ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಶಾಸಕ ಉಮೇಶ್ ಕತ್ತಿ ವಿರುದ್ಧ ದಲಿತ ಸಂಘಟನೆ ಬಂದ್ ಗೆ ಕರೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಚಿಕ್ಕೋಡಿ, ಡಿಸೆಂಬರ್ 13: ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ವಿರುದ್ದ ದಲಿತ ಸಂಘಟನೆಗಳು ಗರಂ ಆಗಿವೆ, ದಲಿತರ ವಿರುದ್ಧ ಉಮೇಶ್ ಕತ್ತಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಕಾಂಗ್ರೆಸ್ ಸೇರ್ತಾರೆ ಎನ್ನುವ ಗಾಳಿಪಟಕ್ಕೆ ಉಮೇಶ್ 'ಕತ್ತಿ' ಏಟುಕಾಂಗ್ರೆಸ್ ಸೇರ್ತಾರೆ ಎನ್ನುವ ಗಾಳಿಪಟಕ್ಕೆ ಉಮೇಶ್ 'ಕತ್ತಿ' ಏಟು

ಲಿಂಗಾಯತ ಪ್ರತ್ಯೇಕ ಧರ್ಮ ಸಮಾವೇಶದಲ್ಲಿ ಉಮೇಶ್ ಕತ್ತಿ ಅವರು ಮಾತನಾಡುವ ಭರದಲ್ಲಿ ದಲಿತರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಚಿಕ್ಕೋಡಿ ದಲಿತ ಮುಖಂಡರು ಡಿಸೆಂಬರ್ 18ರಂದು ಬೆಳಗಾವಿ ಜಿಲ್ಲಾ ಬಂದ್ ಗೆ ಕರೆ ಮಾಡಿದ್ದಾರೆ.

Dalith leaders call for Belagavi band in protest against MLA Umesh Kathi

ಬಂದ್‌ಗೆ ಜಿಲ್ಲೆಯ ಕೆಲ ಸಂಘಟನೆಗಳು ಬೆಂಬಲ ಸೂಚಿಸಿವೆ. ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ವಿಬಾಗಧಿಕಾರಿ ಮೂಲಕ ವಿಧಾನ ಸಭೆ ಸ್ಪೀಕರ್ ಅವರಿಗೆ ಮನವಿ ಸಲ್ಲಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಶಾಸಕ ಕತ್ತಿ ವಿರುದ್ಧ ಜಾತಿ ನಿಂದನೆ 7pcr ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಮನವಿಯನ್ನು ದಲಿತ ಸಂಘಟನೆಗಳು ಹೇಳಿವೆ.

ಕತ್ತಿ, ಜಾರಕಿಹೊಳಿ, ಪಾಟೀಲ ಎಲ್ರೂ ತೆನೆ ಹೊರಲು ರೆಡಿ!ಕತ್ತಿ, ಜಾರಕಿಹೊಳಿ, ಪಾಟೀಲ ಎಲ್ರೂ ತೆನೆ ಹೊರಲು ರೆಡಿ!

ಚಿಕ್ಕೋಡಿ ಜಿಲ್ಲೆಯಾಗಿ ಘೋಷಿಸಲು ಮನವಿ
ಚಿಕ್ಕೋಡಿ ತಾಲ್ಲೂಕಿಗೆ ಜಿಲ್ಲೆಯ ಮಾನ್ಯತೆ ನೀಡುವಂತೆ ಒತ್ತಾಯಿಸಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಅಥಣಿ, ರಾಯಬಾಗ, ಹುಕ್ಕೇರಿ, ಚಿಕ್ಕೋಡಿ ತಾಲ್ಲೂಕುಗಳ ವಕೀಲರು ಕೋರ್ಟ್ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ಇಂದು ನಡೆದ ಜಿಲ್ಲಾ ಹೊರಾಟ ಸಮಿತಿಯ ಸಭೆಯಲ್ಲಿ ವಕೀಲರು ಈ ನಿರ್ಣಯಕ್ಕೆ ಬಂದಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಅವರು ಹೇಳಿದ್ದಾರೆ.

ಜಿಲ್ಲೆಗಾಗಿ ಕಳೆದ 40 ವರ್ಷದಿಂದ ಹೋರಾಟ ಮಾಡಲಾಗುತ್ತಿದೆ ಆದರು ಇಲ್ಲಿವರೆಗೆ ಜಿಲ್ಲಾ ಘೋಷಣೆ ಆಗಿಲ್ಲ ಎಂದ ಅವರು ಜಿಲ್ಲೆ ಘೋಷಣೆ ಆಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ.

English summary
Dalith leaders of chikkodi calls for Belagavi bandh on December 18 in protest against Hukkeri MLA Umesh Kathi for his loose talks about Daliths in Lingayatha meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X