಳೆಯುವಂತಾ ಸ್ಥಿತಿ ಎದುರಾಗಿದೆ.

ಮಹಾರಾಷ್ಟ್ರ ಕೋಯ್ನಾ ಜಲಾಶಯದಿಂದ ಹರಿದ ನೀರಿಗೆ ಬದುಕು ಕೊಚ್ಚಿ ಹೋಗಿತ್ತು. ಅದೊಂದು ಕರುಳಿನ ಬಳ್ಳಿ ಹೆತ್ತವಳ ಜೀವನದಲ್ಲಿ ಆಶಾಕಿರಣವನ್ನು ಮೂಡಿಸಿತ್ತು. ಸರ್ವಸ್ವವನ್ನೇ ಕಳೆದುಕೊಂಡ ತಾಯಿ ಪುಟ್ಟ ಕಂದನಿಗಾಗಿ ಬದುಕುತ್ತಿದ್ದಳು.

ಡೆಂಜರ್ ಡೆಂಗ್ಯೂಗೆ ಬಲಿಯಾಗಿದ್ದು ಒಬ್ಬಿಬ್ಬರಲ್ಲಡೆಂಜರ್ ಡೆಂಗ್ಯೂಗೆ ಬಲಿಯಾಗಿದ್ದು ಒಬ್ಬಿಬ್ಬರಲ್ಲ

ಪ್ರಪಂಚವನ್ನು ನೋಡದ ಪುಟ್ಟ ಕಂದನಿಗಾಗಿ ಜೀವಿಸುತ್ತಿರುವ ಹೆತ್ತವಳ ಬದುಕಿನಲ್ಲಿ ವಿಧಿ ಮತ್ತೆ ಚೆಲ್ಲಾಟವಾಡುತ್ತಿದೆ. ಕಂದನ ಚಿಕಿತ್ಸೆಗೂ ಹಣವಿಲ್ಲದೇ ತಾಯಿ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇಂಥದೊಂದು ಕರುಣಾಜನಕ ಸ್ಥಿತಿಯಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ್ ನಗರದ ಗುರುವಾರಪೇಟೆ ನಿವಾಸಿ ಸುಜಾತ ಎಂಬ ಮಹಿಳೆ ನರಳುತ್ತಿದ್ದಾರೆ.

ವೈದ್ಯರು ಕೊಡೋದಿಲ್ವಂತೆ ಕಾಸಿಲ್ಲದೇ ಚಿಕಿತ್ಸೆ!

ವೈದ್ಯರು ಕೊಡೋದಿಲ್ವಂತೆ ಕಾಸಿಲ್ಲದೇ ಚಿಕಿತ್ಸೆ!

ಬೆಳಗಾವಿಯಲ್ಲೂ ಮಾರಕ ಡೆಂಗ್ಯೂ ಜ್ವರ ಭೀತಿ ಹೆಚ್ಚಿದೆ. ಕಳೆದ ಒಂದು ವಾರದಿಂದ ಡೆಂಗ್ಯೂ ಜ್ವರಕ್ಕೆ 17 ತಿಂಗಳ ಪುಟ್ಟ ಕಂದ ಸುಪ್ರಜ್ ತುತ್ತಾಗಿದ್ದನು. ಎರಡು ದಿನಗಳ ಹಿಂದಷ್ಟೇ ತಾಯಿ ಸುಜಾತ, ತನ್ನ ಮಗುವನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಿದ್ದರು. ಐಸಿಯುನಲ್ಲಿ ಎರಡು ದಿನ ಚಿಕಿತ್ಸೆ ನೀಡಿದ ವೈದ್ಯರು, ಈಗ ಬಿಲ್ ಕಟ್ಟದಿದ್ದರೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ.

ಪುಟ್ಟ ಕಂದ ಮೇಲೂ ಇಲ್ಲ ವೈದ್ಯರಿಗೆ ಕಕಲತ್ತು!

ಪುಟ್ಟ ಕಂದ ಮೇಲೂ ಇಲ್ಲ ವೈದ್ಯರಿಗೆ ಕಕಲತ್ತು!

