ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಪೆಕ್ಟ್: ಬೆಳಗಾವಿಯಲ್ಲಿ 10 ಲಕ್ಷ ಕಲ್ಲಂಗಡಿ ನಾಶ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಎಪ್ರಿಲ್ 02: ಕೊರೊನಾ ವೈರಸ್ ಹೆಮ್ಮಾರಿಯಿಂದ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಹೆಚ್ಚಿನ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪ್ರತಿಯೊಬ್ಬ ರೈತರಿಗೂ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ.

ಬೆಳಗಾವಿ ಚಿಕ್ಕೋಡಿ ಭಾಗದ ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದ ಸಿದ್ದೇಶ್ವರ ಸನದಿ ಎಂಬ ಯುವ ರೈತ ನೌಕರಿ ಬಿಟ್ಟು ಕೃಷಿ ಯಲ್ಲೇ ಏನಾದರೂ ಸಾಧಿಸಬೇಕೆಂದು ಲಕ್ಷಾಂತರ ರೂ. ಸಾಲ ಮಾಡಿ ತನ್ನ ಮೂರು ಎಕರೆಯಲ್ಲಿ ಕಲ್ಲಂಗಡಿ ಹಾಗೂ ಎರಡು ಎಕರೆ ಕುಂಬಳಕಾಯಿ ಹಾಗೂ ಹಿರೇಕಾಯಿ ಬೆಳೆ ಬೆಳೆದಿದ್ದಾರೆ.

ಕಲ್ಲಂಗಡಿ ಬೆಳೆ ಫಲವತ್ತಾಗಿ ಬೆಳೆದು ಸುಮಾರು 80-90 ಟನ್ ಹಣ್ಣು ಬಂದಿದೆ. ಕೊರೊನಾ ವೈರಸ್ ಎಫೆಕ್ಟ್ ನಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಾಟ ಮತ್ತು ಮಾರುಕಟ್ಟೆ ಇಲ್ಲದೆ ರೈತ ಕಂಗಾಲಾಗಿದ್ದಾನೆ.

Corona Effect: 10 Watermelon Destroyed In Belagavi

ಹಣ್ಣು ನಾಶವಾಗಬಾರದೆಂದು ಸುತ್ತ ಮುತ್ತ ಗ್ರಾಮಸ್ಥರಿಗೆ ಉಚಿತವಾಗಿ ಕೊಟ್ಟಿದ್ದಾರೆ. ಅಲ್ಲದೆ ಇನ್ನೂ ಉಳಿದ ಸುಮಾರು 40-50 ಟನ್ ಕಲ್ಲಂಗಡಿ ಹಣ್ಣನ್ನು ನೆಲಕ್ಕೆ ಎಸೆದು ನಾಶ ಪಡಿಸುತ್ತಿದ್ದಾರೆ. ಸದ್ಯ ರೈತನಿಗೆ 10 ರಿಂದ 12 ಲಕ್ಷ ರುಪಾಯಿ ನಷ್ಟ ಅನುಭವಿಸಿದ್ದಾನೆ.

Corona Effect: 10 Watermelon Destroyed In Belagavi

ನಿನ್ನೆ ಸರ್ಕಾರ ರೈತರ ಬೆಳೆಗೆ ಮಾರುಕಟ್ಟೆಗೆ ಅವಕಾಶ ಇರುತ್ತದೆ ಎಂದು ಹೇಳಿದೆ, ಆದರೆ ಹಣ್ಣು ಸಾಗಿಸಲು ಯಾವುದೇ ವಾಹನಗಳು ಬರುತ್ತಿಲ್ಲ. ಸರ್ಕಾರ ರೈತರ ಬೆಳೆಗೆ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೆಕೆಂದು ಆಗ್ರಹಿಸಿದ್ದಾರೆ. ಸರ್ಕಾರ ರೈತರು ಖರ್ಚು ಮಾಡಿದ ಹಣವನ್ನಾದರೂ ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

English summary
Belagavi Farmer Throwing watermelon fruit to the ground and destroying it. The present farmer has suffered a loss of Rs 10 to 12 lakh .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X