ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ಇಲಾಖೆಯಿಂದ ಶೀಘ್ರವೇ ಕೊರಿಯರ್ ಸೇವೆ; ಡಿಸಿಎಂ ಸವದಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 26: ಅಂತರರಾಜ್ಯ ಬಸ್‌ಗಳ ಸೇವೆ ಆರಂಭಿಸಲು‌ ಅನೇಕ ರಾಜ್ಯಕ್ಕೆ ಪತ್ರ ಬರೆಯಲಾಗಿದೆ. ಆಂಧ್ರಪ್ರದೇಶ ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರವೇ ಆಂಧ್ರಪ್ರದೇಶ - ಕರ್ನಾಟಕದ ಮಧ್ಯೆ ಬಸ್ ಸಂಚಾರ ಪ್ರಾರಂಭವಾಗಲಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ, ಗೋವಾ, ತಮಿಳುನಾಡು ರಾಜ್ಯಗಳಿಂದ ಒಪ್ಪಿಗೆ ಬರಬೇಕಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ತೀವ್ರತೆ ಇರುವುದರಿಂದ ಮಹಾರಾಷ್ಟ್ರ ರಾಜ್ಯಕ್ಕೆ ಬಸ್‌ಗಳನ್ನು ಓಡಿಸುವ ಬಗ್ಗೆ ಚಿಂತನೆ ಮಾಡಿಲ್ಲ ಎಂದರು.

Courier Service Soon To Launch From Transport Department

ಕೆಎಸ್ಆರ್‌ಟಿಸಿ ಪಾರ್ಸೆಲ್ ಸೇವೆಗೆ ಹೆಸರು ಸೂಚಿಸಿ ಬಹುಮಾನ ಗೆಲ್ಲಿ

ಸಾರಿಗೆ ಇಲಾಖೆ ವತಿಯಿಂದ ಕೊರಿಯರ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಕೊರಿಯರ್ ಸೇವೆ ಆರಂಭವಾಗಲಿದೆ. ಈವರೆಗೆ ಖಾಸಗಿಯವರೇ ಕೊರಿಯರ್ ಸೇವೆ ಒದಗಿಸುತ್ತಿದ್ದರು. ನಮ್ಮ ಸಾರಿಗೆ ಬಸ್‌ಗಳು ಪ್ರತಿ ರಾಜ್ಯ, ಹಳ್ಳಿಗಳಿಗೆ ಹೋಗುತ್ತವೆ. ಕೊರಿಯರ್ ಸೇವೆ ಆರಂಭದಿಂದ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದರು.

English summary
"We have planned to launch a courier service from the Transport Department" informed DCM Lakshmana Savadi in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X