ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌಂದರ್ಯ ವರ್ಧಕ, ಕೂದಲು ಕಸಿ ಚಿಕಿತ್ಸೆಗೆ ನೋಂದಣಿ ಕಡ್ಡಾಯ

By Ananthanag
|
Google Oneindia Kannada News

ಬೆಳಗಾವಿ, ನವೆಂಬರ್ 24: ಸೌಂದರ್ಯ ವರ್ಧಕ ಮತ್ತು ಕೂದಲು ಕಸಿ ಚಿಕಿತ್ಸೆ ನೀಡುವವರು ಕೆಪಿಎಂಇ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್ ಕುಮಾರ್ ಸೂಚನೆ ನೀಡಿದರು.

ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ವೇಳೆ ಅವರು ಮಾತನಾಡಿ, ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ಕ್ಲಿನಿಕ್ ಪ್ರಾರಂಭಿಸಿ ಕೂದಲು ಕಸಿ ಮಾಡುತ್ತಿರುವ ಬಗ್ಗೆ ಚರ್ಮರೋಗ, ಕುಷ್ಠರೋಗ ತಜ್ಞರು ಹಾಗೂ ಗುಪ್ತ ರೋಗಗಳ ತಜ್ಞರ ಸಂಘದವರು ದೂರು ನೀಡಿದ್ದಾರೆ. ಅಧಿಕೃತ ಮತ್ತು ಅನರ್ಹರು ಚಿಕಿತ್ಸೆ ನೀಡುವುದನ್ನು ತಡೆಹಿಡಿಯಲು ಕೆಪಿಎಂಇ ಕಾಯ್ದೆಯಡಿ ನೋಂದಣಿ ಕಡ್ಡಾಯವಾಗಿದೆ ಎಂದರು.[1.25ಲಕ್ಷ ಸಂಬಳಕ್ಕೂ ವಿಶೇಷ ವೈದ್ಯರು ಸೇವೆಗೆ ಸಿಗುತ್ತಿಲ್ಲ]

Cosmetic, hair transplantation for the treatment of compulsory registration

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಮೂರು ತಿಂಗಳ ಒಳಗೆ ಕಡ್ಡಾಯವಾಗಿ ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರಶ್ನೆ ಕೇಳಿದ ಚಿಂತಾಮಣಿ ಶಾಸಕ ಎಂ.ಕೃಷ್ಣರೆಡ್ಡಿ, ನಮ್ಮ ಕ್ಷೇತ್ರದಲ್ಲಿ ಅನಧಿಕೃತ ವ್ಯಕ್ತಿಗಳು ಚಿಕಿತ್ಸೆ ನೀಡಿ ತೊಂದರೆಯಾಗಿರುವುದನ್ನು ಸದನದ ಗಮನಕ್ಕೆ ತಂದರು. ಅಂತಹವರ ವಿರುದ್ಧ ನಿರ್ದಿಷ್ಟ ದೂರು ನೀಡುವಂತೆ ಸಚಿವರು ತಿಳಿಸಿದರು.

ಮಧ್ಯಪ್ರವೇಶಿಸಿದ ಶಾಸಕ ಸಿ.ಟಿ.ರವಿ, ನಿಮಗೆ ಕೂದಲಿಲ್ಲ. ಹಾಗಾಗಿ ನಿಮಗೆ ಚಿಂತೆಯಿಲ್ಲ, ಕೂದಲು ಇರುವವರಿಗೆ ಅದರ ಚಿಂತೆ ಎಂದು ಲೇವಡಿ ಮಾಡಿದರು. ಪ್ರತಿಕ್ರಿಯಿಸಿದ ಸಚಿವ ರಮೇಶ್‍ಕುಮಾರ್, ನನಗೆ ಇಲ್ಲದ ಕೂದಲನ್ನು ನಿಮ್ಮ ಗಡ್ಡದಲ್ಲಿ ಅಂಟಿಸಲಾಗಿದೆ ಎಂದು ತಿರುಗೇಟು ನೀಡಿದರು. ಸದನ ಕೆಲ ಹೊತ್ತು ನಗೆಗಡಲಲ್ಲಿ ತೇಲಿತು.

English summary
Cosmetic, hair transplantation for the treatment of compulsory registration acroding Karnataka private medical establishment act says health minister ramesh kumar in belagavi winter session
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X