ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈತಪ್ಪುವ ಬಗ್ಗೆ ಸವದಿ ಏನಂದ್ರು?

|
Google Oneindia Kannada News

ಬೆಳಗಾವಿ, ಫೆಬ್ರವರಿ 2: ಅಥಣಿ ಶಾಸಕ ಮಹೇಶ್‌ ಕುಮಟಳ್ಳಿಗೆ ಸಚಿವ ಸ್ಥಾನ ಕೈತಪ್ಪುವ ವಿಚಾರವೆಲ್ಲವೂ ಕೇವಲ ಊಹಾಪೋಹವಷ್ಟೇ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮುಖ್ಯಮಂತ್ರಿಗೆ ಇರುವ ಪರಮಾಧಿಕಾರವನ್ನು ಯಾರೂ ಕೂಡ ಪ್ರಶ್ನೆಮಾಡುವಹಾಗಿಲ್ಲ. ಯಾರನ್ನು ಮುಂದುವರೆಸಬೇಕು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರೇ ತೀರ್ಮಾನ ಮಾಡುತ್ತಾರೆ ಆದರೆ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೈತಪ್ಪುವುದು ಕೇವಲ ಊಹಾಪೋಹಗಳಷ್ಟೇ ಎಂದು ಹೇಳಿದರು.

ಫೆಬ್ರವರಿ 3ರಂದು ಸಚಿವ ಸ್ಥಾನದ ಕುರಿತು ಸ್ಪಷ್ಟನೆ ದೊರೆಯಲಿದೆ

ಫೆಬ್ರವರಿ 3ರಂದು ಸಚಿವ ಸ್ಥಾನದ ಕುರಿತು ಸ್ಪಷ್ಟನೆ ದೊರೆಯಲಿದೆ

ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಮಾಡುವುದಾಗಿ ಈಗಾಗಲೇ ಬಿಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಫೆ.3 ಅಥವಾ ಫೆ.4 ರಂದು ಮಂತ್ರಿ ಮಂಡಲ ವಿಸ್ತರಣೆಯಾಗಲಿದೆ. ಆಗಲೇ ಈ ಬಗ್ಗೆ ಸ್ಪಷ್ಟನೆ ಸಿಗುವುದಕ್ಕೆ ಸಾಧ್ಯ. ಸಿಎಂ ಪಕ್ಷದ ರಾಷ್‌ಟರೀಯ ವರಿಷ್ಠರ ಜೊತೆ ಚರ್ಚೆ ಮಾಡಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಿದರು.

ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್; ಆರ್. ಶಂಕರ್‌ಗೆ ನಿರಾಸೆಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್; ಆರ್. ಶಂಕರ್‌ಗೆ ನಿರಾಸೆ

ವಿಧಾನ ಪರಿಷತ್‌ಗೆ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್‌ಗೆ ನಾಮಪತ್ರ ಸಲ್ಲಿಕೆ

ಇದೇ ವೇಳೆ ವಿಧಾನಪರಿಷತ್‌ಗೆ ನಾಮಪತ್ರ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಪಕ್ಷದ ಸೂಚನೆ ಬಂದ ಬಳಿಕ ವಿಧಾನಪರಿಷತ್‌ಗೆ ನಾಮಪತ್ರ ಸಲ್ಲಿಸುತ್ತೇನೆ. ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ. ಭಾನುವಾರ ಧಾರವಾಡ ಪ್ರವಾಸದಲ್ಲಿದ್ದೇನೆ ಎಂದರು.

ಪಕ್ಷದ ಅಧ್ಯಕ್ಷರು ಏನು ಹೇಳುತ್ತಾರೆ ಕಾದು ನೋಡಬೇಕು

ಪಕ್ಷದ ಅಧ್ಯಕ್ಷರು ಏನು ಹೇಳುತ್ತಾರೆ ಕಾದು ನೋಡಬೇಕು

ಫೆ.3ರಂದು ಬೆಂಗಳೂರಿಗೆ ಹೋಗುತ್ತಿದ್ದೇನೆ, ಅಲ್ಲಿ ಹೋದ ಮೇಲೆ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲಿದ್ದೇನೆ. ಅವರೇನು ಸೂಚನೆ ಕೊಡುತ್ತಾರೋ ಅದರ ಮೇಲೆ ನಿರ್ಣಯ ಕೈಗೊಳ್ಳುವೆ ಎಂದು ಮಾಹಿತಿ ನೀಡಿದರು.

ನಮ್ಮ ಹೋರಾಟವನ್ನು ಯಡಿಯೂರಪ್ಪ ಅರ್ಥಮಾಡಿಕೊಳ್ಳಬೇಕು

ನಮ್ಮ ಹೋರಾಟವನ್ನು ಯಡಿಯೂರಪ್ಪ ಅರ್ಥಮಾಡಿಕೊಳ್ಳಬೇಕು

ನಮ್ಮದು ಹೋರಾಟವೇ ಹೊರತು ಮಾರಾಟವಲ್ಲ ಅದನ್ನು ಯಡಿಯೂರಪ್ಪ ಅರ್ಥಮಾಡಿಕೊಳ್ಳಬೇಕು ಎಂದು ಎಚ್‌ಎಸ್ ವಿಶ್ವನಾಥ್ ಹೇಳಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಶೀಘ್ರವೇ ಪುಸ್ತಕವೊಂದನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

English summary
Deputy Chief Minister Lakshman Savadi has said that the issue of MLA Mahesh Kumatalli's Ministerial Posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X