ಪುಟ್ಟ ಮಗುವಿನ ಚಿಕಿತ್ಸೆಗೂ ಹಣವಿಲ್ಲದೇ ತಾಯಿ ಸುಜಾತ ವ್ಯಥೆ ಪಡುವಂತಾಗಿದೆ. ಇದರ ಮಧ್ಯೆ ಹಣ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ವೈದ್ಯರು ಮಗುವಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ಸ್ಥಗಿತಗೊಳಿಸಿದ್ದಾರೆ. ಈಗ ಆಗಿರುವ ಆಸ್ಪತ್ರೆ ಬಿಲ್ ಪಾವತಿಸಿ ಮಗುವನ್ನು ಕರೆದುಕೊಂಡು ಹೋಗುವಂತೆ ವೈದ್ಯರು ತಾಕೀತು ಮಾಡುತ್ತಿದ್ದಾರೆ ಎನ್ನಲಾಗಿದೆ.

ಮನೆ ಕಳೆದುಕೊಂಡ ತಾಯಿಗೆ ಮಗನನ್ನು ಕಳೆದುಕೊಳ್ಳುವ ಭೀತಿ

ಮನೆ ಕಳೆದುಕೊಂಡ ತಾಯಿಗೆ ಮಗನನ್ನು ಕಳೆದುಕೊಳ್ಳುವ ಭೀತಿ

ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಸುಜಾತ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅದಾಗಿ ಐದು ತಿಂಗಳಿನಲ್ಲಿ ಮಹಿಳೆಗೆ ವಿಧಿ ಮತ್ತೊಂದು ಆಘಾತ ನೀಡಿತು. ಘಟಪ್ರಭಾ ನದಿಯ ನೆರೆ ಹೊಡೆತಕ್ಕೆ ಇದ್ದ ಮನೆಯನ್ನೂ ಕಳೆದುಕೊಂಡು, ತಗಡಿನ ಶೆಡ್ ನಲ್ಲಿ ಜೀವನ ಸಾಗಿಸುತ್ತಿದ್ದರು. ಪತಿ, ಮನೆಯನ್ನು ಕಳೆದುಕೊಂಡ ಸುಜಾತ ಬದುಕಿನಲ್ಲಿ ವಿಧಿ ಮತ್ತೆ ಚೆಲ್ಲಾಟ ಆಡುತ್ತಿದೆ. ಪುಟ್ಟ ಕಂದನನ್ನೂ ಕೂಡಾ ಕಳೆದುಕೊಳ್ಳುವ ಭೀತಿಯಲ್ಲಿ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಮಹಿಳೆಯ ಕಣ್ಣೀರು ಒರೆಸುವ ಮಂದಿ ಯಾರೂ ಇಲ್ಲ

ಮಹಿಳೆಯ ಕಣ್ಣೀರು ಒರೆಸುವ ಮಂದಿ ಯಾರೂ ಇಲ್ಲ

ನೆರೆಯಲ್ಲಿ ಸುಜಾತ್ ಅವರ ಆಧಾರ ಕಾರ್ಡ್, ರೇಷನ್ ಕಾರ್ಡ್, ಕೊಚ್ಚಿಹೋಗಿದೆ. ಆದರೆ, ದಾಖಲೆಗಳನ್ನು ನೀಡದೆ ಸರ್ಕಾರಿ ಸ್ಕೀಮ್ ಅನ್ವಯಿಸುವುದಿಲ್ಲ. ಹಣ ಪಾವತಿ ಮಾಡಲೇಬೇಕು ಎಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯ ಆಡಳಿತ ಮಂಡಳಿ ಹೇಳುತ್ತಿದೆ. ಇದರಿಂದ ಕಂಗೆಟ್ಟಿರುವ ತಾಯಿ ಮುಂದಿನ ದಾರಿ ಕಾಣದೇ ಕಣ್ಣೀರು ಹಾಕುವಂತಾಗಿದೆ.

English summary
Belguam: Doctors Refuse To Treatment For Kid Without Money. Aadhaar Card Is Mandatory For Free Treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X