ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಮೂಲಕ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾಡಿ: ಮಾಜಿ ಸಂಸದ ಸಿದ್ನಾಳ ಆಗ್ರಹ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 9: ದೇಶದಲ್ಲಿ ಕಾಂಗ್ರೆಸ್ ಪಕ್ಷ ಕ್ಷೀಣಿಸುತ್ತಿದ್ದು, ಪಕ್ಷವನ್ನು ಮೇಲೆತ್ತಲು ಪರ್ಯಾಯ ನಾಯಕತ್ವದ ಅವಶ್ಯಕತೆ ಇದೆ. ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ ಮೂಲಕ ನಡೆಯಬೇಕು ಎಂದು ಮಾಜಿ ಸಂಸದ ಎಸ್.ಬಿ ಸಿದ್ನಾಳ ಆಗ್ರಹಿಸಿದರು.

Recommended Video

Sandalwood ಡ್ರಗ್ಸ್ ವಿಚಾರಕ್ಕೆ ಎಂಟ್ರಿ ಕೊಟ್ಟ Ramya | Oneindia Kannada

ಬೆಳಗಾವಿಯ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಏಳು ದಶಕಗಳಿಂದ ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಕೈಯಲ್ಲಿದೆ. ಕಾಂಗ್ರೆಸ್ ನಲ್ಲಿ ಪ್ರತಿಭಾವಂತ ಹಾಗೂ ಅನುಭವಿ ರಾಜಕಾರಣಿಗಳಿದ್ದಾರೆ. ಅಧ್ಯಕ್ಷರ ಆಯ್ಕೆ ಚುನಾವಣೆ ಮೂಲಕ ನಡೆಯಬೇಕು. ಅಂದಾಗ ಮಾತ್ರ ಹೊಸಬರಿಗೆ ಅವಕಾಶ ಸಿಗಲು ಸಾಧ್ಯವೆಂದರು.

ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ; ಕೇಂದ್ರ ಸಚಿವ ಮಾಹಿತಿಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ; ಕೇಂದ್ರ ಸಚಿವ ಮಾಹಿತಿ

ಗಾಂಧಿ ಕುಟುಂಬ ಬಿಟ್ಟು ಬೇರೆಯ ಯುವ ವ್ಯಕ್ತಿಗೆ ಅಧ್ಯಕ್ಷರಾಗುವ ಅವಕಾಶ ಸಿಗಬೇಕು. ಆಗ ಪಕ್ಷವನ್ನು ಮತ್ತೇ ದೇಶಾದ್ಯಂತ ಸಂಘಟಿಸಬಹುದು. ಇಲ್ಲವಾದರೆ ಕಾಂಗ್ರೆಸ್ ನಿರ್ನಾಮ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಎಚ್ಚರಿಸಿದರು.

Belagavi: Do Selection Of AICC President By Election: Former MP

ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸಬರಿಗೆ ಹಾಗೂ ಯುವ ನಾಯಕರಿಗೆ ಅವಕಾಶ ಸಿಗಬೇಕು. ಪ್ರಬಲ ಪ್ರತಿಪಕ್ಷ ಆಗಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತದೆ‌. ಬಿಜೆಪಿಯು ಸಾಮಾನ್ಯ ವ್ಯಕ್ತಿ ನರೇಂದ್ರ ಮೋದಿಗೆ ಅವಕಾಶ ನೀಡಿದೆ. ಆ ಕಾರಣಕ್ಕೆ ಬಿಜೆಪಿ ದೇಶಾದ್ಯಂತ ಸಂಘಟನೆ ಆಗುತ್ತಿದೆ‌. ಕಾಂಗ್ರೆಸ್ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

English summary
The Congress party is declining in the country and there is a need for alternative leadership to lift the party. Former MP S.B Sidnala has demanded that the selection of AICC president be held through elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X