• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ ‌ಪೊಲೀಸರಿಂದ ಖೆಡ್ಡಾಗೆ ಬಿದ್ದ ಅಂತರರಾಜ್ಯ ಗಾಂಜಾ ಪೆಡ್ಲರ್

|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 26: ಇಲ್ಲಿನ ಡಿಸಿಐಬಿ ಘಟಕದ ಪೊಲೀಸರು ಗಾಂಜಾ ಸಾಗಿಸುತ್ತಿದ್ದ ಅಂತರ ರಾಜ್ಯ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದು, 120 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

ಮಹಾರಾಷ್ಟ್ರದ ಮೀರಜ್ ನಗರದ ಅಶ್ಪಾಕ್ ಮುಲ್ಲಾ ಬಂಧಿತ ಆರೋಪಿ. ಈತ ತೆಲಂಗಾಣ ರಾಜ್ಯದ ವಾರಂಗಲ್ ಮತ್ತು ಹೈದರಾಬಾದ್ ನಲ್ಲಿನ ಇಬ್ಬರು ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಯಲ್ಲಿ ಮಾರಾಟ ಮಾಡುತ್ತಿದ್ದ. ಮಹಾರಾಷ್ಟ್ರದ ಮೀರಜ್, ಸಾಂಗ್ಲಿ, ಚಿಕ್ಕೋಡಿ, ಬೆಳಗಾವಿ ಹಾಗೂ ಧಾರವಾಡದಲ್ಲಿ ಅಶ್ಫಾಕ್ ಮುಲ್ಲಾ ವಶಕ್ಕೆ ಗಾಂಜಾ ಪೂರೈಸುತ್ತಿದ್ದನು ಎಂದು ತಿಳಿದುಬಂದಿದೆ.

ಮೀನಿನ ಜೊತೆ ಬಂದಿದ್ದ ಗಾಂಜಾ; ಜಾಲ ಬೇಧಿಸಿದ ಮಾಗಡಿ ಪೊಲೀಸರ ಪ್ಲಾನ್ಮೀನಿನ ಜೊತೆ ಬಂದಿದ್ದ ಗಾಂಜಾ; ಜಾಲ ಬೇಧಿಸಿದ ಮಾಗಡಿ ಪೊಲೀಸರ ಪ್ಲಾನ್

ಸ್ವಿಫ್ಟ್ ಕಾರಿನಲ್ಲಿ 40 ಕೆ.ಜಿ. ಗಾಂಜಾ ಪಾಕೆಟ್ ಗಳು ಹಾಗೂ ಮೈಶಾಳ ಗ್ರಾಮದ ಪಂಪ್ ಹೌಸ್ ಹತ್ತಿರ ಇಡಲಾಗಿದ್ದ 78 ಕೆ.ಜಿ. ಗಾಂಜಾ ಪಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಸ್ವಿಫ್ಟ್ ಕಾರ್ ಮತ್ತು ದ್ವಿ ಚಕ್ರವಾಹನವನ್ನೂ ಡಿಸಿಐಬಿ ಪೊಲೀಸರು ಸೀಜ್ ಮಾಡಿದ್ದಾರೆ.

120 ಕೆ.ಜಿ. ಗಾಂಜಾ ಸೇರಿದಂತೆ ಸ್ವಿಫ್ಟ್ ಕಾರು ಮತ್ತು ದ್ವಿಚಕ್ರ ವಾಹನದ ಅಂದಾಜು 28.50 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಸಿಕ್ಕಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಿಗೆ ಅವರು ತಿಳಿಸಿದ್ದಾರೆ.

English summary
Belagavi DCIB unit police have arrested an interstate drug peddler who is carrying marijuana and seized 120 kg of marijuana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X