ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ಸ್ಥಳೀಯರ ಅಸಹಕಾರ, ಸೈಕಲ್‌ನಲ್ಲಿ ಶವ ಸಾಗಣೆ

|
Google Oneindia Kannada News

ಬೆಳಗಾವಿ, ಆಗಸ್ಟ್ 17 : 71 ವರ್ಷದ ವೃದ್ಧನ ಅಂತ್ಯಕ್ರಿಯೆಗೆ ಸ್ಥಳೀಯರು ಅಸಹಕಾರ ನೀಡಿದ ಹಿನ್ನಲೆಯಲ್ಲಿ ಸೈಕಲ್‌ನಲ್ಲಿ ಶವ ಸಾಗಣೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೋವಿಡ್ ಭೀತಿಯ ಕಾರಣ ಜನರು ಸಹಕಾರ ನೀಡಲಿಲ್ಲ.

ಕಿತ್ತೂರು ತಾಲೂಕಿನ ಎಂ. ಕೆ. ಹುಬ್ಬಳ್ಳಿಯ ವೃದ್ಧ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದರು.

ಬೆಂಗಳೂರಲ್ಲಿ ಕೊವಿಡ್ ರೋಗಿ ಶವ ನೀಡಲು ಖಾಸಗಿ ಆಸ್ಪತ್ರೆಯಿಂದ 9 ಲಕ್ಷ ಸುಲಿಗೆ ಬೆಂಗಳೂರಲ್ಲಿ ಕೊವಿಡ್ ರೋಗಿ ಶವ ನೀಡಲು ಖಾಸಗಿ ಆಸ್ಪತ್ರೆಯಿಂದ 9 ಲಕ್ಷ ಸುಲಿಗೆ

ಬಳಿಕ ವೃದ್ಧನನ್ನು ಮನೆಗೆ ವಾಪಸ್ ಕರೆದುಕೊಂಡು ಬರಲಾಗಿತ್ತು. ಭಾನುವಾರ ಮನೆಯಲ್ಲಿಯೇ ವೃದ್ಧ ಮೃತಪಟ್ಟಿದ್ದ. ಕೊರೊನಾದಿಂದಾಗಿಯೇ ವೃದ್ಧ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಂತ್ಯಕ್ರಿಯೆಗೆ ಸಹಕಾರ ನೀಡಲಿಲ್ಲ.

ಬೆಳಗಾವಿ: ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರ ಬಂಧನಬೆಳಗಾವಿ: ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರ ಬಂಧನ

Belagavi

ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಶವ ಸಾಗಿಸಲು ವ್ಯವಸ್ಥೆಯಾಗಲಿಲ್ಲ. ಅಂತಿಮವಾಗಿ ಸೈಕಲ್‌ನಲ್ಲಿ ಶವವನ್ನು ಇಟ್ಟುಕೊಂಡು ಸಾಗಣೆ ಮಾಡಲಾಯಿತು.

ಕೊವಿಡ್ ರೋಗಿ ಸತ್ತು ಒಂದು 1 ದಿನ ಆಯ್ತು, ಇನ್ನೂ ವಾರ್ಡಿನಲ್ಲೇ ಇದೆ ಶವ ಕೊವಿಡ್ ರೋಗಿ ಸತ್ತು ಒಂದು 1 ದಿನ ಆಯ್ತು, ಇನ್ನೂ ವಾರ್ಡಿನಲ್ಲೇ ಇದೆ ಶವ

ಸೈಕಲ್‌ನಲ್ಲಿ ಶವ ಸಾಗಣೆ ಮಾಡುವ ಮಾಹಿತಿ ತಿಳಿದ ಬಳಿಕ ಪಟ್ಟಣ ಪಂಚಾಯಿತಿ ಸದಸ್ಯರಾದ ಪುಟ್ಟಪ್ಪ ಪಟ್ಟಣ ಶೆಟ್ಟಿ ವಾಹನದ ವ್ಯವಸ್ಥೆ ಮಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ 478 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 7,794.

English summary
71 year old man dead body transported in bicycle in Karnataka's Belagavi. Neighbours did not help the family members fearing that man died of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X