ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಡನ್ ನಿಂದ ಬೆಳಗಾವಿಗೆ ಆಗಮಿಸಿದ ಮಹಿಳೆಗೆ ಕೋವಿಡ್ ಟೆಸ್ಟ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 22: ಇಂಗ್ಲೆಂಡ್ ದೇಶದಲ್ಲಿ ಕಂಡುಬಂದಿರುವ ರೂಪಾಂತರಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮತ್ತೆ ಜಗತ್ತಿಗೆ ಕೊರೊನಾ ಭೀತಿ ಆವರಿಸಿದೆ.

ಇದೇ ಸಂದರ್ಭದಲ್ಲಿ ಲಂಡನ್ ನಿಂದ ಭಾರತಕ್ಕೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಅದರಲ್ಲಿ ಬೆಳಗಾವಿಗೂ ಒಬ್ಬ ಮಹಿಳೆ ಆಗಮಿಸಿದ್ದು, ಮಂಗಳವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕರ್ನಾಟಕಕ್ಕೂ ರೂಪಾಂತರ ಕೊರೊನಾ ಸೋಂಕು ಹರಡುವುದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಯುಕೆಯ ರೂಪಾಂತರಿತ ಕೊರೊನಾ ವೈರಸ್ ಭಾರತದಲ್ಲಿ ಪತ್ತೆಯಾಗಿಲ್ಲ: ನೀತಿ ಆಯೋಗಯುಕೆಯ ರೂಪಾಂತರಿತ ಕೊರೊನಾ ವೈರಸ್ ಭಾರತದಲ್ಲಿ ಪತ್ತೆಯಾಗಿಲ್ಲ: ನೀತಿ ಆಯೋಗ

ಮೂವತ್ತೈದು ವರ್ಷದ ಮಹಿಳೆ ಸೋಮವಾರವಷ್ಟೇ ಬೆಂಗಳೂರಿನಿಂದ ಬೆಳಗಾವಿ ನಗರಕ್ಕೆ ಆಗಮಿಸಿದ್ದು, ಸರ್ಕಾರದ ಸೂಚನೆ ಬಂದ ಬಳಿಕ ಮಂಗಳವಾರ ಮಹಿಳೆಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

Covid-19 Test For A Woman Who Arrived From London To Belagavi

ಬೆಳಗಾವಿ ನಗರದ ಖಡೇಬಜಾರ್ ನಲ್ಲಿರುವ ಮಹಿಳೆ ಮನೆಯಿದ್ದು, ಇಂದು ಬೆಳಗ್ಗೆ ಮಹಿಳೆ ಮನೆಗೆ ತೆರಳಿ ಕೋವಿಡ್ ತಪಾಸಣೆ ನಡೆಸಿರುವ ಆರೋಗ್ಯ ಅಧಿಕಾರಿಗಳು. ಮಹಿಳೆ ಸೇರಿದಂತೆ ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮೇಲೆ ತೀವ್ರ ನಿಗಾ ಇಡಲಾಗಿದೆ.

ಮಹಿಳೆಯ ಮನೆಯಲ್ಲೇ ಕುಟುಂಬಸ್ಥರಿಗೂ ಕ್ವಾರೆಂಟೈನ್ ಮಾಡಿದ್ದು, ಬೆಳಗಾವಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿದೇಶದಿಂದ ಬಂದವರಿಗೆ ಜಿಲ್ಲೆಯಾದ್ಯಂತ ಶೋಧ‌ ನಡೆಸುತ್ತಿದೆ.

English summary
Coronavirus virus infection is wide spread in England, and the coronavirus fears the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X