ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಗೆ ಬಂದು ತಲುಪಿದ ಕೊರೊನಾ ಲಸಿಕೆ: ಮಾರ್ಗಸೂಚಿ ಪ್ರಕಾರ ವಿತರಣೆಗೆ ಕ್ರಮ

|
Google Oneindia Kannada News

ಬೆಳಗಾವಿ, ಜನವರಿ 13: ಬಹು ನಿರೀಕ್ಷಿತ ಕೋವಿಡ್-19 ಲಸಿಕೆಗಳು ಬುಧವಾರ (ಜ.13) ನಸುಕಿನ ಜಾವ ಬೆಳಗಾವಿ ನಗರಕ್ಕೆ ಬಂದು ತಲುಪಿದವು.

ಪುಣೆಯ ಸೇರಂ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್ ಲಸಿಕೆಗಳ ಬಾಕ್ಸ್ ಗಳನ್ನು ಹೊತ್ತ ವಾಹನವು ಕೊಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಬೆಲಗಾವಿ ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋಗೆ ಆಗಮಿಸಿತು.

ಕರ್ನಾಟಕಕ್ಕೆ ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್ಕರ್ನಾಟಕಕ್ಕೆ ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ವ್ಯಾಕ್ಸಿನ್ ಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡರು. ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಿಗೆ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ಕೂಡ ನೀಡಿದರು.

Corona Vaccine Arrived To Belagavi City: Welcomed By District Collector

ಬೆಳಗಾವಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಿಗೆ ವಿತರಿಸಲು ನೀಡಲಾಗಿರುವ ಒಟ್ಟಾರೆ 1.47 ಲಕ್ಷ ಲಸಿಕೆಗಳು ಬೆಳಗಾವಿಯಲ್ಲಿ ಸಂಗ್ರಹಿಸಲಾಗಿದೆ. ಒಟ್ಟು 13 ಬಾಕ್ಸ್ ಗಳಲ್ಲಿ ಬಂದಿರುವ ಲಸಿಕೆಗಳ ಪೈಕಿ ಕೆಲವು ಬಾಕ್ಸ್ ಗಳನ್ನು ಬಾಗಲಕೋಟೆಯಲ್ಲಿರುವ ಪ್ರಾದೇಶಿಕ ಲಸಿಕಾ ಘಟಕಕ್ಕೆ ಕಳಿಸಲಾಗುತ್ತಿದ್ದು, ಪೂರ್ವ ನಿಗದಿಯಂತೆ ಜ.16 ರಿಂದ ಲಸಿಕಾ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಆರ್.ಸಿ.ಎಚ್ ಡಾ.ಆರ್.ಐ.ಗಡಾದ ತಿಳಿಸಿದ್ದಾರೆ.

ಬಾಗಲಕೋಟೆಯ ಪ್ರಾದೇಶಿಕ ಲಸಿಕಾ ಘಟಕದ ಮೂಲಕ ಬಾಗಲಕೋಟೆ, ವಿಜಯಪುರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಲಸಿಕೆ ವಿತರಣೆ ನಡೆಯಲಿದೆ. ಅದೇ ರೀತಿ ಬೆಳಗಾವಿ ಘಟಕದ ಮೂಲಕ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಲಸಿಕೆಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

Corona Vaccine Arrived To Belagavi City: Welcomed By District Collector

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
The highly anticipated Covid-19 vaccines arrived in Belagavi on Wednesday (Jan. 13).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X